ಶತಮಾನ ಸಂಭ್ರಮದ ಶಾಲೆಯಲ್ಲಿ ಉತ್ತಮ ದಾಖಲಾತಿ


Team Udayavani, Jun 24, 2019, 5:02 AM IST

satamana-sambrama

ಆಲಂಕಾರು: ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿದ್ದರೆ ಕಡಬ ತಾಲೂಕು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಾಖಲೆ ನಿರ್ಮಿಸಿದೆ. ಈ ವರ್ಷದ ಶೈಕ್ಷಣಿಕ ಅವಧಿಯ ಒಂದನೇ ತರಗತಿಗೆ ಬರೋಬ್ಬರಿ 54 ವಿದ್ಯಾರ್ಥಿಗಳ ದಾಖಲಾತಿಯಾಗುವುದರ ಮೂಲಕ ಇತರ ಸರಕಾರಿ ಶಾಲೆಗೆಳಿಗೆ ಮಾದರಿಯಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಊರ ಜನತೆಯ ನಿರಂತರ ಪರಿಶ್ರಮದ ಫ‌ಲವಾಗಿ ಈ ಮಹತ್ತರ ಬೆಳೆವಣಿಗೆ ಸಾಧ್ಯವಾಗಿದೆ. 2019ರ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯು ಶತಮಾನೋತ್ಸವವು ಪೂರಕವಾದ ವಾತಾವರಣ ನಿರ್ಮಿಸಿಕೊಟ್ಟಿದೆ.

ಶಾಲೆಯನ್ನು ವಿಷನ್‌ ಪುತ್ತೂರು ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ 1 ಲಕ್ಷ ರೂ. ವೆಚ್ಚದಲ್ಲಿ ಆಕರ್ಷಕ ಬಣ್ಣ ಬಳಿದು ಗೋಡೆಯ ತುಂಬಾ ವರ್ಲಿ ಚಿತ್ರಗಳು° ಬಿಡಿಸಲಾಗಿದೆ. ಶಾಲಾ ಆವರಣವನ್ನು ಹೂಕುಂಡ, ಹೂದೋಟದಿಂದ ಸಿಂಗರಿಸಲಾಗಿದೆ. ಜತೆಗೆ ಸರ್ವಧರ್ಮ ಸಮನ್ವಯದ ಏಳು ಬಣ್ಣಗಳ ಏಕತೆಯ ಧ್ವಜವನ್ನು ಅಳವಡಿಸಿ ಸೌಹಾರ್ದವನ್ನು ಸಾರಲಾಗಿದೆ.

ನಲಿಕಲಿಯಲ್ಲಿ ಇಂಗ್ಲೀಷ್‌ ತರಗತಿ
ಪುತ್ತೂರು ತಾಲೂಕಿನಲ್ಲೇ ಪ್ರಥಮ ಬಾರಿಗೆ ನಲಿಕಲಿ ತರಗತಿಯ ಮೂಲಕ ಇಂಗ್ಲಿಷ್‌ ತರಗತಿಗಳನ್ನು ನೀಡಲಾಗಿದೆ. ಅಲ್ಲದೆ ಯಾವ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗದ ಸಂದರ್ಭ ಇಲ್ಲಿ ಆರಂಭಿಸಲಾಗಿದೆ. ಇದರ ಪರಿಣಾಮ ಈ ವರ್ಷ 55 ವಿದ್ಯಾರ್ಥಿಗಳು ಎಲ್‌ಕೆಜಿ, ಯುಕೆಜಿ ತರಗತಿಗೆ ನೋಂದಾವಣೆಯಾಗಿ ತರಗತಿಗೆ ಹಾಜರಾಗುತ್ತಿದ್ದಾರೆ. 1ರಿಂದ 4 ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್‌ ತರಗತಿಯನ್ನು ಇಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ನ್ಪೋಕನ್‌ ಇಂಗ್ಲಿಷ್‌, ಸೆಂಟೆಂನ್ಸ್‌ ಪ್ರಾಕ್ಟೀಸ್‌, ಕಥೆಗಳನ್ನು 45 ನಿಮಿಷದ ತರಗತಿಯ ಮೂಲಕ ಪ್ರತೀ ದಿನ ನೀಡಲಾಗುತ್ತಿದೆ.

ವಿಶ್ವ ಸಸಂಸ್ಥೆಯ ಯುನಿಸೆಫ್ನ ಸಹಯೋಗ ಹಾಗೂ ಚೆನ್ನೈ ಮೂಲದ ಕರಡಿಪಾತ್‌ ಕಂಪೆನಿ ಪ್ರಾಯೋಜಕತ್ವದಲ್ಲಿ ಶಾಲೆಯ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಲಿಕಾ ತರಗತಿಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕಂಪೆನಿ 40 ಇಂಚಿನ ಎಲ್‌ಇಡಿ ಟಿವಿಯನ್ನು ಅಳವಡಿಸಿದೆ. ಜತೆಗೆ, ಸುಮಾರು 70 ಸಾವಿರ ಮೊತ್ತದ ಕಲಿಕಾ ಸಾಮಗ್ರಿಗಳು° ಶಾಲೆಗೆ ನೀಡಿದೆ. ಇವುಗಳನ್ನು ಬಳಸುವುದಕ್ಕಾಗಿ ಶಾಲಾ ಶಿಕ್ಷಕ ವೃಂದಕ್ಕೆ ಕಂಪೆನಿ ವಿಶೇಷ ತರಬೇತಿಯನ್ನೂ ನೀಡಿದೆ.

ವಿವಿಧ ಕ್ಲಬ್‌ಗಳು
ಮೀನಾ ಕ್ಲಬ್‌, ಸ್ಕೌಟ್‌ ಗೈಡ್ಸ್‌, ಗಣಿತ ಕ್ಲಬ್‌, ವಿಜ್ಞಾನ ಕ್ಲಬ್‌, ಸಾಂಸ್ಕೃತಿಕ ಕ್ಲಬ್‌, ಮಕ್ಕಳ ಹಕ್ಕು ಕ್ಲಬ್‌ಗಳನ್ನು ಮಾಡಿ ಕೊಳ್ಳಲಾಗಿದೆ. ಈ ಶಾಲೆಯಲ್ಲಿ 192 ವಿದ್ಯಾರ್ಥಿಗಳಿದ್ದು 10 ಶಿಕ್ಷಕ ವೃಂದವನ್ನು ಹೊಂದಿದೆ. ಇಲ್ಲಿಗೆ ಮೈಕ್‌ ಸೆಟ್‌, ಸ್ಟೇಜ್‌ ಸೆಟ್ಟಿಂಗ್‌, ಫೋಕಸ್‌ ಲೈಟ್‌, ಬ್ಯಾಂಡ್‌ ಸೆಟ್‌ ಎಲ್ಲವು ಜನತೆಯಿಂದ ದಾನದ ರೂಪದಲ್ಲಿ ಬಂದಿದೆ. ಜತೆಗೆ 15 ಜನ ಸದಸ್ಯರ ಸುಸಜ್ಜಿತ ಬ್ಯಾಂಡ್‌ ಸೆಟ್‌ ತಂಡವಿದೆ. ಶತಮಾನೋತ್ಸವದ ನೆನಪಿಗೆ ಬಯಲುರಂಗ ಮಂದಿರ ನಿರ್ಮಾಣ ವಾಗುತ್ತಿದೆ. ಶಾಲೆಯು 2.33 ಎಕ್ರೆ ಜಾಗವನ್ನು ಹೊಂದಿದ್ದು ವ್ಯವಸ್ಥಿತ ನೀರಿನ ವ್ಯವಸ್ಥೆ ಇದೆ. ಶಾಲೆಗೆ ಸುಸಜ್ಜಿತ ಕಟ್ಟಡ, ಕಂಪ್ಯೂಟರ್‌ ತರಬೇತಿಗೆ, ಲೈಬ್ರರಿ ಹಾಗೂ ಸ್ಮಾರ್ಟ್‌ ಕ್ಲಾಸ್‌ಗಳಿಗಾಗಿ ಕೊಠಡಿಗಳ ಆವಶ್ಯಕತೆಯಿದೆ.

ವಿಶೇಷ ತರಬೇತಿಗಳು
ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಜೀವನವನ್ನು ರೂಪಿಸುವುದಕ್ಕಾಗಿ ಟೈಲರಿಂಗ್‌ ತರಬೇತಿ ಜತೆಗೆ ಕಂಪ್ಯೂಟರ್‌ ತರಬೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಎರಡು ಜತೆ ಸಮವಸ್ತ್ರ, ಶೂ, ಸಾಕ್ಸ್‌, ಗುರುತಿನ ಕಾರ್ಡ್‌, ಬಿಸಿಯೂಟ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾಕ, ಹಿಂದುಳಿದ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮುಂದಿನ ವರ್ಷ ಅಸಹಾಯಕ ವಿದ್ಯಾರ್ಥಿಗಳು° ಶೈಕ್ಷಣಿಕ ದತ್ತು ಪಡೆಯಲಾಗುವುದು ಎಂದು ಶಾಲಾ ಮುಖ್ಯಗುರುಗಳು ತಿಳಿಸಿದ್ದಾರೆ.

 ಅಭಿವೃದ್ದಿ ಕಾರ್ಯಕ್ಕೆ ಪೂರಕ
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಶತಮಾನೋತ್ಸವದ ಸಂದರ್ಭ ಹಾಕಿಕೊಳ್ಳಲಾದ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
– ಅಬೂಬಕ್ಕರ್‌ ನೆಕ್ಕರೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ

 ಆಡಿಟೋರಿಯಂ
ಈಗಾಗಲೇ ನಿರ್ಮಾಣವಾಗಿರುವ ರಂಗಮಂದಿರವನ್ನು ಆಡಿಟೋರಿಯಂ ಆಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
– ಕೆ.ಪಿ. ನಿಂಗರಾಜು, ಶಾಲಾ ಮುಖ್ಯ ಗುರು

–  ಸದಾನಂದ ಆಲಂಕಾರು

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.