ಗ್ರಾ.ಪಂ. ತೆರಿಗೆ ಸಂಗ್ರಹ: ದ.ಕ. ರಾಜ್ಯಕ್ಕೆ ಪ್ರಥಮ
Team Udayavani, Jul 30, 2018, 11:43 AM IST
ಮಂಗಳೂರು: ವಿದ್ಯುತ್ ಬಿಲ್ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಗ್ರಾ. ಪಂ. ತೆರಿಗೆ ಸಂಗ್ರಹಣೆಯಲ್ಲಿಯೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾ ವ್ಯಾಪ್ತಿಯ ಗ್ರಾ. ಪಂ.ಗಳು ತೆರಿಗೆ ಸಂಗ್ರಹದಲ್ಲಿ ಶೇ.68.34ರಷ್ಟು ಗುರಿ ಸಾಧಿಸಿ ರಾಜ್ಯಕ್ಕೆ ಮಾದರಿ ಎನಿಸಿವೆ. ಶೇ.65.44ರಷ್ಟು ತೆರಿಗೆ ಸಂಗ್ರಹಿಸಿ ಉತ್ತರ ಕನ್ನಡ ಜಿಲ್ಲೆ ದ್ವಿತೀಯ ಹಾಗೂ ಶೇ.51.04ರಷ್ಟು ತೆರಿಗೆ ಸಂಗ್ರಹಿಸಿ ಉಡುಪಿ ಜಿಲ್ಲೆ ತೃತೀಯ ಸ್ಥಾನದಲ್ಲಿವೆ. ರಾಜ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ. ಪಂ.ಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ಕರಾವಳಿ ಭಾಗದಲ್ಲಿ ಗ್ರಾ.ಪಂ. ತೆರಿಗೆ ಸಂಗ್ರಹ ದಾಖಲೆ ಮಟ್ಟದಲ್ಲಿ ಸಂಗ್ರಹವಾಗಿರುವುದು ವಿಶೇಷ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ 1993 ಯನ್ವಯ ಗ್ರಾ. ಪಂ.ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾ.ಪಂ.ಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಸ್ವಾವಲಂಬಿಗಳಾಗಬೇಕು ಎಂಬುದು ಸರಕಾರದ ಆಶಯ. ಆದರೆ ಹೆಚ್ಚಿನ ಗ್ರಾ.ಪಂ.ಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯವಹಿಸಿದ್ದವು.
ದ. ಕನ್ನಡ ಜಿಲ್ಲೆಯ ಒಟ್ಟು 230 ಗ್ರಾ. ಪಂ.ಗಳಿಂದ 2017-18ರಲ್ಲಿ 26.59 ಕೋ.ರೂ ತೆರಿಗೆ ಸಂಗ್ರಹವಾಗಿದ್ದು 12.31 ಕೋ.ರೂ ಸಂಗ್ರಹಕ್ಕೆ ಬಾಕಿ ಇದೆ. ಉಡುಪಿಯಲ್ಲಿ 15.36 ಕೋ.ರೂ. ಸಂಗ್ರಹವಾಗಿದ್ದು, 14.73 ಕೋ. ರೂ. ಬಾಕಿ ಇದೆ. ಇದು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ತಿಳಿಸಿದೆ.
ಕಲಬುರಗಿಗೆ ಕೊನೆಯ ಸ್ಥಾನ
ಕಲಬುರಗಿ ಜಿಲ್ಲೆಯ 264 ಗ್ರಾ.ಪಂ. ಗಳಿಂದ 9.17 ಕೋ.ರೂ. ನಿರೀಕ್ಷೆ ಇರಿಸಲಾಗಿದ್ದು, ಸಂಗ್ರಹವಾಗಿರುವುದು 12.89 ಲಕ್ಷ ರೂ. ಮಾತ್ರ. ಬೀದರ್ ಜಿಲ್ಲೆಯ 185 ಗ್ರಾ.ಪಂ.ಗಳಿಂದ 5.94 ಕೋ.ರೂ ಸಂಗ್ರಹವಾಗಬೇಕಿದ್ದರೂ ಕೇವಲ 55.96 ಲಕ್ಷ ರೂ. ಸಂಗ್ರಹವಾಗಿದೆ. ಯಾದಗಿರಿಯಲ್ಲಿ 123 ಗ್ರಾ.ಪಂ.ಗಳಿಂದ 3.55 ಕೋ.ರೂ. ನಿರೀಕ್ಷೆಯಲ್ಲಿ 76.93 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ.
ತೆರಿಗೆ ಪರಿಷ್ಕರಣೆ ಕುಸಿತ
ರಾಜ್ಯದಲ್ಲಿ ಒಟ್ಟು 6,024 ಗ್ರಾ. ಪಂ.ಗಳು ಕಾರ್ಯನಿರ್ವಹಿಸುತ್ತಿವೆ. ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡುವುದಕ್ಕಾಗಿ ತೆರಿಗೆ ಪರಿಷ್ಕರಣೆಗೆ ಗ್ರಾ.ಪಂ.ಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ ಬಹುತೇಕ ಗ್ರಾ.ಪಂ.ಗಳು ಈ ಅಧಿಕಾರವನ್ನೂ ಬಳಸಿಕೊಂಡಿಲ್ಲ ಎಂಬ ಆರೋಪವಿದೆ. 2015ನೇ ಸಾಲಿನಲ್ಲಿ ತಿದ್ದುಪಡಿ ತಂದಿದ್ದರೂ 1,421 ಗ್ರಾ.ಪಂ.ಗಳು ಮಾತ್ರ ತೆರಿಗೆ ಪರಿಷ್ಕರಣೆ ಮಾಡಿವೆ. ದ.ಕ. ಜಿಲ್ಲೆಯ 96, ಉ.ಕ. ಜಿಲ್ಲೆಯ 128, ಉಡುಪಿ ಜಿಲ್ಲೆಯ 88, ಬೆಂಗಳೂರು ನಗರದ 71, ಕೊಡಗು ಜಿಲ್ಲೆಯ 37 ಗ್ರಾ.ಪಂ.ಗಳು ತೆರಿಗೆ ಪರಿಷ್ಕರಣೆಯನ್ನು ಕಳೆದ 4 ವರ್ಷಗಳಲ್ಲಿ ಮಾಡಲೇ ಇಲ್ಲ. ಬೆಳಗಾವಿಯ 417, ತುಮಕೂರಿನ 273, ಮಂಡ್ಯದ 216, ಕಲಬುರಗಿಯ 211 ಗ್ರಾ.ಪಂ.ಗಳು ಕೂಡ ತೆರಿಗೆ ಪರಿಷ್ಕರಣೆ ಮಾಡಿಲ್ಲ.
*ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.