ಗೂಗಲ್ ಕೀಬೋರ್ಡ್‌ಗೂ ಬಂತು ತುಳು!
Team Udayavani, Nov 19, 2017, 3:36 PM IST
ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಕೂಗುಗಳ ನಡುವೆಯೇ, ಸಾಫ್ಟವೇರ್ ದೈತ್ಯ ಗೂಗಲ್ ತುಳುವಿಗೆ ಪ್ರಾಧಾನ್ಯತೆ ನೀಡಿದೆ.
ಈ ಮೂಲಕ ಕೇಂದ್ರ ತುಳು ಭಾಷೆ ಬಗ್ಗೆ ಇನ್ನೂ ನಿರ್ಧಾರ ತಳೆಯದಿದ್ದರೂ ಗೂಗಲ್ ತುಳು ಭಾಷಿಕರಿಗೆ ಮನ್ನಣೆ ನೀಡಿದೆ. ಈಗ ಆ್ಯಂಡ್ರಾಯಿಡ್ ಮೊಬೈಲ್‌ಗಳಲ್ಲಿನ ಗೂಗಲ್ ಕೀ ಬೋರ್ಡ್ (ಜಿಬೋರ್ಡ್)ನಲ್ಲಿ ಈಗ ತುಳುವನ್ನು ನೇರವಾಗಿ ಟೈಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಸಹಜ ವಾಗಿ ಕರಾವಳಿಗರಿಗೆ ಹರ್ಷ ಮೂಡಿಸಿದೆ. ಈವರೆಗೂ ಜಿಬೋರ್ಡ್‌ನಲ್ಲಿ ಕನ್ನಡ ಟೈಪ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ ಇದೀಗ ಕನ್ನಡದೊಂದಿಗೆ ತುಳುವನ್ನೂ ಕನ್ನಡ ಲಿಪಿಯಲ್ಲೇ ಟೈಪ್ ಮಾಡಬಹುದಾಗಿದೆ.
ತುಳು ಭಾಷೆಯಲ್ಲಿ ಟೈಪ್ ಮಾಡುವ ಸಂದರ್ಭ ಹಿಂದೆಲ್ಲ ಯಾವುದೇ ಸಜೆ ಷನ್‌ಗಳು ಬರುತ್ತಿರಲಿಲ್ಲ. ಹೊಸದಾಗಿ ಅಪ್‌ಡೇಟ್ ಆದ ಜಿಬೋರ್ಡ್‌ನಲ್ಲಿ ತುಳು ಅಳಡಿಸಿಕೊಂಡರೆ ತುಳು ಭಾಷೆಯ ಶಬ್ದಗಳ ವಿವಿಧ ಸಜೆಷನ್ ಗಳು ಬರುತ್ತವೆ. ಇದು ತುಳುವಿನಲ್ಲೇ ಟೈಪ್ ಮಾಡುವ ಮಂದಿಗೆ ಸಹಾಯ
ವಾಗಿದೆ.
ಕರಾವಳಿ ಪ್ರದೇಶದ ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಾಗಿ ತುಳು ಭಾಷಿಕರಿದ್ದು, ಗೂಗಲ್‌ನ ಹೊಸ ಕೀಬೋರ್ಡ್ ಅನು ಕೂಲವನ್ನು ಸ್ವಾಗತಿಸಿದ್ದಾರೆ. ತುಳು ಭಾಷೆಗೆ ಸಂವಿಧಾನ ಮಾನ್ಯತೆ ನೀಡ ಬೇಕೆನ್ನುವುದು ದಶಕಗಳ ಬೇಡಿಕೆಯಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಜಿರೆಗೆ ಆಗಮಿಸಿದ್ದಾಗ ಈ ಬಗ್ಗೆ ವಿಶೇಷ ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರ ಇನ್ನೂ ನಿರ್ಧಾರ ಕೈಗೊಳ್ಳುವ ಮೊದಲೇ ಗೂಗಲ್ ಭಾಷೆ ಆ್ಯಂಡ್ರಾಯಿಡ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.
ಇತರ ಭಾಷೆಯೂ ಸೇರ್ಪಡೆ ಗೂಗಲ್‌ನ ವರ್ಚುವಲ್ ಕೀಬೋರ್ಡ್ ಅಪ್ಲಿಕೇಶನ್ ಅನ್ನು ಹಲವು ಭಾಷೆಗಳ ಸೇರ್ಪಡೆ ಯೊಂದಿಗೆ ಅಭಿವೃದ್ಧಿ ಪಡಿಸುತ್ತಿದ್ದು, ಅನೇಕ ಭಾಷೆಗಳನ್ನು ಸೇರ್ಪಡೆ ಗೊಳಿಸಲಾಗಿದೆ. ತುಳುವಿನೊಂದಿಗೆ ಈಗ ಹರ್ಯಾಣಿ, ಅಬ್ಕಾಸ್, ಮಾರಾರಿ, ಭೋಜ್‌ಪುರಿ ಭಾಷೆಗಳನ್ನೂ ಸೇರಿಸಲಾಗಿದೆ.
ಮೊಬೈಲಲ್ಲಿ ತುಳು ಟೈಪ್ ಮಾಡೋದು ಹೇಗೆ? ನಿಮ್ಮ ಆ್ಯಂಡ್ರಾಯಿಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಜಿಬೋರ್ಡ್ ಅಪ್ಡೆàಟ್ ಮಾಡಿ. ಬಳಿಕ ಮೊಬೈಲ್ ಸೆಂಟ್ಟಿಂಗ್ಸ್‌ಗೆ ಹೋಗಿ
“ಲಾಂಗ್ವೇಜ್ ಆ್ಯಂಡ್ ಸಪೋರ್ಟ್’ನಲ್ಲಿ ಜಿಬೋರ್ಡ್‌ನಲ್ಲಿ ಇಂಗ್ಲಿಷ್ ಜತೆಗೆ ತುಳು ಅನ್ನೂ ಸೇರಿಸಿ. ಬಳಿಕ ಟೈಪ್ ವೇಳೆ ನಿಮಗೆ ತುಳು ಕೂಡ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.