ವಿಕಿಪೀಡಿಯಾ ಮೂಲಕ ಕನ್ನಡದಲ್ಲಿ ಜಾಗತಿಕ ಜ್ಞಾನ ಪ್ರಸರಣ: ಡಾ| ಪವನಜ ಆಶಯ
Team Udayavani, Jul 14, 2017, 3:55 AM IST
ಮೂಡಬಿದಿರೆ: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿ ನಲ್ಲಿ ಜಾಗತಿಕ ಜ್ಞಾನವನ್ನು ನಮ್ಮೆಡೆಗೆ ತರಬೇಕಾಗಿದೆ. ಕನ್ನಡದ ವಿಕಿಪೀಡಿಯಾ ಈ ಕಾರ್ಯಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ ಕಾರ್ಯಕ್ರಮ ಅಧಿಕಾರಿ, ಕನ್ನಡ ವಿಕಿಪೀಡಿಯಾ ಪ್ರತಿನಿಧಿ, ವಿಶ್ವಕನ್ನಡ.ಕಾಂ ಸಂಪಾದಕ ಡಾ| ಪವನಜ ಹೇಳಿದರು.
ಆಳ್ವಾಸ್ ಕಾಲೇಜಿನ ವತಿಯಿಂದ, ಗುರುವಾರ ದೇಶದ ಮೊದಲ “ವಿಕಿ ಪೀಡಿಯಾ ಸಂಘ’ವಾಗಿ ರೂಪಿಸಲ್ಪಟ್ಟಿ ರುವ ಕನ್ನಡದ “ವಿಕಿಪೀಡಿಯಾ ಅಸೋಸಿ ಯೇಶನ್’ನ ಉದ್ಘಾಟನೆ ಮತ್ತು ಮೂರು ದಿನಗಳ ಪರ್ಯಂತ ನಡೆಯುವ ವಿಕಿಪೀಡಿಯಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ವಿಕಿಪೀಡಿಯಾದಲ್ಲಿ ಮಾಹಿತಿ ಸಾಹಿತ್ಯ ನಿರ್ಮಾಣ ಮಾಡುವಂತೆಯೇ ವಿಜ್ಞಾನ ತಂತ್ರಜ್ಞಾನದ ಲೇಖನಗಳೂ ಅತಿ ಅಗತ್ಯವಾಗಿ ಬರಬೇಕು. ವಿಶ್ವಕೋಶ ಶೈಲಿಯ ಲೇಖನಗಳು ವಿಕಿಪೀಡಿಯಾಕ್ಕೆ ಬೇಕಾಗಿವೆ. ಜ್ಞಾನದ ಗ್ರಾಹಕರಾಗಿರುವ ವಿದ್ಯಾರ್ಥಿಗಳು ಈ ಮಾಧ್ಯಮದ ಸಮರ್ಥ ಬಳಕೆ ದಾರರೂ ಪೂರೈಕೆದಾರರೂ ಆಗಿ ಕನ್ನಡ ಸಮೃದ್ಧವಾಗಿ ಬೆಳೆಯಲು ತಮ್ಮ ಕೊಡುಗೆ ನೀಡಬೇಕಾಗಿದೆ ಎಂದರು.
ಸರದಿಯಲ್ಲಿವೆ ಕಾಲೇಜುಗಳು
ಆಳ್ವಾಸ್ ಕಾಲೇಜಿನ ಕನ್ನಡ ವಿಕಿ ಪೀಡಿಯಾ ಅಸೋಸಿಯೇಶನ್ ರಾಜ್ಯ ದಲ್ಲಿ ಮಾತ್ರವಲ್ಲ ದೇಶದಲ್ಲೇ ಮೊದಲ ವಿಕಿಪೀಡಿಯಾ ಅಸೋಸಿಯೇಶನ್ ಆಗಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್, ಸುರತ್ಕಲ್ ಗೋವಿಂದ ದಾಸ್, ಉಜಿರೆಯ ಎಸ್‌ಡಿಎಂ ಕಾಲೇಜುಗಳೂ ವಿಕಿಪೀಡಿಯಾ ಅಸೋಸಿ ಯೇಶನ್ ರೂಪಿ ಸಲು ಸಿದ್ಧತೆನಡೆಸುತ್ತಿವೆ ಎಂದು ತಿಳಿಸಿದರು.
ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಚಿಂತಕ, ಮೂಡಬಿದಿರೆಯ ಪ್ರಭು ಆಸ್ಪತ್ರೆಯ ಡಾ| ಕೃಷ್ಣ ಮೋಹನ್ ಅವರು ವಿಕಿಪೀಡಿಯಾ ಅಸೋಸಿ ಯೇಶನ್ ಉದ್ಘಾಟಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್ ಅಧ್ಯಕ್ಷತೆ ವಹಿಸಿ ದ್ದರು. “ಬೆಂಕಿ, ಚಕ್ರ ಕಂಡುಹಿಡಿದ ಅನಾಮಿಕ ಜ್ಞಾನಿಗಳು ಜ್ಞಾನ ಯಾರ ಸೊತ್ತೂ ಅಲ್ಲ, ಅದಕ್ಕೆ ವಾರಸುದಾರರೂ ಇಲ್ಲ. ಎಂದು ಪರೋಕ್ಷವಾಗಿ ಸಾರಿದ್ದಾರೆ. ಕೆಲವೇ ಕೆಲವರ ಕಪಿಮುಷ್ಟಿಯಿಂದ ಜ್ಞಾನವನ್ನು ಮುಕ್ತಿಗೊಳಿಸುವ ಕ್ರಾಂತಿ, ಸಾಹಸ ವಿಕಿಪೀಡಿಯಾದಿಂದಾಗುತ್ತಿದೆ. ಯುವಜನರು ಇದರೊಂದಿಗೆ ಕೈ ಜೋಡಿಸಬೇಕು’ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕರಾವಳಿ ವಿಕಿ ಮೀಡಿಯನ್‌ನ ಧನಲಕ್ಷ್ಮೀ ಅವರು ಮಾತನಾಡಿ, ವಿಕಿಪೀಡಿಯಾ ಸೇರಿ ದಂತೆ ವಿವಿಧ ಮಾಧ್ಯಮಗಳಲ್ಲಿ ಕ್ಷೀಣವಾಗಿ ತೋರು ತ್ತಿರುವ ಮಹಿಳೆಯರ ಪಾಲ್ಗೊಳ್ಳು ವಿಕೆಯ ಚಿತ್ರಣ ಬದಲಾಗ ಬೇಕಾಗಿದೆ ಎಂದರು.
ವಿಕಿಪೀಡಿಯಾ ಅಸೋಸಿಯೇಶನ್ ಸಂಯೋಜಕ, ಅಶೋಕ್ ಕೆ.ಜಿ. ಉಪಸ್ಥಿತ ರಿದ್ದರು. ಆಳ್ವಾಸ್ ಪತ್ರಿ ಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಗೌರಿ ಸ್ವಾಗತಿಸಿ ನಿರೂಪಿಸಿದರು. ವಿಭಾಗ ಮುಖ್ಯಸ್ಥೆ ಡಾ| ಮೌಲ್ಯಾ ಜೀವನ್‌ರಾಂ ವಂದಿಸಿದರು. ಪತ್ರಿಕೋದ್ಯಮ, ಕನ್ನಡ ಭಾಷಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.