ಕರಾವಳಿಯಲ್ಲಿ ಉತ್ತಮ ಮಳೆ
Team Udayavani, Jul 20, 2017, 6:50 AM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಬುಧವಾರವೂ ಮಳೆ ಮುಂದುವರಿದಿದೆ. ಮಂಗಳವಾರ ರಾತ್ರಿಯಿಂದಲೇ ಸುರಿದ ಭಾರೀ ಮಳೆ ಬೆಳಗ್ಗೆಯೂ ಮುಂದುವರಿದು, ದಿನವಿಡೀ ಉತ್ತಮ ಮಳೆಯಾಗಿದೆ.
ಮಂಗಳೂರಿನಲ್ಲಿ ಬೆಳಗ್ಗೆ ಉತ್ತಮ ಮಳೆಯಾದರೆ, ಅನಂತರ ಬಿಟ್ಟೂ ಬಿಟ್ಟು ಸುರಿದಿದೆ. ಸುಳ್ಯ, ಕಡಬ, ಪುತ್ತೂರಿ ನಲ್ಲಿಯೂ ಮಳೆ ಬಂದಿದೆ. ವೇಣೂರು, ಪುಂಜಾಲಕಟ್ಟೆ, ಕಿನ್ನಿಗೋಳಿ, ಬಜಪೆ, ಕಟೀಲು ಪರಿಸರದಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗಿದೆ. ಸುರತ್ಕಲ್, ಬಂಟ್ವಾಳದಲ್ಲಿ ಆಗಾಗ ಗಾಳಿ-ಮಳೆಯಾಗಿದೆ.
ಮರ ಬಿದ್ದು ಮನೆಗೆ ಹಾನಿ
ಮಂಗಳವಾರ ರಾತ್ರಿಯ ಗಾಳಿ-ಮಳೆಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಶಕ್ತಿ ನಗರದ ಲಕ್ಷ್ಮೀ ನಾಯ್ಕ ಅವರ ಮನೆಗೆ ಬುಧವಾರ ಮುಂಜಾನೆ ಮರ ಬಿದ್ದು ಹಾನಿಯಾಗಿದೆ.
ಉಡುಪಿ, ಮಣಿಪಾಲ, ತೆಕ್ಕಟ್ಟೆ, ಮಲ್ಪೆ, ಬೆಳ್ಮಣ್ಣು ಮುಂಡ್ಕೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ ಮೊದ ಲಾದೆಡೆ ಉತ್ತಮ ಮಳೆಯಾಗಿದೆ.
ಕೊಲ್ಲೂರು: ಜನಸಂಚಾರಕ್ಕೆ ತೊಡಕು
ಕೊಲ್ಲೂರು ಪರಿಸರದಲ್ಲಿ ಧಾರಾ ಕಾರ ವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತ ಗೊಂಡಿದೆ. ಅದರೊಡನೆ ಇಲ್ಲಿನ ಮುಖ್ಯರಸ್ತೆಯ ಇಕ್ಕೆಲ ಗಳಲ್ಲಿ ಒಳಚರಂಡಿ ವ್ಯವಸ್ಥೆಯ ತೋಡಿನ ಪಾರ್ಶ್ವವು ಕುಸಿದು ಜನಸಂಚಾರಕ್ಕೆ ತೊಡಕನ್ನು ಉಂಟುಮಾಡಿದೆ.
ಕೊಲ್ಲೂರು ಪೇಟೆ ಸಹಿತ ಹಾಲ್ಕಲ್, ಮುದೂರು, ಜಡ್ಕಲ್, ದಳಿ ಮುಂತಾದೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೊಲ್ಲೂರು ದೇವಳದ ಬೃಹತ್ ಯೋಜನೆಗಳಲ್ಲೊಂದಾದ ಒಳಚರಂಡಿ ವ್ಯವಸ್ಥೆಯ ಪೈಪ್ ಕಾಮಗಾರಿ ಪ್ರದೇಶದಲ್ಲಿ ಮಣ್ಣಿನ ಕುಸಿತದಿಂದ ಭಕ್ತರು ಸಹಿತ ಶಾಲಾ ವಿದ್ಯಾರ್ಥಿಗಳಿಗೆ ಆ ಮಾರ್ಗವಾಗಿ ಸಂಚರಿ ಸಲು ಸಮಸ್ಯೆಯಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ದಾರರ ಗಮನಕ್ಕೆ ಈ ವಿಚಾರ ತರ ಲಾಗಿದ್ದು, ಭೂಕುಸಿತದ ಪ್ರದೇಶದ ಸಮಸ್ಯೆ ಯನ್ನು ನಿಭಾ ಯಿಸುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಕತ್ತಲಲ್ಲಿ ಮುದೂರು
ಮಳೆಗಾಲ ಆರಂಭಗೊಂಡಂದಿನಿಂದ ಇಂದಿನವರೆಗೆ ದಿನಂಪ್ರತಿ ರಾತ್ರಿ ಮುದೂರು ಪರಿಸರದಲ್ಲಿ ಮಾಯವಾದ ವಿದ್ಯುತ್ ಮರುದಿನ ಬೆಳಗ್ಗೆ ಸರಿಸುಮಾರು 10 ಗಂಟೆ ಹೊತ್ತಿಗೆ ಬರುತ್ತಿದೆ ಎಂದು ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೊಂದು ಪರಿಹಾರವಾಗಿ ಮುದೂರಿನಲ್ಲೊಂದು ಮೆಸ್ಕಾಂ ಲೈನ್‌ಮೆನ್ ಶಾಶ್ವತವಾಗಿ ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.