ಗ್ರಾಮವಿಕಾಸ ಯೋಜನೆಯ ಕಾಮಗಾರಿ ಕಳಪೆ: ಆರೋಪ
Team Udayavani, Mar 28, 2017, 11:52 AM IST
ವೇಣೂರು: ಗ್ರಾಮವಿಕಾಸ ಯೋಜನೆಯಡಿಯಲ್ಲಿ ನಾಲ್ಕೂರು ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್.ನವರು ಮಾಡಿರುವ ರಸ್ತೆ ಕಾಮಗಾರಿಯ ಗುಣಮಟ್ಟದ ತನಿಖೆಯ ಬಗ್ಗೆ ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿದ್ದರೂ ಕಾಮಗಾರಿಯ ಗುಣಮಟ್ಟದ ವರದಿ ತರಿಸಲು ಬಳೆಂಜ ಗ್ರಾ.ಪಂ. ಮೀನಾಮೇಷ ಎಣಿಸುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಧ್ಯಕ್ಷೆ ದೇವಕಿಯವರ ಅಧ್ಯಕ್ಷತೆಯಲ್ಲಿ ಬಳಂಜ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಕಳೆದ ಗ್ರಾಮಸಭೆಯಲ್ಲಿ ಕಾಮಗಾರಿಯ ಗುಣಮಟ್ಟ ಪರಿಶೀಲನೆಯ ಬಗ್ಗೆ ನಿರ್ಣಯ ಮಾಡಲಾಗಿದ್ದರೂ ಪಂಚಾಯತ್ ಯಾಕೆ ಕ್ರಮ ಕೈಗೊಂಡಿಲ್ಲ ?’ ಎಂದು ಸುನೀಲ್ ಶೆಟ್ಟಿ ನಾಲ್ಕೂರು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಅವರು “ತನಿಖೆ ಪೂರ್ಣಗೊಂಡಿದೆ. ಆದರೆ ವರದಿ ಬಂದಿಲ್ಲ’ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು “ವರದಿಯನ್ನು ತರಿಸಿಕೊಳ್ಳುವುದು ಪಂಚಾಯತ್‌ನ ಜವಾಬ್ದಾರಿ’ ಎಂದರು.
ತನಿಖೆಗೆ ಆಗ್ರಹ
“ಕೆ.ಆರ್.ಐ.ಡಿ.ಎಲ್.ನವರು ಅಂದಾಜುಪಟ್ಟಿ ಪ್ರಕಾರ ಕೆಲಸ ಮಾಡಿಲ್ಲ . ಅವರನ್ನು ಮುಕ್ತಗೊಳಿಸಿ ಬೇರೆಯವರಿಗೆ ಕಾಮಗಾರಿ ನೀಡಿ. ಅವರಿಗೆ ಕಾಮಗಾರಿಯ ಬಿಲ್ಲು ಕೊಡಬೇಡಿ. ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಬರೆಯಿರಿ’ ಎಂದು ಗ್ರಾಮಸ್ಥ ಸುನೀಲ್ ಶೆಟ್ಟಿ ಒತ್ತಾಯಿಸಿದರು. “ಲೋಕಾಯುಕ್ತಕ್ಕೆ ಪಂಚಾಯತ್‌ನಿಂದ ಬರೆಯಲು ಸಾಧ್ಯವಿಲ್ಲ’ ಎಂದು ಪಂಚಾಯತ್ ಆಡಳಿತ ಸ್ಪಷ್ಟಪಡಿಸಿತು. ಆಗ ಈ ಬಗ್ಗೆ ತನಿಖೆಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಬರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕಾಮಗಾರಿಯ ಗುಣಮಟ್ಟ ತನಿಖೆ ಬಗ್ಗೆ ವರದಿಯನ್ನು ತರಿಸಲು ಪ್ರಯತ್ನಿಸುವುದಾಗಿ ಪಿಡಿಒ ಸುಧಾಮಣಿ ಸಭೆಗೆ ಭರವಸೆ ನೀಡಿದರು.
ರಸ್ತೆ ಅಭಿವೃದ್ಧಿಯ ಭರವಸೆ
ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ಬಳೆಂಜದ ಮೂರು ಎಸ್.ಸಿ. ಕಾಲನಿ ರಸ್ತೆಗಳ ಅಭಿವೃದ್ಧಿ, ನಾಲ್ಕೂರು-ಕಾಪಿನಡ್ಕ ರಸ್ತೆಯಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು. ತಾ.ಪಂ. ಸದಸ್ಯೆ ವಿನೂಷಾ ಪ್ರಕಾಶ್ ಅವರು ಬಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ತನ್ನ ಅನುದಾನದಿಂದ ಮಾಡಲಿರುವ ಕಾಮಗಾರಿಗಳ ವಿವರ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಪಂಚಾಯತ್ ಕಾರ್ಯದರ್ಶಿ ಸುಂದರ ಪೂಜಾರಿ, ಸಿ.ಆರ್.ಪಿ. ಸೇವಂತಿ, ಮೆಸ್ಕಾಂ ಮಡಂತ್ಯಾರು ವಿಭಾಗದ ಸಂತೋಷ್ ನಾಯ್ಕ, ಗ್ರಾಮಕರಣಿಕ ಮೇಘನಾ, ಆರೋಗ್ಯ ಸಹಾಯಕಿ ಮಮತಾ, ಉದ್ಯೋಗ ಖಾತ್ರಿಅಧಿಕಾರಿ ಕೌಶಿಕ್, ಶಿಶುಅಭಿವೃದ್ಧಿ ಮೇಲ್ವಿಚಾರಕಿ ಶಕುಂತಳಾ, ಆರೋಗ್ಯ ಮಿತ್ರೆ ರಶ್ಮಿ, ಗ್ರಾ. ಪಂ. ಸದಸ್ಯರು ಉಪಸ್ಥಿತರಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್‌ಜಿ ಸಭೆಯನ್ನು ನಡೆಸಿಕೊಟ್ಟರು. ಪಂಚಾಯತ್‌ದ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಜಿ. ಗತಸಭೆಯ ವರದಿ, ಜಮಾ-ಖರ್ಚು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಸ್ತೃತ ವರದಿ ನೀಡಿದರು. ಪಂಚಾಯತದ ಸದಸ್ಯ ವಿಕ್ಟರ್‌ಕ್ರಾಸ್ತ ಸ್ವಾಗತಿಸಿ ಸದಸ್ಯ ಚಂದ್ರಶೇಖರ್ ಪಿ.ಕೆ. ವಂದಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು
*ದೊಡ್ಡ ರೈತರಿಗೆ ಉಚಿತ ವಿದ್ಯುತ್ ನೀಡಬಾರದು. ಅವರಿಂದ ಲೂ
*ಕನಿಷ್ಠ ಶುಲ್ಕ ವಸೂಲು ಮಾಡಬೇಕು.
*ಅನಧಿಕೃತ ಬೀದಿ ದೀಪಗಳನ್ನು ಅಧಿಕೃತ ಮಾಡಬೇಕು.
*ಬಳೆಂಜ-ಹರ್ಕುಡೇಲು ರಸ್ತೆ ಅಭಿವೃದ್ಧಿಯಾಗಬೇಕು.
*ಗರ್ಡಾಡಿ-ಕಾಪಿನಡ್ಕ ರಸ್ತೆಯ ಡಾಮರು ಕಾಮಗಾರಿಯಾಗಬೇಕು.ಡೆಂಜೋಳಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕು.
*ಗಾಂಧಿನಗರದಲ್ಲಿ ಮನೆ ಮೇಲಿನ ತಂತಿ ತೆರವುಗೊಳಿಸಬೇಕು.
*ಬಳೆಂಜ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರ ನೇಮಕ ಮತ್ತು ನಿಯೋಜನೆಗೊಂಡ ದೆ„ಹಿಕ ಶಿಕ್ಷಣ ಶಿಕ್ಷಕರು ಆದೇಶದಂತೆ ಮೂರುದಿನ ಕಾರ್ಯ ನಿರ್ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.