ಇವರು ಸ್ವತ್ಛತೆಗೆ ಕೈಗೂಡಿಸಿದರು ನಾವು ಕೈಜೋಡಿಸೋಣ


Team Udayavani, Apr 1, 2017, 1:00 PM IST

kaijodisona.jpg

ಕೂಳೂರು: ಸ್ವತ್ಛ ಭಾರತ ಅಭಿಯಾನದಂತಹ ಉದಾತ್ತ ಧ್ಯೇಯಕ್ಕೆ ಇಡೀ ದೇಶವೇ ಓಗೊಟ್ಟಿದೆ. ರಾಮಕೃಷ್ಣ ಮಿಷನ್‌ನಂಥ ಹಲವು ಸಂಘ ಸಂಸ್ಥೆಗಳು ಸ್ವತ್ಛತಾ ಅಭಿಯಾನಕ್ಕೆ ನಾಗರಿಕರನ್ನೇ ಹುರಿದುಂಬಿಸುತ್ತಿದೆ. ಇದೇ ಸಂದರ್ಭದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತ ತನ್ನೆಲ್ಲ ಗೆಳೆಯರು, ಪರಿಚಯಸ್ಥರನ್ನು ಸೇರಿಸಿಕೊಂಡು ಸ್ವತ್ಛತೆಯ ಜತೆಗೆ  ಸುಣ್ಣ- ಬಣ್ಣಗಳೊಂದಿಗೆ ಇಡೀ ಉದ್ಯಾನವನ್ನೇ ಕಂಗೊಳಿಸುವಂತೆ ಮಾಡಿದ್ದಾರೆ. ಇವರೆಲ್ಲರ ಶ್ರಮದಿಂದಲೇ ಕೂಳೂರು ಫ್ಲೈ ಓವರಿನ ಕೆಳಗಿನ ಪ್ರದೇಶಕ್ಕೆ ಹೊಸ ಕಳೆ ಬಂದಿದೆ.

ಭಾರತೀಯ ಜನತಾ ಪಾರ್ಟಿಯ ಕೂಳೂರು ಶಕ್ತಿ ಕೇಂದ್ರದ ಅಧ್ಯಕ್ಷ,  ಸ್ಥಳೀಯ ನಾಗರಿಕ ಹಿತರಕ್ಷಣ ಸಮಿತಿ ಸಂಚಾಲಕ ಗಂಗಾರಿ ಗುರುಚಂದ್ರ ಹೆಗ್ಡೆಯವರು ಇದರ ಹಿಂದಿನ ಚಾಲನಾ ಶಕ್ತಿ. 

ಮೂಲತಃ ಆಗುಂಬೆಯವರಾದ ಅವರು, ಮಂಗಳೂರಿನ ಮಝಗಾಂವ್‌ಡಾಕ್‌ ಲಿಮಿಟೆಡ್‌ (ಎಂ.ಡಿ.ಎಲ್‌)ನಲ್ಲಿ ನೌಕರಿಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದವರು. ಸಾರಿಗೆ ಸಂಸ್ಥೆಯನ್ನು ಸ್ಥಾಪಿಸಿ ಸುಮಾರು 20 ಪಿಕಪ್‌ ವ್ಯಾನ್‌, ಲಾರಿ ಮತ್ತು ಬಸ್ಸುಗಳ ಒಡೆಯರಾಗಿ ಪತ್ರಿಕಾ ಬಂಡಲ್‌ಗ‌ಳನ್ನು ಊರೂರಿಗೆ ತಲುಪಿಸಿದವರು.
55ರ ವಯಸ್ಸಿನ ಇವರು, ಪತ್ನಿ, ಇಬ್ಬರು ಗಂಡು ಮಕ್ಕಳೊಂದಿಗೆ ಕೂಳೂರಿನಲ್ಲಿ ಸ್ವಂತ ಮನೆ ಕಟ್ಟಿ ನೆಮ್ಮದಿಯ ಬದುಕು ಕಂಡವರು.

ನಂದನವನವಾದ ಕಥೆ
ತನ್ನ ಕಚೇರಿಯ ಎದುರಿಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಫ್ಲೈ ಓವರ್‌ ಕೆಳಗಿರುವ ಖಾಲಿ ಜಾಗದಲ್ಲಿ ಭಿಕ್ಷುಕರು, ಗೂಡಂಗಡಿಗಳು, ಪಾನಿಪುರಿ ಅಂಗಡಿಗಳು, ಫಾಸ್ಟ್‌ ಫ‌ುಡ್‌ ಬಿಡಾರಗಳು ಬೀಡು ಬಿಟ್ಟಿದ್ದವು. ಅವುಗಳ ಕೊಳಚೆ ನೀರು, ತ್ಯಾಜ್ಯ ವಸ್ತುಗಳಿಂದ ಬೀದಿ ನಾಯಿಗಳ ರಂಪಾಟ, ನೊಣ- ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಪರಿಣಮಿಸಿತ್ತು. ಇದರಿಂದ ಮುಕ್ತಿ ಕಾಣಲು ಊರವರ ಸಹಕಾರ ಪಡೆದು, ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಗಿಟ್ಟಿಸಿಕೊಂಡು ಉದ್ಯಾನ ನಿರ್ಮಾಣಕ್ಕೆ ಮುಂದಾದರು. ಒಟ್ಟೂ 4.50 ಲಕ್ಷ ರೂ. ಪೈಕಿ ಊರವರಿಂದ 1.10 ಲಕ್ಷ ರೂ. ದೇಣಿಗೆ ರೂಪದಲ್ಲಿ ಬಂದಿತು. ಉಳಿದದ್ದನ್ನು ತಾವೇ ಭರಿಸಿ ಸುಮಾರು 1800 ಚದರಡಿ ಜಾಗಕ್ಕೆ 3 ಕಡೆ 5 ಅಡಿ ಅಗಲದ ಇಂಟರ್‌ಲಾಕ್‌ ನಿರ್ಮಿಸಿದರು. ಫ್ಲೈ ಓವರ್‌ ಅಡಿಭಾಗದ ಇಡೀ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಹತ್ತು ಹಲವು ಬಗೆಯ ಬೊನ್ಸಾಯಿ ತಳಿಯ 30 ಗಿಡಗಳನ್ನು ನೆಟ್ಟು, ಬಣ್ಣಗಳಿಂದ ಆಕರ್ಷಕ ಕಲಾಕೃತಿ ರಚಿಸಿ ಮಾದರಿ ಉದ್ಯಾನ ರೂಪಿಸಲಾಯಿತು. ದಿನಾ ಬೆಳಿಗ್ಗೆ 5.30ಕ್ಕೆ ಬಂದು ಗಿಡಗಳಿಗೆ ನೀರುಣಿಸಿ ತಮ್ಮ ಮಕ್ಕಳಂತೆ ಪೋಷಿಸಿದರು. ಇದನ್ನು ಕಂಡು ಖಾಸಗಿ ಚಾನೆ‌ಲ್‌ ವೊಂದು ಪಬ್ಲಿಕ್‌ ಹೀರೋ ಎಂದು ಬಿಂಬಿಸಿತು.

ಪ್ರಸ್ತುತ ಈ ಉದ್ಯಾನದ ಉಸ್ತುವಾರಿ ಹೆಗ್ಡೆಯವರದ್ದೇ. ಒಂದೆಡೆ ಪಾಕಿಂìಂಗ್‌ ಜಾಗವಿದ್ದು, ಮತ್ತೂಂದೆಡೆ ಉದ್ಯಾನವಿದೆ. ಸುರತ್ಕಲ್‌ನಿಂದ ತೊಕ್ಕೊಟ್ಟುವರೆಗೆ ನಗರದಲ್ಲಿ ಹಾದುಹೋಗುವ ಸುಮಾರು ಏಳೆಂಟು ಫ್ಲೈಓವರ್‌ನ ಖಾಲಿ ಜಾಗದ ನಿರ್ವಹಣೆ ಹೊಣೆಯನ್ನು ನಗರಪಾಲಿಕೆ- ಜಿಲ್ಲಾಡಳಿತ ಒಪ್ಪಿಸಿದರೆ ಖಂಡಿತವಾಗಿ ಅಭಿವೃದ್ಧಿಪಡಿಸುವೆ ಎನ್ನುತ್ತಾರೆ ಅವರು.

ಮಾರ್ಗದರ್ಶನ ನೀಡುವೆ
ನನ್ನ ಆತ್ಮ ತೃಪ್ತಿಗಾಗಿ ಮಾಡಿದ ಕಾರ್ಯವಿದು.ಇದನ್ನು ಸಮಾಜ ಗುರುತಿಸಿರುವುದು ಸಂತೋಷ ತಂದಿದೆ. ಈ ಕಾರ್ಯವನ್ನು ಆರ್ಥಿಕವಾಗಿ ಸ್ವಯಂ ಆಗಿ ಮುಂದುವರಿಸಲು ಸಾಧ್ಯವಿಲ್ಲ. ಸರಕಾರ,ಹೆದ್ದಾರಿ ಪ್ರಾಧಿಕಾರ,ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದಾದಲ್ಲಿ ಮಾರ್ಗದರ್ಶನ ನೀಡುವೆ. ಹತ್ತು ಹಲವು ಸೇತುವೆಗಳ ಕೆಳಭಾಗ ನೈರ್ಮಲ್ಯ ಕಾಪಾಡಲು ಇದಕ್ಕಿಂತ ಒಳ್ಳೆಯ ಉಪಾಯ ಬೇರೊಂದಿಲ್ಲ. ಮಂಗಳೂರು ಸ್ಮಾರ್ಟ್‌ ಸಿಟಿಗೆ ಪೂರಕವಾಗಿ ಸ್ಮಾರ್ಟ್‌ ಪರಿಸರವನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. 
– ಗುರುಚಂದ್ರ ಹೆಗ್ಡೆ ಗಂಗಾರಿ

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Kinnigoli – Patching work for potholes on Mulki State Highway

Kinnigoli – ಮೂಲ್ಕಿ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಗೆ ತೇಪೆ ಕಾರ್ಯ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

12-epson

Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.