Govt Hospitalಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ
Team Udayavani, Dec 3, 2024, 12:49 AM IST
ಮಂಗಳೂರು: ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡರೋಗಿಗಳಿಗೆ ಹೊರಗಿನ ಮೆಡಿಕಲ್ ಸ್ಟೋರ್‌ಗಳಿಂದ ಔಷಧ ತರಲು ವೈದ್ಯರು ಸೂಚಿಸಬಾರದು, ಸರಕಾರಿ ಆಸ್ಪತ್ರೆಯ ಸ್ವಂತ ನಿಧಿ ಯಿಂದಲೇ ಅದನ್ನು ಭರಿಸಿ ಔಷಧ ಒದಗಿಸಿಕೊಡಲೇಬೇಕು. ಹೊರಗಿನಿಂದ ತರಲು ಸೂಚಿಸಿದ ಪ್ರಕರಣ ಗೊತ್ತಾದರೆ ಸ್ವಯಂಪ್ರೇರಿತವಾಗಿ ಲೋಕಾಯುಕ್ತ ದೂರು ದಾಖಲಿಸಿಕೊಳ್ಳಲಿದೆ ಎಂದು ಉಪಲೋಕಾಯುಕ್ತ ನ್ಯಾ| ಬಿ.ವೀರಪ್ಪ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ಸರಕಾರಿ ಆಸ್ಪತ್ರೆಗಳು ಉತ್ತಮ ವ್ಯವಸ್ಥೆಗಳನ್ನು ಹೊಂದಿವೆ. ಔಷಧ ಕೊರತೆಯಾಗದಂತೆ ಸರಕಾರದಿಂದ ಸಾಕಷ್ಟು ಅನುದಾನವೂ ಇದೆ. ಆದರೆ ವೈದ್ಯರು ರೋಗಿಗಳಿಗೆ ಚೀಟಿ ಕೊಟ್ಟು ಹೊರಗೆ ಅಲೆದಾಡಿಸುವುದು ಸರಿಯಲ್ಲ ಎಂದರು.
ಸುಳ್ಳು ಕೇಸ್ ಹಾಕಿದರೆ ಜೈಲು
ಲೋಕಾಯುಕ್ತ ಮುಂದೆ ಸುಳ್ಳು ಕೇಸು ಹಾಕುವವರ ಸಂಖ್ಯೆ ತೀರಾ ಹೆಚ್ಚುತ್ತಿದೆ, ಇದರಿಂದಾಗಿ ನಿಜವಾದ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸವಾಲಾಗಿದೆ. ಹಾಗಾಗಿ ಸುಳ್ಳು ಪ್ರಕರಣ ದಾಖಲಿಸುವವರನ್ನು 1ರಿಂದ 3 ವರ್ಷ ಕಾಲ ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿದರು. ಅಧಿಕಾರಿಗಳು ಲೋಕಾ ಯುಕ್ತ ಆದೇಶವನ್ನು ಪರಿಪಾಲಿಸದೆ ಜನರನ್ನು ಸತಾಯಿಸಿದರೆ ಅವರನ್ನೂ ಲೋಕಾಯುಕ್ತ ಕಾಯ್ದೆಯನ್ವಯ ಜೈಲಿಗೆ ಕಳುಹಿಸಬೇಕಾದೀತು ಎಂದರು.
ಕರಪ್ಷನ್-ಕ್ಯಾನ್ಸರ್
ಭ್ರಷ್ಟಾಚಾರ ಎನ್ನುವುದು ಕ್ಯಾನ್ಸರ್‌ಗಿಂತಲೂ ಅಪಾಯಕಾರಿ. ಖಾಸಗಿ ಆಸ್ಪತ್ರೆಗಳು, ಶಾಲೆಗಳ ಉದ್ಧಾರಕ್ಕಾಗಿ ಸರಕಾರಿ ಆಸ್ಪತ್ರೆಗಳು- ಶಾಲೆಗಳನ್ನು ಹಾಳು ಮಾಡುವ ವ್ಯವಸ್ಥೆಯಿದೆ. ಸರಕಾರಿ ಅಧಿಕಾರಿಗಳಾಗಿ ಉತ್ತಮ ವೇತನ ಪಡೆಯುತ್ತಿದ್ದೀರಿ. ಮತ್ತೇಕೆ ಭ್ರಷ್ಟಾಚಾರ ಮಾಡುತ್ತೀರಿ ಎಂದು ಪ್ರಶ್ನಿಸಿದ ವೀರಪ್ಪ ಅವರು, ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ಜನ ತಿರುಗಿಬೀಳುವ ದಿನ ದೂರವಿಲ್ಲ ಎಂದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ದುರದೃಷ್ಟವಶಾತ್ ಅನೇಕ ಕಡೆಗಳಲ್ಲಿ ದುರಾಡಳಿತ ನಡೆಯುತ್ತಿದೆ ಎಂದರು.
ನಮ್ಮ ದೇಶಕ್ಕೆ ಸಂವಿಧಾನವೇ ಭಗವದ್ಗೀತೆಯಂತೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷ ಕಳೆದರೂ ಸಂವಿಧಾನದ ನಾಲ್ಕು ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಸರಿಯಾಗಿ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎನ್ನುವ ನೋವಿದೆ. ಜನರಿಗೆ ಈಗಲೂ ನ್ಯಾಯ ದೊರೆಯುತ್ತಿಲ್ಲ. ಸರಕಾರದ ಸವಲತ್ತುಗಳು ಅರ್ಹರಿಗೆ ದೊರೆಯದೆ ಉಳ್ಳವರು ಅದರ ದುರುಪಯೋಗ ಮಾಡುವಂತಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ನ್ಯಾ| ವೀರಪ್ಪ ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ಲೋಕಾಯುಕ್ತ ಉಪನಿಬಂಧಕ ರಾದ ಕೆ.ಎಂ. ರಾಜಶೇಖರ್, ಕೆ.ಎಂ. ಬಸವರಾಜಪ್ಪ,, ಅರವಿಂದ ಎನ್.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್‌ಪಿ ಯತೀಶ್ ಎನ್., ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ, ಜಿಪಂ ಸಿಇಒ ಡಾ| ಆನಂದ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.
ಸ್ಥಳದಲ್ಲೇ ದೂರು ಅರ್ಜಿ ವಿಚಾರಣೆ
ಬೆಳಗ್ಗೆ 11.30ರ ಬಳಿಕ ಆರಂಭಗೊಂಡ ಅಹವಾಲು ಸ್ವೀಕಾರ, ರಾತ್ರಿ ವರೆಗೂ ನಡೆಯಿತು. ಪ್ರತಿಯೊಬ್ಬರ ದೂರುಗಳನ್ನು ವೈಯಕ್ತಿಕವಾಗಿ ಆಲಿಸಿದ ಅವರು, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವುದಕ್ಕೆ ಸಮಯ ಮಿತಿ ನಿಗದಿಪಡಿಸಿ ಸೂಚನೆ ನೀಡಿದರು. ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದರು.
ಬಜ್ಪೆ ಪಟ್ಟಣ ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯ ಬಾಕಿ 2.63 ಲಕ್ಷ ರೂ. ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರ ರಾಬರ್ಟ್‌ಎಂಬವರು ದೂರು ನೀಡಿದ್ದು, ಒಂದು ತಿಂಗಳೊಳಗೆ ಅದನ್ನು ಪಾವತಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ನ್ಯಾ| ವೀರಪ್ಪ ಸೂಚಿಸಿದರು. ಹಳೆಯಂಗಡಿ ವ್ಯಾಪ್ತಿಯಲ್ಲಿ ಡೋರ್ ನಂಬರ್ ನೀಡಲು ಸತಾಯಿಸುತ್ತಿದ್ದ ಪ್ರಕರಣದಲ್ಲಿ ತಿಂಗಳೊಳಗೆ ಡೋರ್ ನಂಬರ್ ನೀಡದಿದ್ದರೆ 6 ತಿಂಗಳು ಜೈಲಿಗೆ ಕಳುಹಿಸುವುದಾಗಿ ಹಳೆಯಂಗಡಿ ಪಿಡಿಒಗೆ ಎಚ್ಚರಿಕೆಯಿತ್ತರು.
ಸ್ಮಾರ್ಟ್‌ಸಿಟಿಯ ಜಲಮುಖಿ ಯೋಜನೆಯವರು ಹಸಿರು ನ್ಯಾಯಾ ಧಿಕರಣದ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ನಾಗರಿಕರ ದೂರಿಗೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಉಲ್ಲಂಘನೆಯಾಗುವುದಾದರೆ ಅಲ್ಲೇ ಮೇಲ್ಮನವಿ ಸಲ್ಲಿಸಿ ಎಂದು ಸೂಚಿಸಿದರು.
ಸ್ಟೇಟ್‌ಬ್ಯಾಂಕ್‌ನಿಂದ ಪಡೀಲ್ ಹಾಗೂ ಸ್ಟೇಟ್‌ಬ್ಯಾಂಕ್ ಅಡ್ಯಾರ್ 2, ರೈಲ್ವೇ ಸ್ಟೇಷನ್‌ನಿಂದ ನಂತೂರು, ಮರೋಳಿ, ಸುರತ್ಕಲ್ ಖಾಸಗಿ ಬಸ್ ಐದು ವರ್ಷದಿಂದ ಸ್ಥಗಿತಗೊಂಡಿದ್ದು, ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಶಾಶ್ವತವಾಗಿ ಓಡಿಸುವಂತಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಖಾಸಗಿ ಬಸ್‌ನವರಿಗೆ ನೋಟಿಸ್ ನೀಡಿ, ಮುಂದೆ ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು.
190 ಅರ್ಜಿ ವಿಲೇವಾರಿ
ಮಂಗಳೂರು: ಉಪಲೋಕಾಯುಕ್ತ ನ್ಯಾ|ಮೂ.ವೀರಪ್ಪ ಅವರು ಸೋಮವಾರ ಮಂಗಳೂರಿನಲ್ಲಿ ನಡೆಸಿದ ದ.ಕ. ಜಿಲ್ಲಾ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 190 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಆಗಮಿಸುವ ನಾಗರಿಕರ ದೂರು ಅರ್ಜಿಸ್ವೀಕರಿಸಲು ಸಭಾಂಗಣದ ಹೊರಗಡೆಯೇ ಪಂಡಾಲ್ ಹಾಕಿ, ಅಧಿಕಾರಿಗಳು ಹೆಲ್ಪ್ಡೆಸ್ಕ್ ವ್ಯವಸ್ಥೆ ಮಾಡಿದ್ದರು. ಅವರ ಸರದಿ ಬಂದಾಗ ಸಭಾಂಗಣದ ಒಳಗೆ ಬಂದು ಉಪಲೋಕಾಯುಕ್ತರ ಮುಂದೆಯೇ ಕುಳಿತು ತಮ್ಮ ಅಹವಾಲು ಹೇಳಲು, ಅವರ ಆಕ್ಷೇಪ ಇರುವ ಅಧಿಕಾರಿಯನ್ನೂ ಅಲ್ಲೇ ಕರೆಸಿ ಸಮಸ್ಯೆ ವಿಲೇವಾರಿ ಮಾಡಲಾಗುತ್ತಿತ್ತು.
ಮಧ್ಯಾಹ್ನ ವರೆಗೆ ಉಪಲೋಕಾಯುಕ್ತರೊಬ್ಬರ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಮಧ್ಯಾಹ್ನದ ಬಳಿಕ ಉಪಲೋಕಾಯುಕ್ತರು, ಅವರ ಕಚೇರಿಯ ಇಬ್ಬರು ಉಪನಿಬಂಧಕರು ಸಹಿತ ಮೂರು ಪೀಠಗಳಾಗಿ ವಿಂಗಡಿಸಿ ಅರ್ಜಿ ವಿಚಾರಣೆ ಕೈಗೊಳ್ಳಲಾದ ಕಾರಣ ಪ್ರಕ್ರಿಯೆಗೆ ವೇಗ ಸಿಕ್ಕಿತು.
ಸಭೆಗೂ ಮಳೆಕಾಟ!
ಉಪಲೋಕಾಯುಕ್ತರ ಅಹವಾಲು ಸಭೆಗೂ ಸೋಮವಾರ ಸಂಜೆ ಮಳೆ ಕಾಟಕೊಟ್ಟಿತು. ತೀವ್ರ ಮಳೆಯಾದ್ದರಿಂದ ಬಾಗಿಲಿನ ಮೂಲಕ ಮಳೆ ನೀರು ಒಳ ನುಗ್ಗಿ ಅಧಿಕಾರಿ, ಮಾಧ್ಯಮ ಗ್ಯಾಲರಿ ಭಾಗದಲ್ಲಿ ಸೇರಿಕೊಂಡಿತು. ಬಳಿಕ ಸಿಬಂದಿ ಮಳೆ ನೀರು ಹೊರಹಾಕಿದರು.
ಕೆಲವು ವಿಚಾರ ಲೋಕಾಯುಕ್ತಕ್ಕೆ ಶಿಫಾರಸು
ನಂತೂರು, ಕೆಪಿಟಿ ರಸ್ತೆ ಮೇಲ್ಸೇತುವೆ ಪರ್ಯಾಯ ವ್ಯವಸ್ಥೆ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ತಮ್ಮ ಸಲಹೆ ಸ್ವೀಕರಿಸಿಲ್ಲ ಎಂದು ಸಿಟಿಜನ್ ಫಾರ್ ಸಸ್ಟೆನೆಬಲ್ ಡೆವಲಪ್‌ಮೆಂಟ್‌ನ ಪ್ರತಿನಿಧಿಗಳು ಆಕ್ಷೇಪಿಸಿದರು. ಈ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಲೋಕಾಯುಕ್ತಕ್ಕೆ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದ್ದಾರೆ. ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಬಗ್ಗೆಯೂ ಆಕ್ಷೇಪ ಸಲ್ಲಿಸಿದ್ದು ಲೋಕಾಯುಕ್ತ ತನಿಖೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ
Mangaluru: ಅಡಿಕೆ ಸಂಶೋಧನೆಗಾಗಿ ಅನುದಾನ: ಸಚಿವೆ ನಿರ್ಮಲಾರಿಗೆ ಕ್ಯಾಂಪ್ಕೊ ಆಗ್ರಹ
Vatican: ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಮಾನವೀಯತೆ ಸಂದೇಶ ನೀಡಿದ ಖಾದರ್
Ullal; ತಲಪಾಡಿ ಟೋಲ್ ಸಿಬಂದಿಗೆ ಹಲ್ಲೆ: ಕಾರಿನಲ್ಲಿದ್ದ ಮೂವರ ತಂಡದ ಕೃತ್ಯ
Mangaluru: ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Air Quality: ದೆಹಲಿಯಲ್ಲಿ ವಿಧಿಸಿರುವ ನಿರ್ಬಂಧ ತೆಗೆಯಲು ಸುಪ್ರೀಂಕೋರ್ಟ್ ನಕಾರ!
Film Screening: “ದ ಸಾಬರ್‌ಮತಿ’ ಸಿನಿಮಾ ನೋಡಿ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ
Survey Stay: ಮಸೀದಿ ಸಮೀಕ್ಷೆ ಮನವಿ ಪರಿಗಣಿಸದಂತೆ ಕೋರಿ ಸುಪ್ರೀಂಗೆ ಕಾಂಗ್ರೆಸ್ ಅರ್ಜಿ
RSS vs INC: ಹೆಚ್ಚು ಮಕ್ಕಳ ಹೆರಲು ನಾವು ಮೊಲಗಳೇ?: ಕಾಂಗ್ರೆಸ್ ಪ್ರಶ್ನೆ
Space Scientist: ಭೂ ಕೆಳಕಕ್ಷೆ ಮುಚ್ಚುತ್ತಿರುವ 14,000 ಉಪಗ್ರಹ, ತ್ಯಾಜ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.