ನಿಸ್ವಾರ್ಥ ಸೇವೆಯಿಂದ ದೇವರ ಅನುಗ್ರಹ: ರೈ| ರೆ| ಮೊರಾಸ್‌


Team Udayavani, Dec 11, 2017, 8:34 AM IST

11-5.jpg

ಮಂಗಳೂರು: ಕರ್ನಾಟಕ ಕೆಥೋಲಿಕ್‌ ಕ್ರೈಸ್ತ ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷರಾದ ಬೆಂಗಳೂರಿನ ಆರ್ಚ್‌ ಬಿಷಪ್‌
ರೈ| ರೆ| ಡಾ| ಬರ್ನಾರ್ಡ್‌ ಮೊರಾಸ್‌ ಅವರು ಧರ್ಮಗುರು ದೀಕ್ಷೆ ಪಡೆದು 50 ವರ್ಷಗಳಾದ ಪ್ರಯುಕ್ತ ರವಿವಾರ ಸುವರ್ಣ ಬಲಿಪೂಜೆಯನ್ನು ಹುಟ್ಟೂರು ಮಂಗಳೂರು ತಾಲೂಕಿನ ಕುಪ್ಪೆಪದವು ದಿ ಇಮ್ಯಾಕ್ಯುಲೆಟ್‌ ಹಾರ್ಟ್‌ ಆಫ್‌ ಮೇರಿ ಚರ್ಚ್‌ನಲ್ಲಿ ರಾಜ್ಯದ ಇತರ ನಾಲ್ಕು ಮಂದಿ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಸಾರ್ವಜನಿಕವಾಗಿ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು.

ಬಲಿ ಪೂಜೆಯಲ್ಲಿ ರೈ| ರೆ| ಡಾ| ಬರ್ನಾರ್ಡ್‌ ಮೊರಾಸ್‌ ಅವರ ಜತೆಗೆ ಬಿಷಪರಾದ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ (ಮಂಗಳೂರು), ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ (ಉಡುಪಿ), ರೈ|  ರೆ| ಡಾ| ಹೆನ್ರಿ ಡಿ’ಸೋಜಾ (ಬಳ್ಳಾರಿ), ರೈ| ರೆ| ಡಾ| ಮಾರ್‌ ದಿವಾನಿಯೋಸ್‌ ಮಕಾರಿಯೋಸ್‌ (ಪುತ್ತೂರು) ಅವರು ಹಾಗೂ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು
ಮೊ| ಡೆನಿಸ್‌ ಮೊರಾಸ್‌ ಪ್ರಭು, ಬೆಂಗಳೂರು ಮಹಾ ಧರ್ಮಪ್ರಾಂತದ ಪ್ರಧಾನ ಗುರುಗಳಾದ ಮೊ| ಜಯನಾಥನ್‌ ಮತ್ತು ಮೊ| ಸಿ. ಫ್ರಾನ್ಸಿಸ್‌, ಛಾನ್ಸಲರ್‌ ಫಾ| ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್‌ನ ಧರ್ಮಗುರು ಫಾ| ವಲೇರಿಯನ್‌ ಡಿ’ಸೋಜಾ ಸೇರಿದಂತೆ ಸುಮಾರು 25ಕ್ಕೂ ಮಿಕ್ಕಿ ಧರ್ಮಗುರುಗಳು ಉಪಸ್ಥಿತರಿದ್ದರು.

ನಿಸ್ವಾರ್ಥ ಸೇವೆ, ಆದರ್ಶ ಬದುಕು ತೃಪ್ತಿ ತಂದಿದೆ
ಕಳೆದ 50 ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ನಿಸ್ವಾರ್ಥ ಸೇವೆ ಒದಗಿಸಿ, ಫಲಭರಿತ, ಆದರ್ಶ ಜೀವನ ನಡೆಸಿದ ಸಂತೃಪ್ತಿ ಇದೆ. ದೇವರು ನನ್ನ ಜತೆಗಿದ್ದು, ಹೆಜ್ಜೆ ಹೆಜ್ಜೆಗೂ ಮುನ್ನಡೆಸಿದ್ದಾರೆ. ಅದರಂತೆ ಎಲ್ಲರೂ ಆದರ್ಶ, ಮಾದರಿ ಸೇವೆ ಒದಗಿಸಲು ಪ್ರಯತ್ನಿಸಿ ದೇವರ ಕೃಪೆ ಮತ್ತು ಅನುಗ್ರಹಕ್ಕೆ ಪಾತ್ರರಾಗ ಬೇಕು ಎಂದು ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌ ತಮ್ಮ ಸಂದೇಶದಲ್ಲಿ ಹೇಳಿದರು. ಈ ಸೇವೆ ಒದಗಿಸಲು ಸಹಕರಿಸಿದ ದೇವರಿಗೆ ಮತ್ತು ಇತರ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಷ್ಟ  ಸಂಕಷ್ಟಗಳಲ್ಲಿಯೂ ಬಲಿಷ್ಠರಾಗಿರುತ್ತಾರೆ
ಬಲಿ ಪೂಜೆಯ ಸಂದರ್ಭದಲ್ಲಿ ಪ್ರವಚನ ನೀಡಿದ ಬಳ್ಳಾರಿಯ ಬಿಷಪ್‌ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅವರು, ಧ‌ರ್ಮಗುರುಗಳನ್ನು ದೇವರೇ ಆರಿಸಿ ನೇಮಕ ಮಾಡುತ್ತಾರೆ. ಧರ್ಮಗುರು ಸೇವೆ ಕಷ್ಟಕರ ಆಗಿದ್ದರೂ ದೇವರು ಜತೆಗಿರುತ್ತಾನೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕಷ್ಟ ಸಂಕಷ್ಟಗಳಲ್ಲೂ ಧೈರ್ಯಗುಂದದೆ ಬಲಿಷ್ಠರಾಗಿರುತ್ತಾರೆ ಎಂದು ಹೇಳಿದರು.

ಬಲಿ ಪೂಜೆಯ ಬಳಿಕ ಮೊರಾಸ್‌ ಕುಟುಂಬದ ಹಿರಿಯರ ಮನೆ ಆವರಣಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಿತು.
ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮ ಭಗಿನಿ ಯರು ಹಾಗೂ ಕುಪ್ಪೆಪದವು ಚರ್ಚ್‌ನ ಕ್ರೈಸ್ತರು, ಮಹಾ ಧರ್ಮಾಧ್ಯಕ್ಷರ ಅಭಿಮಾನಿಗಳು, ಮೊರಾಸ್‌ ಕುಟುಂಬದ ಹಿತೈಷಿಗಳು ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌ ಅವರಿಗೆ ಗುರು ದೀಕ್ಷೆಯ ಸುವರ್ಣ ಮಹೋತ್ಸವದ ಶುಭಾಶಯಗಳನ್ನು ಸಲ್ಲಿಸಿ ಅಭಿನಂದಿಸಿದರು.

ಭವ್ಯ ಸ್ವಾಗತ, ಮೆರವಣಿಗೆ
ಪ್ರಾರಂಭದಲ್ಲಿ ಆರ್ಚ್‌ ಬಿಷಪ್‌ ಅವರನ್ನು ಕುಪ್ಪೆಪದವು ಪೇಟೆಯಲ್ಲಿ ಸ್ವಾಗತಿಸಿ ಮೆರವಣಿಗೆಯಲ್ಲಿ ಚರ್ಚ್‌ಗೆ ಕರೆದೊಯ್ಯಲಾಯಿತು. ಬಲಿಪೂಜೆಯ ಬಳಿಕ ಚರ್ಚ್‌ ನಿಂದ ಪಕ್ಕದ ಮೊರಾಸ್‌ ಕುಟುಂಬದ ಹಿರಿಯರ ಮನೆ ಆವರಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮನೆಯ ದ್ವಾರದಲ್ಲಿ ಗುರು ಆರತಿ ಬೆಳಗಿ ಸ್ವಾಗತ ಕೋರಲಾಯಿತು ಹಾಗೂ ರೈ| ರೆ| ಡಾ| ಬರ್ನಾರ್ಡ್‌ ಮೊರಾಸ್‌ ಅವರು ತಮ್ಮ 50 ವರ್ಷಗಳ ಧಾರ್ಮಿಕ ಜೀವನದ ಸಂಕೇತವಾಗಿ 50 ಬಲೂನುಗಳನ್ನು ಆಕಾಶಕ್ಕೆ ತೇಲಿ ಬಿಟ್ಟರು.

ಅಭಿನಂದನಾ ಸಮಾರಂಭದಲ್ಲಿ ಮಂಗಳೂರಿನ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ, ರೈ| ರೆ| ಡಾ| ಹೆನ್ರಿ ಡಿ’ಸೋಜಾ, ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು, ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಮೊ| ಜಯನಾಥನ್‌ ಮತ್ತು ಮೊ| ಸಿ. ಫ್ರಾನ್ಸಿಸ್‌, ಛಾನ್ಸಲರ್‌ ಫಾ| ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್‌ನ ಫಾ| ವಲೇರಿಯನ್‌ ಡಿ’ಸೋಜಾ, ಕೊಡಗು ಜಿಲ್ಲಾಧಿಕಾರಿ ಮೊರಾಸ್‌ ಕುಟುಂಬದ ಡಾ| ರಿಚಾರ್ಡ್‌ ವಿನ್ಸೆಂಟ್‌ ಡಿ’ಸೋಜಾ, ಶಾಸಕ ಬಿ.ಎ. ಮೊದಿನ್‌ ಬಾವಾ ಉಪಸ್ಥಿತರಿದ್ದರು.

ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌ ಅವರು ಸುವರ್ಣೋತ್ಸವದ ಕೇಕ್‌ ಕತ್ತರಿಸಿದರು. ಇದೇ ಡಿ. 5ರಂದು ಗುರು ದೀಕ್ಷೆಯ 50 ವರ್ಷಗಳನ್ನು ಪೂರ್ತಿಗೊಳಿಸಿದ್ದ ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರೂ ಕೇಕ್‌ ಕತ್ತರಿಸಿದರು. 

ಫಾ| ಫಾವುಸ್ತಿನ್‌ ಲೋಬೊ ಅವರು ಆರ್ಚ್‌ ಬಿಷಪ್‌ ಅವರನ್ನು ಅಭಿನಂದಿಸಿದರು. ಮೊ| ಜಯನಾಥನ್‌ ಅವರು ಪೋಪ್‌ ಫ್ರಾನ್ಸಿಸ್‌ ಅವರು ಕಳುಹಿಸಿದ್ದ ಶುಭಾಶಯ ಸಂದೇಶ ವಾಚಿಸಿದರು. ಬಿಷಪ್‌ ಅಲೋಶಿಯಸ್‌ ಪಾವ್‌ ಡಿ’ಸೋಜಾ ಅವರು ಕರ್ನಾಟಕದ ಧರ್ಮಾಧ್ಯಕ್ಷರ ಮಂಡಳಿಯ ಪರವಾಗಿ ಆರ್ಚ್‌ ಬಿಷಪ್‌ ಅವರನ್ನು ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸಮ್ಮಾನಿಸಿದರು. ಬಳಿಕ ಆರ್ಚ್‌ ಬಿಷಪ್‌ ಅವರು ವೇದಿಕೆಯಲ್ಲಿದ್ದ ಎಲ್ಲ ಬಿಷಪರನ್ನು, ಪ್ರಧಾನ ಗುರುಗಳನ್ನು, ಕುಪ್ಪೆಪದವು ಚರ್ಚ್‌ನ ಗುರುಗಳನ್ನು ಸಮ್ಮಾನಿಸಿದರು.

ಆರ್ಚ್‌ ಬಿಷಪ್‌ ಅವರನ್ನು ಮಂಗಳೂರು ಧರ್ಮ ಪ್ರಾಂತದ ಪರವಾಗಿ ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಕುಪ್ಪೆಪದವು ವಾರ್ಡ್‌ ವತಿಯಿಂದ ಗುರಿಕಾರ ಇಗ್ನೇಶಿಯಸ್‌ ನೇತೃತ್ವದಲ್ಲಿ, ಮುತ್ತೂರು ಗ್ರಾಮ ಪಂಚಾಯತ್‌ ಪರವಾಗಿ ಅಧ್ಯಕ್ಷರಾದ ನಾಗಮ್ಮ ನೇತೃತ್ವದಲ್ಲಿ ಸಮ್ಮಾನಿಸಲಾಯಿತು. ಮೊರಾಸ್‌ ಕುಟುಂಬದ ಸಿಸಿಲಿಯಾ ಮೊರಾಸ್‌, ಅಲಿಸ್‌ ಮೊರಾಸ್‌, ಮೇರಿ ಮೊರಾಸ್‌, ಜಾನ್‌ ಮೊರಾಸ್‌, ಮಾರ್ಟಿನ್‌ ಮೊರಾಸ್‌, ಮೋನಿಕಾ ಪಿಂಟೊ, ಎಡ್ಮಂಡ್‌ ಮೊರಾಸ್‌, ಜಾನ್‌ ಕ್ರೂಜ್‌ ಮೊರಾಸ್‌, ಜೋಸೆಫ್‌ ಮೊರಾಸ್‌ ಮತ್ತಿತರರು ಉಪಸ್ಥಿತರಿದ್ದರು. ಜೋಸೆಫ್‌ ಮೊರಾಸ್‌ ಸ್ವಾಗತಿಸಿ ಜಾನ್‌ ಕ್ರೂಜ್‌ ಮೊರಾಸ್‌ ವಂದಿಸಿದರು. ಫಾ| ಎಡ್ವಿನ್‌ ಪಿಂಟೊ ಕಾರ್ಯಕ್ರಮ ನಿರ್ವಹಿಸಿದರು.

ದೇವರ ಮಹಿಮೆ
1967 ಡಿ. 6ರಂದು ಇದೇ ಚರ್ಚ್‌ ನಲ್ಲಿ ಧರ್ಮಗುರು ದೀಕ್ಷೆ ಸ್ವೀಕರಿಸಿದ್ದೆನು. ಅಂದು ಬುಧವಾರ.  ಬಳಿಕ ಡಿ. 10ರಂದು ಪ್ರಥಮ ಬಲಿಪೂಜೆ ಯನ್ನು ಈ ಚರ್ಚ್‌ನಲ್ಲಿ ಅರ್ಪಿ ಸಿದ್ದೆನು. ಅಂದು ರವಿವಾರ.  50 ವರ್ಷಗಳ ಬಳಿಕ 2017 ಡಿ. 6ರಂದು ಗುರು ದೀಕ್ಷೆಯ ಸುವರ್ಣ ಮಹೋತ್ಸವವನ್ನು ಬೆಂಗ ಳೂರಿನಲ್ಲಿ ಆಚರಿಸಿದ್ದೇನೆ. ಅಂದು ಬುಧವಾರ. ಇದೀಗ ಡಿ. 10ರಂದು ಗುರು ದೀಕ್ಷೆಯ ಸುವರ್ಣ ಮಹೋ ತ್ಸವದ ಬಲಿಪೂಜೆಯನ್ನು ಕುಪ್ಪೆಪದವು ಚರ್ಚ್‌ ನಲ್ಲಿ ಅರ್ಪಿಸಿದ್ದೇನೆ. ಇಂದು ಕೂಡ ರವಿವಾರ. ಕಾಕತಾಳೀಯ ಎನಿಸಿದ್ದರೂ ಇದು ದೇವರ ಮಹಿಮೆ ಎಂದು ಆರ್ಚ್‌ ಬಿಷಪ್‌  ರೈ| ರೆ|  ಬರ್ನಾರ್ಡ್‌ ಮೊರಾಸ್‌ಹೇಳಿದರು.

ನಾನು ಮಾತ್ರ ಕೈ ಎತ್ತಿದ್ದೆ
ನಾನು 8 ವರ್ಷ ಪ್ರಾಯದವನಿದ್ದಾಗ ಒಂದು ದಿನ ಬಿಷಪ್‌ ದಿ| ರೈಮಂಡ್‌ ಡಿ’ಮೆಲ್ಲೊ ಅವರು ಕುಪ್ಪೆಪದವು ಚರ್ಚ್‌ಗೆ ಭೇಟಿ ನೀಡಿದ್ದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಧರ್ಮಗುರು ಗಳಾಗಲು ಯಾರಾದರೂ ಮುಂದೆ ಬರುತ್ತೀರಾ ಎಂದು ಪ್ರಶ್ನಿಸಿದ್ದರು. ಆಗ ನಾನು ಮಾತ್ರ ಕೈ ಎತ್ತಿದ್ದೆ. ಬಳಿಕ ಆಗಿನ ಗುರುಗಳಾಗಿದ್ದ ಹೊಸಬೆಟ್ಟುವಿನ ಫಾ| ಜಾನ್‌ ಜಿ. ಪಿಂಟೊ ಅವರು ನನಗೆ ಉತ್ತೇಜನ ನೀಡಿ ಗುರುಗಳಾಗಲು ಪ್ರೇರಣೆ ಕೊಟ್ಟರು. ಬಿಷಪ್‌ ರೈಮಂಡ್‌ ಡಿ’ಮೆಲ್ಲೊ ಮಾರ್ಗದರ್ಶನ ನೀಡಿ ದರು. ಹಾಗೆ ನಾನು ಧರ್ಮಗುರುವಾದೆ ಎಂದು ಬರ್ನಾರ್ಡ್‌ ಮೊರಾಸ್‌ ನೆನಪಿಸಿದರು. ನಾನು ಕುಪ್ಪೆಪದವಿ ನಿಂದ ಧಾರ್ಮಿಕ ಕ್ಷೇತ್ರಕ್ಕೆ ಸೇರಿ ಧರ್ಮ ಗುರು ವಾದ ಮೊದಲ ವ್ಯಕ್ತಿ. ಕುಪ್ಪೆಪದವು ಸಣ್ಣ ಚರ್ಚ್‌ ಆಗಿದ್ದರೂ ಈಗ ಇಲ್ಲಿಂದ 26 ಮಂದಿ ಧರ್ಮಗುರುಗಳಾಗಿದ್ದಾರೆ ಎಂದರು.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.