ಗೂನಡ್ಕ : ಶಾಲಾ ಮಕ್ಕಳಿಂದ ವಿವಿಧ ಮಾದರಿಗಳ ಪ್ರದರ್ಶನ
Team Udayavani, Dec 20, 2018, 1:16 PM IST
ಅರಂತೋಡು : ಶಾಲೆಗಳಲ್ಲಿ ವಿದ್ಯಾರ್ಥಿಗಳು ದಿನ ನಿತ್ಯ ಶಿಕ್ಷಕರಿಂದ ಪಾಠ ಕೇಳುತ್ತಾರೆ. ಅರಂತೋಡು ಸಮೀಪದ ಮಾರುತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳು ಅನೇಕ ಮಾದರಿಗಳ ಪ್ರದರ್ಶನ ಮಾಡಿ ಶಿಕ್ಷಕರು, ಸಿಬಂದಿ, ಶಾಲಾ ಆಡಳಿತ ಮಂಡಳಿಯವರಿಗೆ ಪಾಠ ಮಾಡಿದರು. ನರ್ಸರಿ ತರಗತಿಯ ವಿದ್ಯಾರ್ಥಿಗಳು ಗಣಿತದ ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ವಿವಿಧ ಹೂವುಗಳನ್ನು ಹಾಗೂ ವಿವಿಧ ಎಲೆಗಳನ್ನು ಪ್ರದರ್ಶನ ಮಾಡಿ ವಿವರಿಸಿದರು. ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ವಿವಿಧ ತರಕಾರಿ ಬೀಜಗಳನ್ನು ಅಲಂಕರಿಸಿ ಪ್ರದರ್ಶನ ಮಾಡಿ ವಿವರಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿವಿಧ ಔಷಧೀಯ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಔಷಧಿಯಾಗಿ ಉಪಯೋಗಿಸುವುದರಿಂದ ಏನು ಪ್ರಯೋಜನ, ಅದನ್ನು ಉಪಯೋಗಿಸುವ ವಿಧಾನ, ಎಷ್ಟು ಸಮಯ ಉಪಯೋಗಿಸಬೇಕು, ಯಾವ ಕಾಯಿಲೆಗಳಿಗೆ ಇದು ಉಪಯುಕ್ತ ಆಗುತ್ತದೆ ಎನ್ನುವ ಮಾಹಿತಿಗಳನ್ನು ನೀಡಿದ್ದು ವಿಶೇಷವಾಗಿತ್ತು.
ವಿನೂತನ ಕಾರ್ಯಕ್ರಮ
ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾದ ವಿನೂತನ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತೇವೆ. ಶಾಲೆಯಲ್ಲಿ ಹಮ್ಮಿಕೊಂಡ ಅನೇಕ ಮಾದರಿಗಳ ಪ್ರದರ್ಶನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿ ಮಾದರಿಗಳನ್ನು ವಿವರಿಸಿದರು. ಇದರಿಂದಾಗಿ ನಾವು ಕೂಡ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು.
– ಅನಸೂಯಾ
ಉಪಪ್ರಾಂಶುಪಾಲೆ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.