“ಗೋಲ್‌ಮಾಲ್’ ತುಳು ಚಲನಚಿತ್ರ 14 ಚಿತ್ರಮಂದಿರಗಳಲ್ಲಿ ತೆರೆಗೆ
Team Udayavani, Apr 21, 2019, 6:10 AM IST
ಮಂಗಳೂರು: ಶ್ರೀ ಮಹಾಕಾಳಿ ಮಹಾಮಂತ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದ “ಗೋಲ್‌ಮಾಲ್’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಚಲನ ಚಿತ್ರಮಂದಿರದಲ್ಲಿ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಕಟಪಾಡಿ ಮಟ್ಟು ಶ್ರೀ ಮಹಾಕಾಳಿ ಮಂತ್ರ ದೇವತಾ ಸನ್ನಿಧಿಯ ಧರ್ಮದರ್ಶಿ ಸುಧರ್ಮ ಶ್ರೀಯಾನ್, ತುಳು ಸಿನಿಮಾಗಳ ಮೂಲಕ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಬಿಂಬಿಸುವ ಕೆಲಸ ಕಾರ್ಯಗಳು ನಡೆ ಯುವಂತಾಗಬೇಕು ಎಂದರು.
ತುಳು ಚಿತ್ರ ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ನಿರ್ಮಾಪಕರಾದ ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಆರ್. ಧನರಾಜ್, ವಿಜಯ ಕುಮಾರ್ ಕಾರ್ಕಳ, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಡಾ| ಸದಾನಂದ ಪೆರ್ಲ, ವಿ. ಜಿ. ಪಾಲ್, ಗಂಗಾಧರ ಶೆಟ್ಟಿ ಅಳಕೆ, ಸುಧಾಕರ ಕುದ್ರೋಳಿ, ಚೇತನ್ ಮುಂಡಾಡಿ, ಮೋಹನ್ ಕೊಪ್ಪಲ, ಪ್ರೇಮ್ ಶೆಟ್ಟಿ ಸುರತ್ಕಲ್, ಗೋಲ್‌ಮಾಲ್ ನಿರ್ಮಾಪಕರಾದ ಮಂಜುನಾಥ ನಾಯಕ್, ಅಕ್ಷಯ್ ಪ್ರಭು, ನಿರ್ದೇಶಕ ರಮಾನಂದ ನಾಯಕ್, ನಟ ಪೃಥ್ವಿ ಅಂಬರ್, ಶ್ರೇಯಾ ಅಂಚನ್, ನಿರೀಕ್ಷಾ ಶೆಟ್ಟಿ, ಅರವಿಂದ ಬೋಳಾರ್, ಸುನಿಲ್ ನೆಲ್ಲಿಗುಡ್ಡೆ, ಭೋಜರಾಜ್ ವಾಮಂಜೂರು, ಸುನಾದ್ ಗೌತಮ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು. ವಿನಾಯಕ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.