ಸರಕಾರಿ ಕಚೇರಿಗಳ ರಸ್ತೆಯಾಯಿತು ಸಂತೆ ಮಾರುಕಟ್ಟೆ !
Team Udayavani, Aug 22, 2017, 6:50 AM IST
ನಗರ : ನಗರದ ಹೃದ ಯಭಾಗದಲ್ಲಿರುವ ಸರಕಾರಿ ಕಚೇರಿ ಗಳನ್ನು ಸಂಪರ್ಕಿಸುವ ರಸ್ತೆಗಳು ಸೋಮವಾರ ಸಂತೆ ಮಾರುಕಟ್ಟೆಗಳಾಗಿ ಪರಿವರ್ತನೆಗೊಂಡಿದ್ದವು. ಕಾರಣ, ಪ್ರತಿ ಸೋಮವಾರ ಸಂತೆ ನಡೆಯುವ ಕಿಲ್ಲೆ ಮೈದಾನ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಿದ್ಧಗೊಳ್ಳುತ್ತಿರುವುದು.
ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ವತಿಯಿಂದ ವರ್ಷಂ ಪ್ರತಿಯಂತೆ ಆ. 25ರಿಂದ ಮಹಾ ಗಣೇಶೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶೀಟ್ ಅಳವಡಿಸುವ ಸೇರಿ ದಂತೆ ವಿವಿಧ ಸಿದ್ಧತಾ ಕಾರ್ಯಗಳು ನಡೆ ಯುತ್ತಿವೆ. ಇದರಿಂದ ಸೋಮವಾರ ಸಂತೆ ವ್ಯಾಪಾರಿಗಳು ಆ. 21 ಮತ್ತು ಆ. 28ರ ಎರಡು ಸೋಮವಾರ ವ್ಯಾಪಾರಕ್ಕಾಗಿ ರಸ್ತೆ ಬದಿಯನ್ನೇ ಅವಲಂಬಿಸಬೇಕಾಗಿದೆ.
ಕಳೆದ ವರ್ಷ ಇರಲಿಲ್ಲ
ಹಲವು ವರ್ಷಗಳಿಂದ ಗಣೇಶೋ ತ್ಸವದ ಸಂದರ್ಭದಲ್ಲಿ ಬರುವ ಸೋಮವಾರ ಸಂತೆ ಇದೇ ರೀತಿ ಕಿಲ್ಲೆ ಮೈದಾನ ಪರಿಸರದ ರಸ್ತೆ ಬದಿಗಳಲ್ಲೇ ನಡೆಯುತ್ತದೆ. ಕಳೆದ ವರ್ಷ ಮಾತ್ರ ಸಹಾಯಕ ಕಮಿಷನರ್ ಅವರ ಆದೇಶದಿಂದ ಕಿಲ್ಲೆ ಮೈದಾನದ ಸಂತೆ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದರಿಂದ ಈ ಪ್ರಮೇಯ ಬಂದಿರಲಿಲ್ಲ. ಈಗ ಸಂತೆ ಮತ್ತೆ ಕಿಲ್ಲೆ ಮೈದಾನಕ್ಕೆ ಬಂದಿರುವುದರಿಂದ ಗಣೇಶೋತ್ಸವದ ಸಂದರ್ಭ ಸೋಮವಾರ ಸಂತೆ ರಸ್ತೆ ಬದಿಯಲ್ಲೇ ನಡೆಯಬೇಕು.
ನಗರಸಭೆ ಜವಾಬ್ದಾರಿ
ಪುತ್ತೂರು ಸಂತೆ ವ್ಯವಹಾರಕ್ಕೆ ಸೂಕ್ತ ಕಟ್ಟೆ ನಿರ್ಮಾಣ ಮಾಡಬೇಕೆಂಬ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ವನ್ನು ಕೈಗೊಳ್ಳುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ.
ಜನಜಂಗುಳಿ
ಈ ಪರಿಸರದಲ್ಲಿ ತಾಲೂಕು ಆಡಳಿತ ಕಚೇರಿ, ಸರಕಾರಿ ಆಸ್ಪತ್ರೆ, ಉಪನೋಂದಣಿ ಕಚೇರಿ, ನ್ಯಾಯಾಲಯ, ನಗರಸಭೆ ಕಚೇರಿ, ಗ್ರಂಥಾಲಯ, ಮೆಸ್ಕಾಂ ಬಿಲ್ ಪಾವತಿ ಕೇಂದ್ರ, ಪಿಡಬ್ಲ್ಯುಡಿ ಕಚೇರಿ ಸಹಿತ ವಿವಿಧ ಸಾರ್ವಜನಿಕ ಆವಶ್ಯಕ ಕಚೇರಿಗಳು ಬರುವುದರಿಂದ ಸೋಮವಾರ ಜನನಿಬಿಡ ಪರಿಸರವಾಗಿ ಪರಿವರ್ತನೆಗೊಂಡಿತ್ತು. ಕೆಲವು ವ್ಯಾಪಾರಿಗಳು ಪ್ಲಾಸ್ಟಿಕ್ ಟಾರ್ಪಾಲ್‌ನಡಿ, ಇನ್ನು ಕೆಲವು ವ್ಯಾಪಾರಿಗಳು ತೆರೆದ ಜಾಗದಲ್ಲಿ ವ್ಯಾಪಾರ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.