ಸರಕಾರಿ ಜಾಗ ಅತಿಕ್ರಮಣ ಕಳವಳಕಾರಿ: ಸುಭಾಶ್‌ ಆಡಿ


Team Udayavani, Oct 11, 2017, 4:26 PM IST

11-Mng–15.jpg

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸರಕಾರಿ ಜಮೀನು ಅತಿಕ್ರಮಣ ವಾಗಿದೆ. ಈ ಜಾಗಗಳ ಬಗ್ಗೆ ಇಲಾಖೆಗಳ ನಡುವೆಯೇ ಗೊಂದಲ ಇದೆ. ಜಿಲ್ಲಾಧಿಕಾರಿ ಈ ವಿಷಯದ ಬಗ್ಗೆ ಕ್ರಿಯಾ ಶೀಲರಾಗಿ ಇದ್ದಾರೋ ಇಲ್ಲವೋ ಎಂಬ ಬಗ್ಗೆಯೇ ಅನುಮಾನ ಬರುತ್ತಿದೆ ಎಂದು ಉಪಲೋಕಾಯುಕ್ತ ನ್ಯಾ| ಸುಭಾಶ್‌ ಬಿ. ಆಡಿ ಕಳವಳ ವ್ಯಕ್ತಪಡಿಸಿದರು.

ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ದೂರು ಪರಿಶೀಲನೆ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸರಕಾರಿ ಜಾಗಗಳಂತೆ ಅರಣ್ಯ ಇಲಾಖೆ ಜಾಗವೂ ಒತ್ತುವರಿಯಾಗಿರುವುದು ಕಳವಳಕಾರಿ. ಸರಕಾರಿ ಯೋಜನೆಗಳನ್ನು ಜಾರಿಗೆ ತರುವುದಾದರೂ ಹೇಗೆ? ಈ ಬಗ್ಗೆಜಿಲ್ಲಾಧಿಕಾರಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

ಬೆಳ್ತಂಗಡಿ ತಾಲೂಕಿನ ಮುಗ್ರು ಗ್ರಾಮದ ಕ್ರಷರ್‌ ದೂರು ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ
ಮಾತನಾಡಿದ ಆಡಿ, ಮೊಗ್ರು ಗ್ರಾಮದ ಕ್ರಷರ್‌ಗೆ ಖುದ್ದಾಗಿ ಭೇಟಿ ನೀಡಿದ್ದೇನೆ. ಅರಣ್ಯ ಇಲಾಖೆ ಹಾಗೂ ಕಂದಾಯ
ಇಲಾಖೆ, ಕ್ರಷರ್‌ ನಡೆಯುತ್ತಿದ್ದ ಜಾಗ ಪರಸ್ಪರ ತಮ್ಮದೆಂದು ಹೇಳಿಕೊಳ್ಳುತ್ತಿವೆ. ಈ ಹಿಂದೆ ಭೇಟಿ ನೀಡಿದಾಗ ಜಂಟಿ ಸರ್ವೆ ನಡೆಸಲು ಸೂಚಿಸಿದ್ದೆ. ಆದರೆ ಇದುವರೆಗೆ ಜಂಟಿ ಸರ್ವೆ ನಡೆಸಿ, ಇಲಾಖೆಗಳ ನಡುವಿನ ಗೊಂದಲ ಬಗೆಹರಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಮಂಗಳೂರಿನಲ್ಲಿ ನಡೆಯುವ ದೂರು ಪರಿಶೀಲನಾ ಸಭೆಯಲ್ಲಿ ಕ್ರಷರ್‌ಗಳ ಬಗ್ಗೆ ವಿಚಾರಣೆ ನಡೆಸಲಾಗುವುದು. ಜಿಲ್ಲಾಧಿಕಾರಿ ಎಲ್ಲ ಮಾಹಿತಿ ನೀಡಬೇಕು ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಬಜ್ಪೆ ಜಲ್ಲಿ ಕ್ರಷರ್‌ ಬಗ್ಗೆಯೂ ವಿಚಾರಣೆ ಮಾಡಲಾಗುವುದು, ಕ್ರಷರ್‌ ಮಾಲಕರು ಸ್ವತಃ ಹಾಜರಿರುವ ಜತೆಗೆ, ವಕೀಲರನ್ನೂ ಕರೆತಂದು ವಾದ ಮಂಡಿಸಬೇಕು ಎಂದು ಸೂಚಿಸಿದರು.

22 ಪ್ರಕರಣ ವಿಚಾರಣೆ
ಒಟ್ಟು 22 ಪ್ರಕರಣಗಳ ವಿಚಾರಣೆ ನಡೆಯಿತು. ವಿಚಾರಣೆ 8ರ ಅಪರ ನಿಬಂಧಕ ಮಹಮ್ಮದ್‌ ಅಶ್ರಫ್‌, ಲೋಕಾಯುಕ್ತ ಪೊಲೀಸ್‌ ಉಪಾಧೀಕ್ಷಕ ಜಗದೀಶ್‌, ಪೊಲೀಸ್‌ ನಿರೀಕ್ಷಕರಾದ ಎಸ್‌. ವಿಜಯ ಪ್ರಸಾದ್‌, ಸುಭಾಶ್ಚಂದ್ರ, ಸಿಬಂದಿ
ಶಶಿಧರ್‌, ಸುರೇಂದ್ರ, ಹರಿಶ್ಚಂದ್ರ, ಪ್ರದೀಪ್‌, ದೇವಯ್ಯ, ಲೋಕೇಶ್‌, ರಾಧೇಶ್‌,  ಶಾರ್ಲೆಟ್‌, ಅಮಿತಾ ಮುಂತಾದವರು ಉಪಸ್ಥಿತರಿದ್ದರು.

ಚಿಕ್ಕಮುಡ್ನೂರಿನ ಎಂ.ಕೆ. ಭಟ್‌ ಎಂಬವರು ಏಕನಿವೇಶನದ 20 ಸೆಂಟ್ಸ್‌ ಜಾಗವನ್ನು ಇಬ್ಭಾಗ ಮಾಡಿ ಇಬ್ಬರಿಗೆ ಮಾರಿದ್ದಾರೆ. ಅಲ್ಲಿ ನಿರ್ಮಿಸಿರುವ ಕಟ್ಟಡವೂ ಅಕ್ರಮವಾಗಿದೆ. 20 ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತೆಗೆ ನ್ಯಾ| ಆಡಿ ಸೂಚಿಸಿದರು.

ಉಜಿರೆ ಸಮೀಪ ನಿರ್ಮಿಸಿದ ಜಲ ಶುದ್ಧೀಕರಣ ಘಟಕದ ಸಮಗ್ರ ತನಿಖೆಗೆ ಉಪಲೋಕಾಯುಕ್ತರು ಆದೇಶಿಸಿದರು.
ಸಹಾಯಕ ಆಯುಕ್ತ, ತಹಶೀಲ್ದಾರ್‌ ಮೊದಲಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಸೂಚಿಸಿದರು. ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಿದ ಬಳಿಕ ಬಾವಿ ನೀರು ಹಾಳಾಗಿದೆ. ಮಾತ್ರವಲ್ಲ ಘಟಕಕ್ಕೆ ನಮ್ಮ ಆಕ್ಷೇಪವೂ ಇತ್ತು ಎಂದು ದೂರುದಾರ ರಂಜನ್‌ ತಿಳಿಸಿದರು. 

ಸುಳ್ಯದ ಅಲೆಕ್ಕಾಡಿ ಪ. ಜಾತಿಗೆ ಸೇರಿದ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ. ಕೆಲ ಸಮಯಗಳ ಹಿಂದೆ ರಸ್ತೆಯಿತ್ತು. ಇದೀಗ ಕಾಲುದಾರಿ ಮಾತ್ರವಿದೆ. ಮಕ್ಕಳಿಗೆ, ನಾಗರಿಕರಿಗೆ ಸಮಸ್ಯೆಯಾಗಿದೆ ಎಂದು ದೂರು ನೀಡಲಾಗಿತ್ತು. ಪರಿಶೀಲಿಸಿದ ಉಪಲೋಕಾಯುಕ್ತರು, ಜಾಗ ಬಿಟ್ಟು ಕೊಡಲು ಸ್ಥಳೀಯರಲ್ಲಿ ಪಿಡಿಒ ಮನವಿ ಮಾಡಿಕೊಳ್ಳಬೇಕು. ಆಗದೇ ಇದ್ದರೆ ಭೂ ಸ್ವಾಧೀನಕ್ಕೆ ಬರೆಯಬೇಕು ಎಂದು ಸೂಚಿಸಿದರು. ನೀರು ಬಿಡುವ ವೇಳೆ, ವ್ಯಕ್ತಿಯ ವಿವರ ನೀಡದಿರುವ ಬಗ್ಗೆ ದೂರೊಂದು ಬಂದಿತ್ತು. ಇಂತಹ ಕ್ಷುಲ್ಲಕ ದೂರು ಸಲ್ಲಿಸಲು ಅವಕಾಶ ಏಕೆ ನೀಡಬೇಕಿತ್ತು? ಅಲ್ಲಿಯೇ
ವಿವರ ನೀಡುತ್ತಿದ್ದರೆ ಲೋಕಾಯುಕ್ತಕ್ಕೆ ದೂರು ಬರುತ್ತಲೇ ಇರಲಿಲ್ಲ. ಅಧಿಕಾರಿಗಳು ಅಸಡ್ಡೆ ಮಾಡುತ್ತಿದ್ದಾರೆ ಎಂದು ಉಪ ಲೋಕಾಯುಕ್ತರು ಅಸಹನೆ ವ್ಯಕ್ತಪಡಿಸಿದರು.

ಮರುಪರಿಶೀಲನೆ ಮಾಡಿ 
ಗಣಿ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಪಡೆದು ಮಾತನಾಡಿದ ಉಪಲೋಕಾಯುಕ್ತರು, ಜಿಲ್ಲೆ ಯಲ್ಲಿ 84 ಕ್ರಷರ್‌ಗೆ ಅನುಮತಿ ನೀಡಲಾಗಿದೆ. ಮೊಗ್ರು ಕ್ರಷರ್‌ ಘಟನೆ ಸಾಂಕೇತಿಕ ಅಷ್ಟೇ. ಇಂತಹ ಅದೆಷ್ಟೋ ಕ್ರಷರ್‌ ಇರಬಹುದು. ಸ್ವಲ್ಪ ಜಾಗ ತೋರಿಸಿ, ಹೆಚ್ಚಿನ ಜಾಗದಲ್ಲಿ ಕ್ರಷರ್‌ ನಡೆಸುತ್ತಿರಬಹುದು. ಈ ಬಗ್ಗೆ ತನಿಖೆ ನಡೆಸುವ, ಜಿಲ್ಲೆಯ ಎಲ್ಲ ಕ್ರಷರ್‌ಗಳ ಪರವಾನಿಗೆಯನ್ನು ಮರು ಪರಿಶೀಲಿಸುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ದೂರುದಾರ ಕೇಶವ ಅಗರ್ತ ಅವರಿಗೆ ತಿಳಿಸಿದರು.

ಟಾಪ್ ನ್ಯೂಸ್

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.