ಗೋರಿಗುಡ್ಡೆ: ನಿತ್ಯ ಅಪಘಾತ; ಸುರಕ್ಷಿತ ಸಂಚಾರ ಸವಾಲು
Team Udayavani, Aug 22, 2021, 3:50 AM IST
ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್-ಎಕ್ಕೂರು ನಡುವೆ ಪ್ರತಿನಿತ್ಯವೆಂಬಂತೆ ಅಪಘಾತ ಗಳು ಸಂಭವಿಸಿತ್ತಿದ್ದು ಸರ್ವಿಸ್ ರಸ್ತೆ ಇಲ್ಲದಿ ರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಗುಡ್ಡ ವೊಂದು ಅಡ್ಡವಾಗಿ ನಿಂತಿದೆ.
ಪಂಪ್‌ವೆಲ್‌ನಿಂದ ಎಕ್ಕೂರು ಕಡೆಗೆ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ಮಾತ್ರ ಸರ್ವಿಸ್ ರಸ್ತೆ ನಿರ್ಮಾಣವಾಗಿದೆ. ಗುಡ್ಡ ಇರುವುದರಿಂದ ಸರ್ವಿಸ್ ರಸ್ತೆ ಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಈ ಪ್ರದೇಶ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.
ಗೋರಿಗುಡ್ಡೆ ಜಂಕ್ಷನ್ ಬಳಿ ಹೆದ್ದಾರಿ ಅಗಲವೇ ಕಿರಿದಾಗಿದೆ. ಅಲ್ಲದೆ ಇಲ್ಲಿ ಹೆದ್ದಾರಿ ನಿರ್ಮಾಣ ಸಮರ್ಪಕವಾಗಿ ನಡೆದಿಲ್ಲ. ಇಲ್ಲಿ 4-5 ಕಡೆಗಳಿಂದ ವಾಹನಗಳ ಬಂದು ಸೇರುತ್ತವೆ. ವಿರುದ್ಧ ದಿಕ್ಕಿನಿಂದಲೂ ವಾಹನಗಳು ಮುನ್ನುಗ್ಗುತ್ತವೆ. ಪಂಪ್‌ವೆಲ್ ಕಡೆಯಿಂದ ಎಕ್ಕೂರು ಕಡೆಗೆ ಸಾಗುವ ಸರ್ವಿಸ್ ರಸ್ತೆ ಗೋರಿಗುಡ್ಡೆಗಿಂತ ಮೊದಲೇ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುವ ಸ್ಥಳ ಅಪಾಯಕಾರಿಯಾಗಿದೆ. ಸರ್ವಿಸ್ ರಸ್ತೆ ಕೆಳಮಟ್ಟದಲ್ಲಿದ್ದು, ಅಲ್ಲಿಂದ ಹೆದ್ದಾರಿ ಪ್ರವೇಶಿಸುವಾಗ ವಾಹನಗಳು ವೇಗ ಹೆಚ್ಚಿಸಿ ಕೊಳ್ಳುತ್ತವೆ.
ಇತ್ತ ಪಂಪ್‌ವೆಲ್ ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳು ಕೂಡ ಸಹಜವಾಗಿಯೇ ವೇಗವಾಗಿ ಧಾವಿಸುತ್ತವೆ. ಈ ಎರಡೂ ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯಲ್ಲಿ ಬಂದು ಗೋರಿಗುಡ್ಡೆ, ನೆಕ್ಕರೆಮಾರ್, ಗುರುಪ್ರಸಾದ್ ಲೇನ್, ವೆಲೆನ್ಸಿಯಾ ಮೊದಲಾದ ಕಡೆಗಳಿಗೆ ಹೋಗುವವರು ಹೆದ್ದಾರಿಯ ಎಡ ಭಾಗಕ್ಕೆ ಬರುತ್ತಾರೆ. ಅತ್ತ ಸರ್ವಿಸ್ ರಸ್ತೆ ಯಿಂದ ಹೆದ್ದಾರಿ ಪ್ರವೇಶಿಸುವವರು ಏಕಾಏಕಿ ಮೇಲೆ ಬಂದು ಹೆದ್ದಾರಿಯ ಎಡಭಾಗದಲ್ಲೇ ಸಂಚರಿಸುತ್ತಾರೆ. ಹಾಗಾಗಿ ಈ ಸ್ಥಳ ಭಾರೀ ಅಪಾಯಕಾರಿಯಾಗಿದೆ. ಹೆದ್ದಾರಿಯ ಮೇಲೆಯೇ ಗುಡ್ಡವಿದ್ದು ಇದು ಕುಸಿಯುವ ಭೀತಿಯೂ ಇದೆ.
ನಗರ ಪ್ರವೇಶಿಸುವ ಸ್ಥಳವೂ ಅಪಾಯಕಾರಿ
ಎಕ್ಕೂರು ಕಡೆಯಿಂದ ಹೆದ್ದಾರಿಯಲ್ಲಿ ಬಂದು ಕಂಕನಾಡಿ ಮೂಲಕ ಸರ್ವಿಸ್ ರಸ್ತೆಯಲ್ಲಿ ನಗರ ಸಂಪರ್ಕಿಸಲು ಇರುವ ಜಾಗ ಭಾರೀ ಅಪಾಯಕಾರಿಯಾಗಿದೆ. ಹೆದ್ದಾರಿಯಲ್ಲಿ ಸಾಗುವ ಹೊಸಬರಿಗೆ ಈ ಸ್ಥಳದಲ್ಲಿ ಸರ್ವಿಸ್ ರಸ್ತೆಗೆ ಸಂಪರ್ಕ ಇದೆ ಎಂಬುದು ಗೊತ್ತಾಗುವುದಿಲ್ಲ. ಸರ್ವಿಸ್ ರಸ್ತೆ ಕಂಡಾಗ ಹಠಾತ್ ಬ್ರೇಕ್ ಹಾಕುತ್ತಾರೆ. ಇದರಿಂದಾಗಿ ಹಿಂದಿನಿಂದ ಬರುವ ವಾಹನಗಳು ಢಿಕ್ಕಿ ಹೊಡೆಯುತ್ತಿವೆ. ಇಲ್ಲಿ ಎಕ್ಕೂರು ಕಡೆಯಿಂದ ಬರುವಾಗ ಸಾಕಷ್ಟು ಮುಂಚಿತವಾಗಿಯೇ ಸ್ಪಷ್ಟವಾಗಿ ಕಾಣುವಂತೆ ಮಾರ್ಗಸೂಚಿಯನ್ನು ಅಳವಡಿಸಬೇಕು. ಅಗತ್ಯ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂಬುದು ಸ್ಥಳೀಯರ ಆಗ್ರಹ.
ಗೋರಿಗುಡ್ಡೆ ಪ್ರದೇಶದ ಗುಡ್ಡವನ್ನು ತೆರವುಗೊಳಿಸಿ ಸರ್ವಿಸ್ ರಸ್ತೆ ನಿರ್ಮಿಸುವ ಕಾಮಗಾರಿಗಾಗಿ ಈಗಾಗಲೇ ಗುಡ್ಡವನ್ನು ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ ಇದುವರೆಗೂ ಕಾಮಗಾರಿ ನಡೆಸಿಲ್ಲ. ಹಲವಾರು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆ ದಾರರೊಂದಿಗೆೆ ಮಾತನಾಡಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇನೆ. –ಸಂದೀಪ್, ಸ್ಥಳೀಯ ಕಾರ್ಪೋರೆಟರ್
ಗೋರಿಗುಡ್ಡೆ ಪ್ರದೇಶದಲ್ಲಿ ವಾಹನಗಳ ಸುರಕ್ಷಿತ ಸಂಚಾರ ಕಷ್ಟವಾಗಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಸರ್ವಿಸ್ ರಸ್ತೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ದೊರೆಯಬಹುದು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. –ಅನುಪಮಾ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Drone: ಪುರಿ ದೇಗುಲದ ಮೇಲೆ ಡ್ರೋನ್ ಹಾರಾಟ: ಪೊಲೀಸರಿಂದ ತನಿಖೆ
Washington: ಹಿಲರಿ, ಸೊರೋಸ್ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ
Govt.,: ಖಾಸಗಿ ಚಾಟ್ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ
Udupi;ಗೀತಾರ್ಥ ಚಿಂತನೆ 147:ಪ್ರತ್ಯಕ್ಷ ಪ್ರಮಾಣ ಮಾತ್ರದಿಂದಲೇ ಜಗದ್ವ್ಯವಹಾರ ಅಸಾಧ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.