Alva’s ವಿರಾಸತ್‌ಗೆ ಇಂದು ವೈಭವದ ಚಾಲನೆ; ಮೂಡುಬಿದಿರೆಯಲ್ಲಿ ಸಂಭ್ರಮ
ಡಿ.10ರಿಂದ 15ರ ವರೆಗೆ 8 ಮೇಳಗಳ ಮೆರುಗಿನೊಂದಿಗೆ ಸಾಂಸ್ಕೃತಿಕ ವೈವಿಧ್ಯ
Team Udayavani, Dec 10, 2024, 6:55 AM IST
ಮೂಡುಬಿದಿರೆ: ಎಂಟು ಮೇಳಗಳ ಹಿಮ್ಮೇಳ, ಸಂಗೀತ-ನೃತ್ಯ ವೈವಿಧ್ಯವನ್ನೊಳಗೊಂಡ ಹಚ್ಚಡ ಮೇಳೈಸಿಕೊಂಡು, ವಿದ್ಯಾಗಿರಿಯ ಮೈತುಂಬ ಕಲಾವೈಭವ ಹೊತ್ತು “ಆಳ್ವಾಸ್ ವಿರಾಸತ್’ ಸಾಂಸ್ಕೃತಿಕ ರಥ ಹೊರಡಲು ಸಜ್ಜಾಗಿದೆ!
ಇನ್ನು ಐದು ದಿನಗಳ ಕಾಲ ಆಳ್ವಾಸ್ ವಿದ್ಯಾಗಿರಿಯ ಆವರಣದ ಉದ್ದಗಲಕ್ಕೆ ವೈವಿಧ್ಯಮಯ ವಿಷಯಗಳನ್ನು ಹುಡುಕಿ ಬರುವ ಕಂಗಳಿಗೆ ಈ ವಿರಾಸತ್ ಎನ್ನುವ ರಥ ಭರಪೂರ ಮನರಂಜನೆ, ಖುಷಿ, ಮಾಹಿತಿಯ ಷಡ್ರಸೋಪೇತ ಭೋಜನವನ್ನು ಉಣಿಸಲಿದೆ.
ಆಳ್ವಾಸ್ ವಿರಾಸತ್ ಡಿ.10ರ ಸಂಜೆ ಚಾಲನೆ ಪಡೆದುಕೊಂಡು, 15ರ ರಾತ್ರಿ ವರೆಗೆ ನಡೆಯಲಿದೆ.
ಡಿ.10ರಂದು ಸಂಜೆ 5.30ರಿಂದ 1 ಗಂಟೆ ಕಾಲ ಉದ್ಘಾಟನ ಸಭಾ ಕಾರ್ಯಕ್ರಮವು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸಹಿತ ಗಣ್ಯರು ಉಪಸ್ಥಿತರಿರುವರು.
ಆ ಬಳಿಕ 150ಕ್ಕಿಂತಲೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳ 4,000ಕ್ಕೂ ಮಿಕ್ಕಿದ ಕಲಾವಿದರಿಂದ ಕಣ್ಮನ ಸೆಳೆಯುವ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8.30ರಿಂದ ಸಾಂಸ್ಕೃತಿಕ ರಥ ಸಂಚಲನ ನಡೆಯಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ರಥಾರತಿ ಬೆಳಗಲಿದ್ದಾರೆ.
11ರಂದು ಪ್ರಶಸ್ತಿ ಪ್ರದಾನ
ಡಿ.11ರಂದು ಸಂಜೆ 5.45ರಿಂದ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. 6.35ರಿಂದ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು. 7.45ರಿಂದ ಗುಜರಾತ್‌ನ ರಂಗ್ ಮಲಹರ್ ದಿ ´ೋಕ್ ಆರ್ಟ್ಸ್ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ದಿನವೂ ಸಾಂಸ್ಕೃತಿಕ ವೈವಿಧ್ಯ
ಡಿ.12ರ ಸಂಜೆ 6ರಿಂದ 8ರ ವರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರಿನ ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರಿನ ಸನಾತನ ನಾಟ್ಯಾಲಯ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ, ಮಂಗಳೂರಿನ ಗಾನ ನೃತ್ಯ ಅಕಾಡೆಮಿ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ನೃತ್ಯವೈವಿಧ್ಯ, 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ಇರಲಿದೆ.
ಡಿ.13ರಂದು ಸಂಜೆ 6ರಿಂದ ನೀಲಾದ್ರಿ ಕುಮಾರ್ ಮತ್ತು ತಂಡದಿಂದ “ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ ಕೋಲ್ಕತಾದ ಆಶೀಮ್ ಬಂಧು ಚಟರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ “ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ.14ರಂದು ಸಂಜೆ 6ರಿಂದ ಚೆನ್ನೈ ಸ್ಟೆಕೇಟೋದ ಕಲಾವಿದರಿಂದ “ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ. ಡಿ.15ರಂದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ಎಲ್ಲ ಮೇಳಗಳು, ಪ್ರದರ್ಶನ ಮಾರಾಟವನ್ನು ಆಸ್ವಾದಿಸಬಹುದು.
ಪ್ರವೇಶ ಉಚಿತ
ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತ. ಕಾರ್ಯಕ್ರಮ ಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ. ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ.
ವಿದ್ಯಾಗಿರಿಯಲ್ಲಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸಹಿತ ಸುತ್ತಲಿನ ಆವರಣದಲ್ಲಿ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ. ತುಳುನಾಡಿನ ಗುತ್ತಿನ ಮನೆಯ ಪರಿ ಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣವನ್ನು ಸಜ್ಜುಗೊಳಿ ಸಲಾಗಿದ್ದು, ಈ ಬಾರಿ 650 ಮಳಿಗೆಗಳಿವೆ. ಸುಮಾರು 2.5 ಲಕ್ಷಕ್ಕೂ ಅಧಿಕ ಹೂವಿನ ಗಿಡಗಳು, 500ಕ್ಕೂ ಹೆಚ್ಚು ಕಲಾ ಕೃತಿ ಗಳು ವಿರಾಸತ್ ರಾಜಮಾರ್ಗದ ಅಂದವನ್ನೂ ಹೆಚ್ಚಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.