ದೇವರ ಪಟ್ಟಣ ಸವಾರಿ, ಅವಭೃಥ ಸ್ನಾನ: ಇಂದು ಜಾತ್ರೆ ಸಂಪನ್ನ


Team Udayavani, Jan 12, 2018, 11:11 AM IST

12-Jan-9.jpg

ಸುಳ್ಯ: ಶ್ರೀ ಚೆನ್ನಕೇಶವ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಬುಧವಾರ ಮಧ್ಯರಾತ್ರಿ ವೈಭವದ ರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತವೃಂದ ತೇರನ್ನು ಎಳೆದು, ಶ್ರೀ ದೇವರ ದರ್ಶನ ಪಡೆದು, ಪುನೀತವಾಯಿತು.

ರಥೋತ್ಸವ
ಕಲ್ಕುಡ ದೈವಗಳ ಭಂಡಾರ ದೇವಾಲಯಕ್ಕೆ ಆಗಮಿಸಿತ್ತು. ದೇವಸ್ಥಾನದ ವತಿಯಿಂದ ದೈವವನ್ನು ಸ್ವಾಗತಿಸಲಾಯಿತು. ರಥಬೀದಿಯಲ್ಲಿ ದೈವ ದೇವರನ್ನು ಎದುರುಗೊಂಡು, ದೈವ ಮತ್ತು ದೇವರು ಮುಖಾಮುಖೀ ನಡೆಯಿತು. ರಥದಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ, ಪೂಜಾದಿ ಕಾರ್ಯಕ್ರಮಗಳು ನಡೆದವು. ಮಧ್ಯರಾತ್ರಿ 1.30ರ ಹೊತ್ತಿಗೆ ವೈಭವದ ರಥೋತ್ಸವ ಆರಂಭಗೊಂಡಿತ್ತು. ಕಲ್ಕುಡ ಮತ್ತು ಉದ್ರಾಂಡಿ ದೈವಗಳು ರಥದ ಜತೆಗೆ ಸಂಚರಿಸಿದವು. ರಥೋತ್ಸವ ಮುಖ್ಯ ರಸ್ತೆಯ ಸಮೀಪದ ದೇವರ ಕಟ್ಟೆ ಬಳಿ ತನಕ ಸಾಗಿ, ಪುನಃ ದೇವಾಲಯಕ್ಕೆ ಹಿಂತಿರುಗಿತ್ತು.

ಶಾಸಕ ಎಸ್‌. ಅಂಗಾರ, ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸಮಿತಿ ಸದಸ್ಯರಾದ ಪಡ್ಡಂಬೈಲು ವೆಂಕಟರಮಣ ಗೌಡ, ಕೆ. ಉಪೇಂದ್ರ ಕಾಮತ್‌, ಲಿಂಗಪ್ಪ ಗೌಡ, ಎಂ. ಮೀನಾಕ್ಷಿ ಗೌಡ, ಎನ್‌. ಜಯಪ್ರಕಾಶ್‌ ರೈ, ಎನ್‌.ಎ. ರಾಮಚಂದ್ರ, ಎ. ರಮೇಶ್‌ ಬೈಪಾಡಿತ್ತಾಯ, ಅಕಾಡೆಮಿ ಆಫ್‌ ಎಜುಕೇಶನಲ್‌ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್‌ ಕೆ.ವಿ., ಶೋಭಾ ಚಿದಾನಂದ, ಅಕ್ಷಯ್‌ ಕೆ.ಸಿ., ಅಭಿಜ್ಞಾ, ಕೆ.ವಿ. ಹೇಮನಾಥ ಉಪಸ್ಥಿತರಿದ್ದರು.

ಅವಭೃಥ ಸ್ನಾನ
ಜ. 11ರಂದು ಬೆಳಗ್ಗೆ ಆರಾಟ ಬಾಗಿಲು ತೆರೆಯಲಾಯಿತು. ಕವಾಟೋದ್ಘಾಟನೆ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಕಾಯಿ ಸೇವೆ ಸಮರ್ಪಿಸಿದರು. ಬೆಳಗ್ಗೆ ಅರಂಬೂರು ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು. ಸಂಜೆ ಬಜಪ್ಪಿಲ ದೈವಗಳ ಭಂಡಾರ ಆಗಮನವಾಗಿ ಅನಂತರ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ನಡೆಯಿತು. ಆರಕ್ಷಕ ಠಾಣಾ ಕಟ್ಟೆ, ಗಾಂಧಿನಗರ, ಅರಣ್ಯ ಇಲಾಖೆ, ಕೇರ್ಪಳ, ತಾಲೂಕು ಕಚೇರಿ, ಪಯಸ್ವಿನಿ ನದಿ ಬಳಿಯ ಕಟ್ಟೆ ಪೂಜೆಗಳ ಬಳಿಕ ಅವಭೃತ ಸ್ನಾನ ನಡೆಯಿತು. ಬಳಿಕ ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾರೋಹಣ ನಡೆಯಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಉಳಿದ ದಿನಗಳಲ್ಲಿ ಅನ್ನಪ್ರಸಾದ ವ್ಯವಸ್ಥೆ ಇದ್ದರೂ, ಸಾಮೂಹಿಕ ಅನ್ನಪ್ರಸಾದಕ್ಕೆ ಅಪಾರ ಭಕ್ತರು ಆಗಮಿಸಿದ್ದಾರೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಇಂದು ಜಾತ್ರೆ ಸಂಪನ್ನ
ಡಿ. 27ರಂದು ಗೊನೆ ಮುಹೂರ್ತದೊಂದಿಗೆ ಆರಂಭಗೊಂಡ ಜಾತ್ರಾ ಸಂಭ್ರಮ ಜ. 12ರಂದು ಮುಕ್ತಾಯಗೊಳ್ಳಲಿದೆ. ಶುಕ್ರವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.

ಟಾಪ್ ನ್ಯೂಸ್

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

6-belthangady

Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ

3-holiday

Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

Sullia ಜಾಲ್ಸೂರು: ಐರಾವತ ಬಸ್‌ – ರಿಕ್ಷಾ ಢಿಕ್ಕಿ

Sullia ಜಾಲ್ಸೂರು: ಐರಾವತ ಬಸ್‌ – ರಿಕ್ಷಾ ಢಿಕ್ಕಿ

Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…

Traffic Jam: ದೇವರಕೊಲ್ಲಿ ಬಳಿ ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ

Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.