ಕಡಬ ಗ್ರಾ.ಪಂ.ನಿಂದ ಸರಕಾರದ ವಸತಿ ಮಂಜೂರಾತಿ ಆದೇಶಪತ್ರ ವಿತರಣೆ
Team Udayavani, Nov 25, 2017, 5:05 PM IST
ಕಡಬ: ಸರಕಾರದ ವಸತಿ ಯೋಜನೆಯಡಿಯಲ್ಲಿ ವಸತಿ ಮಂಜೂರಾತಿ ಪತ್ರ ಪಡೆದುಕೊಂಡವರು ಕೂಡಲೇ ಮನೆ ನಿರ್ಮಿಸುವುದರ ಮೂಲಕ ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಿ.ಪಿ. ವರ್ಗೀಸ್
ಅವರು ಹೇಳಿದರು.
ಅವರು ಕಡಬ ಗ್ರಾ.ಪಂ.ನಲ್ಲಿ 2017-18ನೇ ಸಾಲಿನ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಆದೇಶ ಪತ್ರ ಹಸ್ತಾಂತರಿಸಿ ಮಾತನಾಡಿದರು. ಗ್ರಾ.ಪಂ. ಮೂಲಕ ಗ್ರಾಮದ ಪ್ರತಿಯೊಬ್ಬ ಜನ ಸಾಮಾನ್ಯರಿಗೆ ಸರಕಾರದಿಂದ ಎಲ್ಲ ರೀತಿಯ ಸಹಾಯ ಸೌಲಭ್ಯಗಳನ್ನು ನೀಡುತ್ತಿದ್ದು, ವಸತಿ ರಹಿತರಿಗೆ ಮನೆ ಮಂಜೂರಾತಿ ಕೂಡ ಮಾಡಲಾಗಿದೆ.
ಜಿಲ್ಲೆಯಲ್ಲೇ ಪ್ರಥಮ
ಕಡಬ ತಾಲೂಕು ವ್ಯಾಪ್ತಿಗೆ ಅತೀ ಹೆಚ್ಚಿನ ಮನೆಗಳನ್ನು ನೀಡಲಾಗಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಮನೆ ಮಂಜೂರಾತಿ ಆದೇಶ ಪತ್ರ ಪಡೆದುಕೊಂಡವರು ಕೂಡಲೇ ಮನೆ ಕಟ್ಟಡವನ್ನು ನಿರ್ಮಿಸಬೇಕೆಂದು ಅವರು ಸೂಚಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ , ಸದಸ್ಯರಾದ ಹನೀಫ್ ಕೆ.ಎಂ., ಅಶ್ರಫ್ ಶೇಡಿಗುಂಡಿ, ಎ.ಎಸ್. ಶರೀಫ್, ಸೈಮನ್ ಸಿ.ಜೆ., ಆದಂ ಕುಂಡೋಳಿ, ನಾರಾಯಣ ಪೂಜಾರಿ, ಹರ್ಷ, ನೀಲಾವತಿ ಶಿವರಾಂ, ಶಾಲಿನಿ ಸತೀಶ್ ನಾೖಕ್, ಜಯಂತಿ ಗಣಪಯ್ಯ, ರೇವತಿ, ಜಯಲಕ್ಷ್ಮೀ, ಇಂದಿರಾ, ಯಶೋದಾ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಗ್ರಾ.ಪಂ. ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್ ವಂದಿಸಿದರು.
ವಿಳಂಬವಾಗದಿರಲಿ
ಅನುದಾನವು ಹಂತ ಹಂತವಾಗಿ ಫಲಾನುಭವಿಯ ಖಾತೆಗೆ ನೇರ ಜಮೆಯಾಗುವುದರಿಂದ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮನೆ ಕಟ್ಟಡ ನಿಗದಿತ ಸಮಯದೊಳಗೆ ಪೂರ್ತಿಗೊಳಿಸದಿದ್ದರೆ ಅನುದಾನ ಸಿಗದೆ ಮತ್ತೆ ತಾವು 15 ವರ್ಷದವರೆಗೆ ಸರಕಾರದಿಂದ ಸಿಗುವ ವಸತಿ ಯೋಜನೆಯ ಮನೆಗಾಗಿ ಅರ್ಜಿ ಸಲ್ಲಿಸುವಂತಿಲ್ಲ. ಆದುದರಿಂದ ಫಲಾನುಭವಿಗಳು ಮುತುವರ್ಜಿ ವಹಿಸಿ ಕೂಡಲೇ ಮನೆ ನಿರ್ಮಾಣ ಪೂರ್ತಿಗೊಳಿಸಬೇಕೆಂದು ಎಂದು ಪಿ.ಪಿ. ವರ್ಗೀಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.