ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಇಳಿಮುಖ
ಸಬ್ಸಿಡಿ, ನೇರ ನೆರವು ಸ್ಥಗಿತಗೊಂಡು ಈಗ ತರಬೇತಿ ಮಾತ್ರ
Team Udayavani, Dec 4, 2022, 7:10 AM IST
ಮಂಗಳೂರು: ರಾಜ್ಯದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ದಶಕದ ಹಿಂದೆ ಯೋಜನೆ ರೂಪ ಪಡೆದರೂ ಕೆಲವೇ ವರ್ಷಗಳಲ್ಲಿ ಅದು ಗಂಭೀರತೆ ಕಳೆದುಕೊಂಡು ಹೆಸರು ಬದಲಾಯಿಸುತ್ತ, ಕೀÒಣವಾಗುತ್ತ ಈಗ ಹೆಸರಿಗೆ ಮಾತ್ರ ಎಂಬಂತಾಗಿದೆ.
ಹಲವು ಹೆಸರುಗಳ ಬಳಿಕ ಪ್ರಸ್ತುತ “ಸಾವಯವ ಸಿರಿ’ ಎಂಬ ಹೆಸರಿನಲ್ಲಿ ಯೋಜನೆ ಅನುಷ್ಠಾನದಲ್ಲಿದೆ. ಇದರಲ್ಲಿ ಯಾವುದೇ ಸಬ್ಸಿಡಿ, ಪ್ರೋತ್ಸಾಹ ಇತ್ಯಾದಿಗಳಿಲ್ಲ. ಕೇವಲ ತರಬೇತಿಗಷ್ಟೇ ಸೀಮಿತ. ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಯೋಜನೆ ಇದು. ಇನ್ನು ತೋಟಗಾರಿಕಾ ಇಲಾಖೆಯಲ್ಲಿ ಹಿಂದೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಸಾವಯವ ತರಕಾರಿ ಬೆಳೆಗಳಿಗೆ ಪ್ರೋತ್ಸಾಹ, ಸಾವಯವ ತರಕಾರಿ ಬೆಳೆಯುವ ಗುಂಪುಗಳಿಗೆ ಪ್ರಮಾಣೀಕರಣಕ್ಕೆ ನೆರವು ನೀಡಲಾಗುತ್ತಿತ್ತು. ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲೂ ಅಂತಹ ಕಾರ್ಯಕ್ರಮ ನಿಂತುಹೋಗಿ ಮೂರು ವರ್ಷಗಳು ಕಳೆದಿವೆ.
ದ.ಕ. ಜಿಲ್ಲೆಯಲ್ಲಿ 2008ರಿಂದ ಸಾವಯವ ಕೃಷಿ ಮಿಷನ್ ಅಡಿ ಯಲ್ಲಿ ಕೃಷಿಕರ ಗುಂಪು ರಚನೆ, ಮಾರ್ಗದರ್ಶನ ನೀಡುವುದಕ್ಕಾಗಿ ಪ್ರತ್ಯೇಕ ಸ್ವಯಂ ಸೇವಾ ಸಂಸ್ಥೆ ರಚನೆ ಆಗಿತ್ತು. ಸುಮಾರು 3 ವರ್ಷ ಈ ಗುಂಪುಗಳ ಸದಸ್ಯರಿಗೆ ಸಾವಯವ ಕೃಷಿ, ಹೈನುಗಾರಿಕೆಗೆ ನೆರವು ನೀಡಲಾಗಿತ್ತು.
ಬಹಳ ಹಿಂದಿನ ಯೋಜನೆಯಾಗಿ ರುವುದರಿಂದ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವಯವ ರೈತರು ಆ ವಿಧಾನವನ್ನು ಮುಂದುವರಿ ಸಿಕೊಂಡು ಬಂದಿದ್ದಾರೆ ಎನ್ನುವ ಬಗ್ಗೆ ಇಲಾಖೆಯಲ್ಲೂ ಮಾಹಿತಿ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸಾವಯವ ವಿಧಾನದಲ್ಲಿ ಕೃಷಿ ಮಾಡಿಕೊಂಡಿದ್ದ ರೈತರಲ್ಲಿ ಕೆಲವರು ಅದನ್ನು ಮುಂದುವರಿಸಿದ್ದಾರೆ, ಇನ್ನೂ ಅನೇಕರು ಅದು ಲಾಭಕರವಲ್ಲ ಎಂದು ಕೈ ಬಿಟ್ಟು ಮತ್ತೆ ರಸಗೊಬ್ಬರ ಆಧರಿತ ಕೃಷಿಗೆ ಮರಳಿದ್ದಾರೆ. “ನಾನು ಬಂದಾರು ಸಾವಯವ ಗ್ರಾಮ ಅನುಷ್ಠಾನ ಸಮಿತಿಯ ಸದಸ್ಯನಾಗಿದ್ದೆ, 60 ಮಂದಿ ಸಾವಯವ ಕೃಷಿಕರು ಹಿಂದೆ ಇದ್ದರು. ಈಗ ನಾನಂತೂ ಸಾವಯವ ವಿಧಾನದಲ್ಲೇ ಕೃಷಿ ಮುಂದುವರಿಸಿದ್ದೇನೆ’ ಎನ್ನುತ್ತಾರೆ ಕೃಷಿಕ ರಾಧಾಕೃಷ್ಣ.
ಸಾವಯವ ಕೃಷಿ ಮಿಷನ್ ಬಳಿಕ ಹಲವು ರೂಪಾಂತರ ಕಂಡಿದೆ. 2012ರಲ್ಲಿ “ಅಮೃತಭೂಮಿ ಯೋಜನೆ’, ಆ ಬಳಿಕ “ಪರಂಪರಾಗತ ಕೃಷಿ ವಿಕಾಸ ಯೋಜನೆ’ ಜಾರಿಗೆ ಬಂದಿವೆ. ಸದ್ಯ “ಸಾವಯವ ಸಿರಿ ಯೋಜನೆ’ ಇದರಲ್ಲಿ ಹೊಸ ಆವೃತ್ತಿ.
ಸಾವಯವ ಸಿರಿ
ಪ್ರಸ್ತುತ ರಾಜ್ಯದಲ್ಲಿ ಸಾವಯವ ಸಿರಿ ಎನ್ನುವ ಹೊಸ ಯೋಜನೆ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ ಕೃಷಿಕರಿಗೆ ನೇರವಾಗಿ ಸಹಾಯಧನ ನೀಡುವಂತಹ ಅಂಶಗಳಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆ ಅನುಷ್ಠಾನದ ಸಾಮಾಜಿಕ ಸಂಸ್ಥೆಯಾಗಿ ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್‌ನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಆಯ್ದ 400 ಸಾವಯವ ಆಸಕ್ತ ರೈತರಿಗೆ ಇಲ್ಲಿ ಎರಡು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಉತ್ಪನ್ನದ ಸಂಸ್ಕರಣೆ, ಮಾರುಕಟ್ಟೆ, ಎರೆಹುಳ ಗೊಬ್ಬರ ತಯಾರಿ, ಕಾಂಪೋಸ್ಟ್, ಕೊಯ್ಲೋತ್ತರ ಮೌಲ್ಯ ವರ್ಧನೆ, ಪ್ಯಾಕೇಜಿಂಗ್, ಸಾವಯವ ಪ್ರಮಾಣೀಕರಣ ಇತ್ಯಾದಿ ವಿಚಾರಗಳ ಬಗ್ಗೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯುತ್ತದೆ.
ತಾಲೂಕು ಮಟ್ಟದಲ್ಲಿಲ್ಲ
ಸಾವಯವ ಸಿರಿ
ತಾಲೂಕು ಮಟ್ಟದಲ್ಲಿ ಸಾವಯವ ಸಿರಿ ಅನು ಷ್ಠಾನ ಮಾಡಬೇಕಾಗಿದ್ದರೂ ಸರಕಾರಿ ಆದೇಶದಲ್ಲಿ ತಾಲೂಕು ಮಟ್ಟದ ಅನುಷ್ಠಾನ ಸಂಸ್ಥೆಗಳಿಗೆ ನೀಡ ಬಹುದಾದ, ಆರ್ಥಿಕ ಬೆಂಬಲ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಕಾರಣದಿಂದ ಸದ್ಯದ ಮಟ್ಟಿಗೆ ಯೋಜನೆ ತಡೆಹಿಡಿಯಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರವೇ ಅನುಷ್ಠಾನಗೊಂಡಿದೆ. ಹಿಂದೆ ಸಾವಯವ ಮಿಷನ್‌ನಲ್ಲಿ ತಾಲೂಕು ಮಟ್ಟ, ಹೋಬಳಿ ಮಟ್ಟದಲ್ಲೂ ಸಾವಯವ ಗ್ರಾಮಗಳನ್ನು ಆರಿಸಿ, ಗುಂಪುಗಳಿಂದ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ಸಾವಯವ ಸಿರಿ ಯೋಜನೆಯಡಿ ಮೌಲ್ಯವರ್ಧನೆ, ಪ್ರಮಾಣೀಕರಣ, ಮಾರುಕಟ್ಟೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದರೆ ಸಬ್ಸಿಡಿ ಅಥವಾ ಯಾವುದೇ ನೇರ ಸಹಾಯ ನೀಡುವಂತಹ ಯೋಜನೆಗಳಿಲ್ಲ.
-ಭಾರತಿ, ಉಪನಿರ್ದೇಶಕರು, ಕೃಷಿ ಇಲಾಖೆ
-ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.