ಶಾವಾದದಲ್ಲಿ ಅಭ್ಯರ್ಥಿ, ಜನರಿಂದ ನಿರಾಶೆ ಮಾತು


Team Udayavani, Dec 14, 2020, 12:52 PM IST

ಶಾವಾದದಲ್ಲಿ ಅಭ್ಯರ್ಥಿ, ಜನರಿಂದ ನಿರಾಶೆ ಮಾತು

ಮಂಚಿ-ಕುಕ್ಕಾಜೆ ಜಂಕ್ಷನ್‌ನಲ್ಲಿ ಕಂಡುಬಂದ ಮತದಾನ ಜಾಗೃತಿ ಬೀದಿನಾಟಕ-ಸಂಗೀತ

ಬಂಟ್ವಾಳ: ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಬಂಟ್ವಾಳ ತಾಲೂಕಿನಲ್ಲಿ ನಾಮಪತ್ರ ಸಲ್ಲಿಕೆ ಶುಕ್ರವಾರ ಮುಕ್ತಾಯವಾಗಿದೆ. ತಾಲೂಕಿನ ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ವೀರಕಂಭ, ಸಜೀಪಪಡು, ಇರಾ ಹಾಗೂ ಮಂಚಿ ಗ್ರಾ.ಪಂ. ಕಚೇರಿಗಳಲ್ಲಿ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಕೆಲವೊಂದು ಗ್ರಾ.ಪಂ.ಗಳಲ್ಲಿ ಬಿಜೆಪಿಕಾಂಗ್ರೆಸ್‌ ಬೆಂಬಲಿತರ ಜತೆ ಎಸ್‌ಡಿಪಿಐ ಬೆಂಬಲಿತರು ಕೂಡ ಚುನಾವಣ ಕಣಕ್ಕಿಳಿದಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸು ತ್ತಿರುವರಾದರೂ ಮತದಾರರನ್ನು ಸೆಳೆಯುವ ಬಗೆಗೆ ಕಾರ್ಯ ತಂತ್ರ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ. ಪ್ರತೀ ಗ್ರಾ.ಪಂ. ಕಚೇರಿಗಳ ಮುಂದೆ ಅಭ್ಯರ್ಥಿಗಳು ಆಯ್ಕೆ ಮಾಡಬಹು ದಾದ ಚಿಹ್ನೆಗಳ ವಿವರ ಹಾಕಲಾಗಿದೆ. ಯಾವ ಚಿಹ್ನೆ ಮತದಾರರ ಮನ ಗೆಲ್ಲಬಹುದು ಎಂಬ ಜಿಜ್ಞಾಸೆ ಅಭ್ಯರ್ಥಿಗಳಲ್ಲಿ ಆರಂಭವಾಗಿದೆ.

ಚುನಾವಣೆಯ ಗೋಜಿನಲ್ಲಿಲ್ಲ! :

ಗ್ರಾಮೀಣ ಭಾಗಗಳ ಸುತ್ತಾಟದ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರನ್ನು ಮಾತನಾಡಿಸಿದಾಗ, ಯಾರೂ ಕೂಡ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದು ಕೊಂಡಂತೆ ಕಂಡುಬರಲಿಲ್ಲ. ಎಲ್ಲರಿಗೂ ಚುನಾ ವಣೆ ಇದೆ ಎಂಬ ವಿಚಾರದ ಅರಿವಿದ್ದರೂ, “ಯಾರೂ ಗೆದ್ದರೂ ಒಂದೇಎಂಬ ಪ್ರತಿಕ್ರಿಯೆ ಅವರದಾಗಿತ್ತು. ಇನ್ನು ಕೆಲವೆಡೆ ಪ್ರಚಾರ ಆರಂಭ ವಾಗಿದೆಯೇ ಎಂದು ಕೇಳಿದರೆ, ಪಕ್ಷ ದವರು ಯಾರೂ ಕೂಡ ಬಂದಿಲ್ಲ. ಆದರೆ ಚುನಾವಣೆಗೆ ಸ್ಪರ್ಧಿಸುವ ಯುವಕನೋರ್ವ ಬಂದು ಈ ಬಾರಿ ಸ್ವಲ್ಪ ಬದಲಾವಣೆ ಮಾಡಿ ಎಂದು ಮನವಿ ಮಾಡಿದ್ದಾನೆ ಎಂದರು. ಅದನ್ನು ಹೊರತು ಪಡಿಸಿದರೆ ಚುನಾವಣೆಯ ಅಬ್ಬರ ಎಲ್ಲೂ ಇರಲಿಲ್ಲ. ರಾಜಕೀಯ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರನ್ನು ಮಾತನಾಡಿಸಿದಾಗ ನಾವು ಈ ಬಾರಿ ಗೆಲ್ಲುತ್ತೇವೆಎಂದು ವಿಶ್ವಾಸ ವ್ಯಕ್ತಪಡಿಸುತ್ತಲೇ ನಮ್ಮ ವಿರುದ್ಧ ಇನ್ನೊಬ್ಬರನ್ನು ಎತ್ತಿ ಕಟ್ಟುತ್ತಿದ್ದಾರೆಎಂಬ ಆರೋಪವನ್ನೂ ಮಾಡಿದರು.

ಗ್ರಾ.ಪಂ. ಸ್ಥಾನಗಳ ಬಲಾಬಲ :

ಕಳೆದ ಅವಧಿಯಲ್ಲಿ ಸಜೀಪ ಮುನ್ನೂರು ಗ್ರಾ.ಪಂ.23 ಸ್ಥಾನಗಳ ಪೈಕಿ ಕಾಂಗ್ರೆಸ್‌ ಬೆಂಬಲಿತರು 11, ಬಿಜೆಪಿ ಬೆಂಬಲಿತರು 9 ಹಾಗೂ ಎಸ್‌ಡಿಪಿಐ ಬೆಂಬಲಿತರು 3 ಕಡೆಗಳಲ್ಲಿ ಗೆದ್ದಿದ್ದರು. ಸಜೀಪಮೂಡ ಗ್ರಾ.ಪಂ.20 ಸ್ಥಾನಗಳ ಪೈಕಿ ಪ್ರಾರಂಭದಲ್ಲಿ 16 ಕಡೆ ಕಾಂಗ್ರೆಸ್‌ ಬೆಂಬಲಿತರು ಹಾಗೂ 4 ಕಡೆ ಬಿಜೆಪಿ ಬೆಂಬಲಿತರು ಗೆದ್ದಿದ್ದು, ಬಳಿಕ ಬದಲಾದ ಸನ್ನಿವೇಶದಲ್ಲಿ ಓರ್ವ ಸದಸ್ಯರು ಬಿಜೆಪಿ ಕಡೆ ವಾಲಿದ್ದರು.

ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಸಜೀಪ ಪಡು ಗ್ರಾ.ಪಂ.8 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು, 3 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಇರಾ ಗ್ರಾ.ಪಂ.ನಲ್ಲಿ 19 ಸ್ಥಾನಗಳ ಪೈಕಿ 13ರಲ್ಲಿ ಕಾಂಗ್ರೆಸ್‌ ಬೆಂಬಲಿತರು, 6 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದಿದ್ದರು. ಮಂಚಿಯಲ್ಲಿ ಪ್ರಾರಂಭದಲ್ಲಿ 10 ಕಾಂಗ್ರೆಸ್‌ ಬೆಂಬಲಿತರು, 11 ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಆದರೆ ಬಳಿಕ ತೆರವಾದ ಬಿಜೆಪಿ ಬೆಂಬಲಿತರ ಸ್ಥಾನದಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಆದರೆ ಕೊನೆಯವರೆಗೂ ಬಿಜೆಪಿ ಬೆಂಬಲಿತ ಅಧ್ಯಕ್ಷರು ಅಧಿಕಾರದಲ್ಲಿದ್ದರು. ವೀರಕಂಭ ಗ್ರಾ.ಪಂ.14 ಸ್ಥಾನಗಳ ಪೈಕಿ ಪ್ರಾರಂಭದಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಹಾಗೂ 4 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಆದರೆ ಬಳಿಕ ಬಿಜೆಪಿ ಬೆಂಬಲಿತರೋರ್ವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿದ್ದರು.

ಎಸ್‌ಡಿಪಿಐ ಅಧಿಕಾರ :

ಕಳೆದ ಅವಧಿಯಲ್ಲಿ ಬಂಟ್ವಾಳದ ಸಜೀಪ ನಡು ಗ್ರಾಮ ಪಂಚಾಯತ್‌ ಎಸ್‌ಡಿಪಿಐ ಬೆಂಬಲಿತರು ಅಧಿಕಾರ ನಡೆಸಿದ ಮೊದಲ ಗ್ರಾಮ ಪಂಚಾಯತ್‌ ಆಗಿತ್ತು. ಈ ಗ್ರಾಮ ಪಂಚಾಯತ್‌ನಲ್ಲಿ ಎಸ್‌ಡಿಪಿಐ ಬೆಂಬಲಿತರು 7, ಕಾಂಗ್ರೆಸ್‌ ಬೆಂಬಲಿತರು 5 ಹಾಗೂ ಬಿಜೆಪಿ ಬೆಂಬಲಿತರು 3 ಕಡೆ ಗೆದ್ದಿದ್ದರು. ಹೀಗಾಗಿ ಈ ಗ್ರಾ.ಪಂ.ನಲ್ಲಿ ಹೆಚ್ಚಿನ ಕಡೆ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಸಜೀಪಮುನ್ನೂರು ಗ್ರಾಮ ಪಂಚಾಯತ್‌ವ್ಯಾಪ್ತಿಯ ನಂದಾವರ ಅರಮನೆ ಹಿತ್ಲುವಿನಲ್ಲಿ ರವಿವಾರ ಮತದಾನ ಬಹಿಷ್ಕಾರದ ಬ್ಯಾನರ್‌  ಕಂಡುಬಂತು.

ಓಟು ಬಂತಣ್ಣಾ ಓಟು :

ಉದಯವಾಣಿಯ ತಂಡ ಗ್ರಾ.ಪಂ.ಗಳಲ್ಲಿ ಚುನಾವಣ ಸ್ಥಿತಿಗತಿಯ ಅವಲೋಕನಕ್ಕಾಗಿ ತೆರಳಿದ್ದ ವೇಳೆ ಮತ ಪ್ರಚಾರದ ಯಾವುದೇ ಲಕ್ಷಣಗಳು ಕಂಡುಬಾರದೇ ಇದ್ದರೂ ದ..ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಮತದಾನ ಜಾಗೃತಿಯಲ್ಲಿ ತೊಡಗಿರುವುದು ಕಂಡುಬಂತು. ಮಂಚಿಕುಕ್ಕಾಜೆ ಜಂಕ್ಷನ್‌ನಲ್ಲಿ ಬೀದಿನಾಟಕಸಂಗೀತದ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿತ್ತು. ಈ ವೇಳೆ ಕುಡುಕನ ಪಾತ್ರಧಾರಿಯೊಬ್ಬ ಬಂದಾಗ ನಿಜವಾದ ಕುಡುಕನೇ ಬಂದಿದ್ದಾನೆ ಎಂದು ಸ್ಥಳೀಯರು ಆತನನ್ನು ಬದಿಗೆ ಹೋಗುವಂತೆ ಹೇಳಿದ ಘಟನೆಯೂ ನಡೆಯಿತು!

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.