![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 11, 2020, 6:20 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಗೋ ಸಂತತಿ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಠ ಮಂದಿರ, ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಗೋಶಾಲೆಗಳ ಜತೆಗೆ ಆಯ್ದ 25 ದೇವಸ್ಥಾನಗಳ ನೇತೃತ್ವದಲ್ಲಿ ಪ್ರತ್ಯೇಕ ಗೋಶಾಲೆ ನಿರ್ಮಿಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ.
ಗೋಶಾಲೆ ನಿರ್ಮಾಣಕ್ಕೆ ದೇವಸ್ಥಾನಗಳಿಗೆ ಜಮೀನು ಒದಗಿಸುವ ನಿಟ್ಟಿನಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ “ಎ’ ದರ್ಜೆಯ ದೇವಸ್ಥಾನಗಳ ಪೈಕಿ 10 ಕೋ. ರೂ.ಗಳಿಗೂ ಮಿಕ್ಕಿ ಆದಾಯವಿರುವ ದೇವ ಸ್ಥಾನಗಳಲ್ಲಿ ಗೋಶಾಲೆ ಸಾಕಾರವಾಗಲಿದೆ. ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಸ್ಥಾನಗಳಲ್ಲಿ ಇದು ಸಾಕಾರಗೊಳ್ಳಲಿದೆ.
ಗೋಶಾಲೆಗಳ ಸಂಕಷ್ಟ
ಸರಕಾರ ಹೊಸದಾಗಿ ಗೋಶಾಲೆಗಳ ಆರಂಭಕ್ಕೆ ಮುಂದಾಗಿದ್ದರೂ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆಗಳ ಪೈಕಿ ಕೆಲವು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಸರಕಾರದ ಪ್ರಕಾರ, ಜಾನುವಾರು ನಿರ್ವಹಣಾ ವೆಚ್ಚ ಪ್ರತೀ ದಿನಕ್ಕೆ 70 ರೂ. ಆಗಿದೆ. ಇದರಲ್ಲಿ ಶೇ. 25ರಷ್ಟನ್ನು (17.50 ರೂ.) ಮಾತ್ರ ಗೋಶಾಲೆಗಳಿಗೆ ಸರಕಾರ ಸಹಾಯಧನವಾಗಿ ನೀಡುತ್ತಿದೆ.
ಗೋಶಾಲೆಯಲ್ಲಿ 400ರಷ್ಟು ದನ-ಕರುಗಳಿದ್ದರೆ ಸರಕಾರದ ಅನುದಾನ ಸಿಗುವುದು ಕೇವಲ 200ಕ್ಕೆ. ಲಾಕ್‌ಡೌನ್ ಬಳಿಕ ಹಣ ಹೊಂದಿಸುವುದೇ ಕಷ್ಟವಾಗುತ್ತಿದೆ.
ಅಕ್ರಮ ಸಾಗಾಟ ತಡೆದು ಪೊಲೀಸರು ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆ ಗಳಿಗೆ ಕಳುಹಿಸಲಾಗುತ್ತಿದೆ. ಇತ್ತೀಚೆಗೆ ಈ ಸಂಖ್ಯೆಯೂ ಏರಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಗೋ ಶಾಲೆಯವರಿಗೆ ನಿರ್ವಹಣೆಯ ಸವಾಲು ಎದುರಾಗಿದೆ.
ಕೊಯಿಲದ ಜಾನುವಾರು ಗೋಶಾಲೆಗೆ !
ಗೋಶಾಲೆಗಳಿಗೆ ಇದೀಗ ಪುತ್ತೂರು ತಾಲೂಕಿನ ಕೊಯಿಲದ ಜಾನುವಾರು ಸಂವರ್ಧನ ಕೇಂದ್ರದಲ್ಲಿರುವ ಕೆಲವು ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಹೊಸ ಸವಾಲು ಎದುರಾಗಿದೆ. ಮುರ್ರಾ ಕೋಣ/ಗಂಡು ಕರು, ಸುರ್ತಿ ಕೋಣ, ಮಲೆನಾಡು ಗಿಡ್ಡ ಗಂಡು ರಾಸು, ಮಿಶ್ರತಳಿ ಗಂಡು ರಾಸುಗಳನ್ನು ನಿಯಮಿತವಾಗಿ ಎಲ್ಲ ಗೋಶಾಲೆಯವರು ಪಡೆದುಕೊಂಡು ಹೋಗುವಂತೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಇದರ ನಿರ್ವಹಣೆಯನ್ನು ಗೋಶಾಲೆಯವರೇ ನೋಡಿ ಕೊಳ್ಳಬೇಕು.
ಬೀಡಾಡಿ ಗೋವುಗಳಿಗೆ ರಕ್ಷಣೆ ಹಾಗೂ ಪೊಲೀಸರು ವಶಪಡಿಸಿಕೊಂಡ ಗೋವುಗಳಿಗೆ ನೀರು, ಮೇವು ಒದಗಿಸಿಕೊಡುವ ನೆಲೆಯಲ್ಲಿ ರಾಜ್ಯದ ಆಯ್ದ 25 ದೇವಸ್ಥಾನಗಳ ನೇತೃತ್ವದಲ್ಲಿಯೇ ಗೋಶಾಲೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು..
– ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ಸಚಿವರು
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.