ಗ್ರಾ.ಪಂ. ಉಪಚುನಾವಣೆ ಫಲಿತಾಂಶ
ಉಜಿರೆ ಕಾಂಗ್ರೆಸ್- ಕೊಯ್ಯೂರು ಬಿಜೆಪಿ ಬೆಂಬಲಿತರಿಗೆ ಜಯ
Team Udayavani, Jun 1, 2019, 6:00 AM IST
ವಿಜೇತ ಕೊರಗಪ್ಪ ಅವರನ್ನು ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಬೆಳ್ತಂಗಡಿ: ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾ.ಪಂ.ಗಳ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಉಜಿರೆ ಎರಡು ವಾರ್ಡ್‌ಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಕೊಯ್ಯೂರಿನ ವಾರ್ಡ್ ಬಿಜೆಪಿ ಬೆಂಬಲಿತರ ಪಾಲಾಗಿದೆ. ಬೆಳಗ್ಗೆ ನಗರ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾಧಿಕಾರಿ ಸುಭಾಶ್ ಜಾಧವ್ ಅವರ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡು 9.30ಕ್ಕೆ ಫಲಿತಾಂಶದ ಸಂಪೂರ್ಣ ಚಿತ್ರಣ ಪ್ರಕಟಗೊಂಡಿತು.
ವಿಜಯಿ ಅಭ್ಯರ್ಥಿಗಳು
ಕೊಯ್ಯೂರು ವಾರ್ಡ್-2ರಲ್ಲಿ ಕೊರಗಪ್ಪ (ಬಿಜೆಪಿ ಬೆಂಬಲಿತ) 303 ಮತ ಪಡೆದು ಬಾಬು ಹೇಮಲ್ಕೆ 256 (ಕಾಂಗ್ರೆಸ್ ಬೆಂಬಲಿತ) ವಿರುದ್ಧ 47 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ಉಜಿರೆ ವಾರ್ಡ್ ನಂ. 4ರಲ್ಲಿ ಸುಮಂಗಲಾ – 296 (ಕಾಂಗ್ರೆಸ್ ಬೆಂಬಲಿತ) ಮತ ಪಡೆದು ಪ್ರತಿಸ್ಪರ್ಧಿ ವೇದಾವತಿ – 236 (ಬಿಜೆಪಿ ಬೆಂಬಲಿತ) ವಿರುದ್ಧ 60 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉಜಿರೆ ವಾರ್ಡ್ ನಂ. 11ರಲ್ಲಿ ಜಿನ್ನಪ್ಪ ನಾಯ್ಕ – 283 (ಕಾಂಗ್ರೆಸ್ ಬೆಂಬಲಿತ) ಮತ ಪಡೆದು ಪ್ರತಿಸ್ಪರ್ಧಿ ಸತೀಶ – 198 (ಬಿಜೆಪಿ ಬೆಂಬಲಿತ) ವಿರುದ್ಧ 88 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
ಚುನಾವಣೆಗೂ ಮುನ್ನ ಪತಿ ಜಿನ್ನಪ್ಪ ವಾರ್ಡ್‌ಗೂ ಪತ್ನಿ ಸುಮಂಗಲಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಾಮ ಪತ್ರ ಹಿಂಪಡೆದಿದ್ದರು.
ಫಲಿತಾಂಶ ಘೋಷಣೆಯಾಗು ತ್ತಿದ್ದಂತೆ ವಿಜೇತರು ತಮಗೆ ಬೆಂಬಲ ನೀಡಿದ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದರು.
ಪ್ರಮಾಣಪತ್ರ ನೀಡಿ ಅಭಿನಂದನೆ
ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಸುಭಾಶ್ ಜಾಧವ್ ಅವರು ಪ್ರಮಾಣ ಪತ್ರ ನೀಡುವ ಮೂಲಕ ಅಭಿನಂದಿಸಿದರು. ಈ ವೇಳೆ ಉಪ ಚುನಾವಣಾಧಿಕಾರಿ ಯಲ್ಲವ್ವ ಹಂಡಿ, ಕೊಯ್ಯೂರು ಕ್ಷೇತ್ರದ ಚುನಾವಣಾಧಿಕಾರಿ ಸುಧಾಕರ್, ಉಪಚುನಾವಣಾಧಿಕಾರಿ ನಿಮ್‌ಲ್ ಕುಮಾರ್, ಚುನಾವಣಾ ಶಾಖೆಯ ನಾರಾಯಣ ಗೌಡ, ಗಣೇಶ್ ಪೂಜಾರಿ ಇತರ ಸಿಬಂದಿ ಉಪಸ್ಥಿತರಿದ್ದರು.
ಉಜಿರೆ ವಾರ್ಡ್-ನಂ. 4
ವಿಜೇತೆ: ಸುಮಂಗಲಾ – 296 (ಕಾಂಗ್ರೆಸ್ ಬೆಂಬಲಿತ)
ಮತದಾರರು ಒಟ್ಟು: 1,069
ಕ್ರಮಬದ್ಧ ಮತ: 532
ತಿರಸ್ಕೃತ ಮತ: 03
ನೀಡಿದ ಒಟ್ಟು ಮತ: 535
ಉಜಿರೆ ವಾರ್ಡ್-ನಂ.11
ವಿಜೇತ: ಜಿನ್ನಪ್ಪ ನಾಯ್ಕ – 283 (ಕಾಂಗ್ರೆಸ್ ಬೆಂಬಲಿತ)
ಮತದಾರು ಒಟ್ಟು: 783
ಕ್ರಮಬದ್ಧ ಮತ: 478
ತಿರಸ್ಕೃತ ಮತ: 7
ನೀಡಿದ ಒಟ್ಟು ಮತ: 485
ಕೊಯ್ಯೂರು ವಾರ್ಡ್-2
ವಿಜೇತ: ಕೊರಗಪ್ಪ – 303 (ಬಿಜೆಪಿ ಬೆಂಬಲಿತ)
ಮತದಾರರು ಒಟ್ಟು: 938
ಕ್ರಮಬದ್ಧ ಮತ: 559
ತಿರಸ್ಕೃತ ಮತ: 7
ನೀಡಿದ ಒಟ್ಟು ಮತಗಳು: 566
ಪತಿ-ಪತ್ನಿಯ ಗೆಲುವಿನ ನಗು
ಉಜಿರೆ ಬೊಟ್ಟುದಗುಡ್ಡೆ ಮನೆಯ ಜಿನ್ನಪ್ಪ ನಾಯ್ಕ ಅವರು ವಾರ್ಡ್ ನಂ. 11ರಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಗೆಲುವಿನ ನಗು ಬೀರಿದ್ದಾರೆ. ಅವರ ಪತ್ನಿ ಸುಮಂಗಲಾ ಉಜಿರೆ ವಾರ್ಡ್ ನಂ. 4ರ ಪರಿಶಿಷ್ಟ ಪಂಗಡ (ಮಹಿಳೆ) ಮೀಸಲಿಟ್ಟ ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಸುಮಂಗಲಾ ಕಳೆದ ಬಾರಿ ಉಜಿರೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ತಾ.ಪಂ. ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು. ಅವರ ಪತಿ ಜಿನ್ನಪ್ಪ ಜನತಾದಳ ಬೆಂಬಲಿತರಾಗಿ 3 ಬಾರಿ ಗ್ರಾ.ಪಂ. ಚುನಾವಣೆಗೆ ನಿಂತು ಸೋಲನುಭವಿಸಿದ್ದರು. ಈ ಬಾರಿ ಗೆಲುವು ಸಾಧಿಸುವ ಮೂಲಕ ಒಂದೇ ಮನೆಯಿಂದ ಇಬ್ಬರು ಸ್ಪರ್ಧಿಸಿ ದಾಖಲೆ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.