ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ
Team Udayavani, Apr 2, 2021, 4:40 AM IST
ಕೊಡಿಯಾಲಬೈಲ್: ಯೇಸು ಕ್ರಿಸ್ತರು ಶಿಲುಬೆಯಲ್ಲಿ ಇಹಲೋಕ ತ್ಯಜಿಸಿದ ದಿನವನ್ನು ಸ್ಮರಿಸಿ ಕ್ರೈಸ್ತರು ಶುಭ ಶುಕ್ರವಾರ (ಈ ಬಾರಿ ಎ. 2ರಂದು)ವನ್ನು ಆಚರಿಸುತ್ತಾರೆ.
ಆ ಪ್ರಯುಕ್ತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ (ವೆ ಆಫ್ ದಿ ಕ್ರಾಸ್), ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಈ ಪವಿತ್ರ ಸಪ್ತಾಹದ ಎಲ್ಲ ದಿನಗಳ (ಗರಿಗಳ ರವಿವಾರ, ಯೇಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆಯ ದಿನ- ಪವಿತ್ರ ಗುರುವಾರ), ಶುಭ ಶುಕ್ರವಾರ, ಈಸ್ಟರ್ ಜಾಗರಣೆಯ ಶನಿವಾರ, ಈಸ್ಟರ್ ಆಚರಣೆಯ ರವಿವಾರ) ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ನಡೆಸಲಾಗುತ್ತದೆ ಎಂದು ಮಂಗಳೂರು ಬಿಷಪ್ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.
ಘಂಟೆಗಳ ಧ್ವನಿ ಇರುವುದಿಲ್ಲ :
ಶುಭ ಶುಕ್ರವಾರದ ದಿನ ಚರ್ಚ್‌ಗಳಲ್ಲಿ ಘಂಟೆಗಳ ಧ್ವನಿ ಇರುವುದಿಲ್ಲ; ಬಲಿ ಪೂಜೆಯ ಸಂಭ್ರಮವೂ ನಡೆಯುವುದಿಲ್ಲ (ಕ್ರೈಸ್ತ ಸಭೆಯಲ್ಲಿ ಶುಭ ಶುಕ್ರವಾರ ದಿನವೊಂದನ್ನು ಹೊರತುಪಡಿಸಿ ಉಳಿದಂತೆ ವರ್ಷದ ಎಲ್ಲ ದಿನಗಳಲ್ಲಿ ಚರ್ಚ್‌ಗಳಲ್ಲಿ ಬಲಿ ಪೂಜೆ ಮತ್ತು ಘಂಟೆಗಳು ಮೊಳಗುತ್ತಿರುತ್ತವೆ). ಕ್ರೈಸ್ತರು ಉಪವಾಸವನ್ನು ಆಚರಿಸುತ್ತಾರೆ. ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ.
ಶಿಲುಬೆಯ ಹಾದಿ :
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಕೊನೆಯುಸಿರೆಳೆದು, ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ “ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಈ ದಿನದ ವೈಶಿಷ್ಟÂಗಳಲ್ಲೊಂದು. ಚರ್ಚ್ ಅಥವಾ ಚರ್ಚ್ ಆವರಣದಲ್ಲಿ ಇದನ್ನು ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಕ್ರೈಸ್ತರು ಸ್ಮರಿಸಿ ಧ್ಯಾನಿಸುತ್ತಾರೆ. ಈ ಸಂದರ್ಭ ವಿವಿಧ ಕಷ್ಟ ಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಸಮಗ್ರ ಲೋಕ ಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಚರ್ಚ್‌ಗಳಲ್ಲಿ ಬೆಳಗ್ಗೆ ಅಥವಾ ಮಧ್ಯಾಹ್ನ ಶಿಲುಬೆಯ ಹಾದಿ ಹಾಗೂ ಸಂಜೆ ವೇಳೆ ಶುಭ ಶುಕ್ರವಾರದ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭ ಪವಿತ್ರ ಗ್ರಂಥ ಬೈಬಲ್‌ನ ವಾಚನ ಮತ್ತು ಮನನ, ಪ್ರವಚನ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಇತ್ಯಾದಿಗಳನ್ನು ನಡೆಸಲಾಗುತ್ತದೆ.
ಜನರು ಕೋವಿಡ್ ದಿಂದ ತತ್ತರಿಸು ತ್ತಿರುವ ಈ ದಿನಗಳಲ್ಲಿ ಶುಭ ಶುಕ್ರವಾರ ದಿನ ನಾವು ಯೇಸು ಕ್ರಿಸ್ತರ ಶಿಲುಬೆಯ ಮರಣವನ್ನು ಸಾರುತ್ತೇವೆ. ಮರಣವನ್ನು ಜಯಿಸಿದ ಯೇಸು ಕ್ರಿಸ್ತರು ನಮ್ಮೆಲ್ಲರಿಗೆ ಹೊಸ ಚೈತನ್ಯವನ್ನು ತುಂಬಲಿ. -ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ,, ಬಿಷಪ್ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.