ಸಂಪೂರ್ಣ ಸಾಕ್ಷರತೆಯತ್ತ ಸಾವಿರ ಗ್ರಾ.ಪಂ.ಗಳು; ದ.ಕ., ಉಡುಪಿಯ 51 ಗ್ರಾ.ಪಂ.ಗಳಲ್ಲಿ ಸಿದ್ಧತೆ
Team Udayavani, Sep 29, 2022, 6:30 AM IST
ಮಂಗಳೂರು: ಮುಂದಿನ 2 ವರ್ಷಗಳಲ್ಲಿ ರಾಜ್ಯದ ಒಂದು ಸಾವಿರ ಗ್ರಾ.ಪಂ.ಗಳನ್ನು “ಸಂಪೂರ್ಣ ಸಾಕ್ಷರತ ಗ್ರಾಮ ಪಂಚಾಯತ್’ಗಳೆಂದು ಗುರುತಿಸಲು ಸಿದ್ಧತೆ ನಡೆಸಲಾಗಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಗಳ ಒಟ್ಟು 51 ಗ್ರಾ.ಪಂ.ಗಳು ಸಂಪೂರ್ಣ ಸಾಕ್ಷರತ ಗ್ರಾಮಗಳಾಗಿ ರೂಪುಗೊಳ್ಳಲಿವೆ.
ದ.ಕ.ದಲ್ಲಿ 24,284 ಮತ್ತು ಉಡುಪಿ ಜಿಲ್ಲೆಯಲ್ಲಿ 10,666 ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು 9,55,481 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಅವರನ್ನು ಸಾಕ್ಷರರನ್ನಾಗಿಸುವ ಉದ್ದೇಶ ದಿಂದ “ಒಂದು ಸಂಪೂರ್ಣ ಸಾಕ್ಷರತಾ ಗ್ರಾಮಗಳು’, “ನವಭಾರತ ಸಾಕ್ಷರತ ಕಾರ್ಯಕ್ರಮ’ ಹಮ್ಮಿ ಕೊಳ್ಳಲಿದ್ದು ಪೂರಕವಾಗಿ “ಲಿಂಕ್ ಡಾಕ್ಯುಮೆಂಟ್’ ಚಟುವಟಿಕೆ ಕೂಡ ನಡೆಯಲಿದೆ. ಈ ವರ್ಷ 500 ಹಾಗೂ ಮುಂದಿನ ವರ್ಷ 500 ಗ್ರಾ.ಪಂ.ಗಳು “ಸಂಪೂರ್ಣ ಸಾಕ್ಷರತ ಗ್ರಾ.ಪಂ.’ಗಳಾಗಲಿವೆ.
ಯಾರು ಸಾಕ್ಷರರು?
ಸಾಕ್ಷರರೆನಿಸಿಕೊಳ್ಳಲು ಕೇವಲ ಅಕ್ಷರ ಜ್ಞಾನ ವಷ್ಟೇ ಸಾಲದು. ಜತೆಗೆ ಮೂಲ ಶಿಕ್ಷಣ, ಸುಲಭ ಲೆಕ್ಕಾಚಾರ, ಜೀವನ ಕೌಶಲ ಅಭಿವೃದ್ಧಿ ಮೊದಲಾ ದವುಗಳನ್ನು ತಿಳಿಸಿಕೊಡುವುದು ಸಾಕ್ಷರತೆಯ ವ್ಯಾಖ್ಯಾನ. ವಯಸ್ಕರ ಶಿಕ್ಷಣ ಕಾರ್ಯಕ್ರಮದಡಿ ಸಾಕ್ಷರತ ತರಗತಿ, ಪಾಠಗಳು ನಡೆದು ಅದರಲ್ಲಿ ತೇರ್ಗಡೆಯಾದವರನ್ನು ಸಾಕ್ಷರರು ಎಂದು ಪರಿ ಗಣಿಸಲಾಗುತ್ತದೆ. 15ರಿಂದ 60 ವರ್ಷ ವಯಸ್ಸಿ ನವರನ್ನು ಇದಕ್ಕೆ ಕಡ್ಡಾಯವಾಗಿ ಪರಿಗಣಿಸ ಲಾಗುತ್ತದೆ.
ಗುರುತಿಸಲಾಗಿರುವ ಗ್ರಾ.ಪಂ.ಗಳು
ಉಡುಪಿ ಜಿಲ್ಲೆ: 80 ಬಡಗಬೆಟ್ಟು, ಕಲ್ಯಾಣಪುರ, ಬೇಳೂರು, ತೆಕ್ಕಟ್ಟೆ, ಕೋಣಿ, ಉಳ್ಳೂರು 74, ನೀರೆ, ಈದು, ಹಿರ್ಗಾನ, ರೆಂಜಾಳ, ಮಡಾಮಕ್ಕಿ, ಶಿವಪುರ, ಕೊಲ್ಲೂರು, 38 ಕಳತ್ತೂರು, ಹಾವಂಜೆ.
ದ.ಕ. ಜಿಲ್ಲೆ: ಕಡೇಶ್ವಾಲ್ಯ, ಪೆರ್ನೆ, ಕಾವಳ ಮುಡೂರು, ಸಜಿಪನಡು, ಪಜೀರು, ನಾವೂರು, ಮೇಲಂತಬೆಟ್ಟು, ಮಲವಂತಿಗೆ, ಕಡಿರುದ್ಯಾವರ, ಅರಂಬೋಡಿ, ಪುದುವೆಟ್ಟು, ಕಟೀಲು, ಉಳಾçಬೆಟ್ಟು, ಬಡಗ ಎಡಪದವು, ಪೆರ್ಮುದೆ, ಹಳೆಯಂಗಡಿ, ಐಕಳ, ಹೊಸಬೆಟ್ಟು, ವಾಲ್ಪಾಡಿ, ಕಲ್ಲಮುಂಡ್ಕೂರು, ದರೆಗುಡ್ಡೆ, ನೆಲ್ಲಿಕಾರು, ಬಲಾ°ಡು, ಬನ್ನೂರು, ಉಪ್ಪಿನಂಗಡಿ, ಬಜತ್ತೂರು, ಒಳಮೊಗ್ರು, ಕೆಯ್ಯೂರು, ಕಡಬ, ಎಡಮಂಗಲ, ಅಲಂಕಾರು, ನೂಜಿಬಾಳ್ತಿಲ, ಪಂಜ, ಸಂಪಾಜೆ, ಮಂಡೆಕೋಲು.
ಕಡಿಮೆ ಅನಕ್ಷರಸ್ಥರು ಇರುವ ಗ್ರಾ.ಪಂ.ಗಳ ಆಯ್ಕೆ
ಜಿಲ್ಲೆಯ ಇತರ ಗ್ರಾ.ಪಂ.ಗಳಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಅನಕ್ಷರಸ್ಥರನ್ನು ಹೊಂದಿರುವ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಸಂಪೂರ್ಣ ಸಾಕ್ಷರ ಗ್ರಾ.ಪಂ.ಗಳನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ. ಮುಂದಿನ ಹಂತದಲ್ಲಿ ಇತರ ಗ್ರಾ.ಪಂ.ಗಳನ್ನು ಕೂಡ ಸಂಪೂರ್ಣ ಸಾಕ್ಷರ ಗ್ರಾ.ಪಂ.ಗಳನ್ನಾಗಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಕಡಿಮೆ ಇದೆ
ಇಲಾಖೆಯವರ ಬಳಿ ಇರುವ ಅಂಕಿ-ಅಂಶಗಳು 2 ವರ್ಷಗಳ ಹಿಂದಿನ ಸಮೀಕ್ಷೆಯದ್ದು. ಈಗ ಮರುಸಮೀಕ್ಷೆ ನಡೆದರೆ ಅನಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆಯಾಗಲಿದೆ ಎಂದು ಹಲವು ಗ್ರಾ.ಪಂ.ನವರು ಹೇಳುತ್ತಿದ್ದಾರೆ.
ಈ ವರ್ಷ 8 ಗ್ರಾ.ಪಂ.ಗಳನ್ನು ಸಂಪೂರ್ಣ ಸಾಕ್ಷರತ ಗ್ರಾ.ಪಂ.ಗಳನ್ನಾಗಿ ರೂಪಿಸುವ ಪ್ರಕ್ರಿಯೆ ನಡೆಯಲಿದೆ. ಮುಂದಿನ ವಾರದಿಂದ ಸಮೀಕ್ಷೆ ನಡೆಯಲಿದೆ. ಅಕ್ಟೋಬರ್‌ನಲ್ಲಿ ತರಗತಿ ಆರಂಭವಾಗಲಿದ್ದು ಮಾರ್ಚ್ ಅಂತ್ಯಕ್ಕೆ ಮುಗಿಸಬೇಕಿದೆ.
– ಪ್ರಭಾಕರ ಮಿಥ್ಯಾಂಥ
ಪ್ರಭಾರ, ಲೋಕ ಶಿಕ್ಷಣಾಧಿಕಾರಿ, ಉಡುಪಿ
ದ.ಕ. ಜಿಲ್ಲೆಯ 36 ಗ್ರಾ.ಪಂ.ಗಳನ್ನು 2 ವರ್ಷಗಳಲ್ಲಿ ಸಂಪೂರ್ಣ ಸಾಕ್ಷರತಾ ಗ್ರಾ.ಪಂ.ಗಳಾಗಿ ರೂಪಿಸಲು ಪ್ರಕ್ರಿಯೆ ನಡೆಯಲಿದೆ. ಶೀಘ್ರ ಸಮೀಕ್ಷೆ ನಡೆಯಲಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು.
– ಲೋಕೇಶ್,
ವಯಸ್ಕರ ಶಿಕ್ಷಣಾಧಿಕಾರಿ, ದ.ಕ. ಜಿಲ್ಲೆ
ತಾಲೂಕುವಾರು ಅನಕ್ಷರಸ್ಥರ ಸಂಖ್ಯೆ
ಬಂಟ್ವಾಳ 3,656
ಬೆಳ್ತಂಗಡಿ 3,645
ಮಂಗಳೂರು 3,438
ಮೂಡುಬಿದಿರೆ 2,952
ಪುತ್ತೂರು 4,567
ಕಡಬ 2,384
ಸುಳ್ಯ 2,691
ಉಡುಪಿ 1,027
ಕುಂದಾಪುರ 1,164
ಕಾರ್ಕಳ 2,295
ಹೆಬ್ರಿ 541
ಬೈಂದೂರು 810
ಬ್ರಹ್ಮಾವರ 1,206
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.