ಕದ್ರಿ: ಮೊದಲ ದಿನ ತಗ್ಗದ ವೀಕ್ಷಕರ ಸಂಖ್ಯೆ
Team Udayavani, Apr 24, 2018, 8:05 AM IST
ಮಹಾನಗರ: ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ, ಲೇಸರ್ ಶೋ ಹಾಗೂ ಉದ್ಯಾನವನ ವೀಕ್ಷಣೆಗೆ ಬರುವ ಸಾರ್ವಜನಕರಿಗೆ ಎ. 20ರಿಂದ ದರ ನಿಗದಿಪಡಿಸಲಾಗಿದ್ದು, ಮೊದಲ ದಿನ ಸಾಮಾನ್ಯ ದಿನದಂತೆಯೇ ವೀಕ್ಷಕರು ಆಗಮಿಸಿದ್ದರು. ನೂತನ ದರದ ಬಗ್ಗೆ ಐದು ದಿನಗಳ ಹಿಂದೆಯೇ ಕದ್ರಿ ಉದ್ಯಾನವನದ ದ್ವಾರದಲ್ಲಿ ನಮೂದು ಮಾಡಲಾಗಿದ್ದು, ಇದರಿಂದಾಗಿ ಪ್ರವಾಸಿಗರು ಯಾವುದೇ ರೀತಿಯ ಗೊಂದಲಕ್ಕೊಳಗಾಗಲಿಲ್ಲ. ಸದ್ಯ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಇದ್ದುದರಿಂದ ಹೊರ ಜಿಲ್ಲೆಯ ಪ್ರವಾಸಿಗರು ಕೂಡ ಸಂಗೀತ ಕಾರಂಜಿ ಲೇಜರ್ ಶೋ ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ.
ಕದ್ರಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ ಲೇಸರ್ ಶೋ ಪ್ರತೀ ದಿನ ಸಂಜೆ 7.30ಯಿಂದ 8 ಗಂಟೆಯವರೆಗೆ ಇದ್ದು, ರಜಾ ದಿನಗಳಂದು (2ನೇ ಶನಿವಾರ, 4ನೇ ಶನಿವಾರ ಸೇರಿ) ಸಂಜೆ 7 ಗಂಟೆಯಿಂದ 7.30 ಮತ್ತು ರಾತ್ರಿ 8 ಗಂಟೆಯಿಂದ 8.30ರವರೆಗೆ ಪ್ರದರ್ಶನ ನಿಗದಿಪಡಿಸಲಾಗಿದೆ.
ಸಂಗೀತ ಕಾರಂಜಿ ಮತ್ತು ಲೇಸರ್ ಶೋ ವೀಕ್ಷಣೆಗೆ ವಯಸ್ಕರಿಗೆ 50 ರೂ., ಮಕ್ಕಳಿಗೆ 25 ರೂ. (6 ವರ್ಷದಿಂದ 12 ವರ್ಷದೊಳಗೆ), ಹಳೆ ಜಿಂಕೆ ಉದ್ಯಾನವನ ವೀಕ್ಷಣೆಗೆ ವಯಸ್ಕರಿಗೆ 10 ರೂ., ಮಕ್ಕಳಿಗೆ 5 ರೂ.ವನ್ನು(6 ವರ್ಷದಿಂದ 12 ವರ್ಷದೊಳಗೆ) ತೋಟಗಾರಿಕಾ ಇಲಾಖೆ ಈಗಾಗಲೇ ನಿಗದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.