ಪ್ರಜ್ವಲಿಸಲಿ ಸಂಸ್ಕಾರ ಜ್ಯೋತಿ: ಸುಮಿತ್ರಾ ಮಹಾಜನ್ ಹಾರೈಕೆ
Team Udayavani, Nov 26, 2019, 1:30 AM IST
ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಬೆಳಗುವ ಲಕ್ಷ ಲಕ್ಷ ದೀಪಗಳಂತೆ ನಮ್ಮ ಅಂತರಾಳದಲ್ಲಿ ಸಂಸ್ಕಾರವೆಂಬ ಜ್ಯೋತಿ ಪ್ರಜ್ವಲಿಸಿ ತನಗೆ ಮತ್ತು ಸಮಾಜಕ್ಕೆ ಒಳಿತನ್ನು ಬಯಸುವುದೇ ಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಆಶಿಸಿದರು.
ಲಕ್ಷದೀಪೋತ್ಸವ ಸಂದರ್ಭ ಅಮೃತ ವರ್ಷಿಣಿ ಸಭಾಭವನದಲ್ಲಿ ಸೋಮವಾರ ನಡೆದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಮತ್ತು ಕರ್ತವ್ಯದಲ್ಲಿ ನಿವೃತ್ತಿ ಎಂಬುದಿಲ್ಲ. ನಮಗಾಗಿ ಮಾತ್ರವಲ್ಲದೆ ಸಮಾಜಕ್ಕಾಗಿಯೂ ಕಾರ್ಯ ನಿರ್ವಹಿಸುವ (ಬೀ ಗುಡ್ ಡೂ ಗುಡ್) ತಣ್ತೀವನ್ನು ಧರ್ಮ ಪ್ರತಿಪಾದಿಸುತ್ತದೆ. ಭಾರತೀಯರಾದ ನಮಗೆ ಸಂಸ್ಕೃತಿಯೂ ಇದೆ, ಸಂಸ್ಕಾರವೂ ಇದೆ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ತಾನು ಮಾತ್ರವಲ್ಲದೆ ಇನ್ನೊಬ್ಬನನ್ನೂ ಪರಿವ ರ್ತಿಸಲು ಸಾಧ್ಯ ಎಂದವರು ಹೇಳಿದರು.
ಭಾರತೀಯತೆ 4 ಎಸ್‌ಗಳಲ್ಲಿ ಅಡಕ
ಅಧ್ಯಕ್ಷತೆ ವಹಿಸಿದ್ದ ಇಸ್ಕಾನ್‌ನ ವಿದ್ವಾಂಸ ಗೌರ್ ಗೋಪಾಲದಾಸ್ ಮಾತನಾಡಿ, ಭಾರತ 4-ಎಸ್ (ಸ್ಮಾರ್ಟ್, ಸೇವಿಂಗ್, ಸ್ಪೆಂಡಿಂಗ್)ಗಳು ಒಳಗೊಂಡು, ಸ್ಪಿರಿಚ್ಯು ವಾಲಿಟಿ- ಆಧ್ಯಾತ್ಮಿಕತೆಯ ಮೂಲಕ ಗುರುತಿಸಿಕೊಂಡಿದೆ ಎಂದು ಬಣ್ಣಿಸಿದರು.
ವಿದೇಶೀಯರು ಕೂಡ ಭಾರತೀಯ ಧರ್ಮ, ಜೀವನ ಶೈಲಿ, ಕಲೆ, ಸಂಸ್ಕೃತಿ ಮತ್ತು ಅಧ್ಯಾತ್ಮದಿಂದ ಆಕರ್ಷಿತರಾಗಿ ಶಾಂತಿ-ನೆಮ್ಮದಿ ಪಡೆಯಲು ಭಾರತಕ್ಕೆ ಬರುತ್ತಾರೆ. ಪರಿವರ್ತನೆಗಿರುವ ದಾರಿ ಅಧ್ಯಾತ್ಮಿಕ ಚಿಂತನೆಯೊಂದೇ ಎಂಬುದು ಅವರಿಗೆ ತಿಳಿದಿದೆ. ಆಧ್ಯಾತ್ಮವೇ ಭಾರತೀಯತೆಯ ಹೆಗ್ಗುರುತು ಮತ್ತು ವಿಶೇಷತೆ ಎಂದು ಅವರು ಹೇಳಿದರು.
ಉಪನ್ಯಾಸ
ಜೀವನ ಮತ್ತು ಧರ್ಮದ ವಿಚಾರವಾಗಿ ಮೈಸೂರಿನ ಫೋಕಸ್ ಅಕಾಡೆಮಿಯ ಸಿಇಒ ಡಿ.ಟಿ. ರಾಮಾನುಜಮ್ ಉಪನ್ಯಾಸ ನೀಡಿದರು. ರಾಜಕೀಯ ಮತ್ತು ಭಾರತೀಯದ ವಿಚಾರವಾಗಿ ಮಂಗಳೂರಿನ ಕದ್ರಿ ನವನೀತ ಶೆಟ್ಟಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ವಿಚಾರವಾಗಿ ಬೊಳುವಾರ್ ಮಹಮ್ಮದ್ ಕುಂಞಿ ಉಪನ್ಯಾಸ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಸುರೇಂದ್ರ ಕುಮಾರ್, ಪ್ರೊ| ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಪನ್ಯಾಸಕ ಸುನಿಲ್ ಪಂಡಿತ್ ಸಮ್ಮಾನ ಪತ್ರ ವಾಚಿಸಿದರು.
ಕೇಶವ ಗೌಡ ಬೆಳಾಲು ವಂದಿಸಿದರು. ಡಾ| ಶ್ರೀಧರ ಭಟ್ ನಿರ್ವಹಿಸಿದರು.
ಲಕ್ಷದೀಪೋತ್ಸವದ ಅಂಗವಾಗಿ ಮೂರನೇ ದಿನ ಲಲಿತೋದ್ಯಾನ ಉತ್ಸವ ಮತ್ತು ರಥೋತ್ಸವ ರವಿವಾರ ನಡೆಯಿತು.
ಇಂದು ಸಾಹಿತ್ಯ ಸಮ್ಮೇಳನ
ನ. 26ರಂದು ಸಂಜೆ 5ರಿಂದ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನ ನಡೆಯಲಿದ್ದು, ಡಿಸಿಎಂ ಡಾ| ಅಶ್ವತ್ಥನಾರಾಯಣ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು. ಕುಮಟಾದ ಸಾಹಿತಿ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡುವರು.
ಡಾ| ಹೆಗ್ಗಡೆ ಹುಟ್ಟುಹಬ್ಬ ತ್ರಿವೇಣಿ ಸಂಗಮ ಸಂಭ್ರಮ
ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಡಾ| ಹೆಗ್ಗಡೆಯವರ ಜನ್ಮದಿನ ಮತ್ತು ಸರ್ವಧರ್ಮ ಸಮ್ಮೇಳನ -ಈ ತ್ರಿವೇಣಿ ಸಂಗಮ ಧರ್ಮಸ್ಥಳದಲ್ಲಿ ಸೋಮವಾರ ವಿಶೇಷವಾಗಿತ್ತು. ಆಪ್ತರು ಮತ್ತು ಅಭಿಮಾನಿಗಳು ಡಾ| ಹೆಗ್ಗಡೆಯವರಿಗೆ ಫಲಪುಷ್ಪ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಜನ್ಮದಿನದ ಶುಭಾಶಯ ಕೋರಿದರು. ಬೆಳ್ತಂಗಡಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರು ಹೆಗ್ಗಡೆಯವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದರು.
ಇಂದು ಲಕ್ಷ ದೀಪೋತ್ಸವ
ಮಂಗಳವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದೆ. ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಸ್ವಾಮಿಯ ಕಣ್ತುಂಬಿಕೊಳ್ಳಲು ಆಗಮಿಸುವ ನಿರೀಕ್ಷೆಯಿದೆ. ಅನೇಕ ಮಂದಿ ಪಾದಯಾತ್ರೆಯಲ್ಲೂ ಬಂದು ಸೇರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.