ಸೆ.30ರಂದು ಉಜಿರೆಯಲ್ಲಿ ‘ದಿ ಓಷನ್ ಪರ್ಲ್’ ಹೋಟೆಲ್ ಉದ್ಘಾಟನೆ
ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್, ಸಸ್ಯಾಹಾರಿ ರೆಸ್ಟೋರೆಂಟ್,ಜಿಮ್...ಯಾವೆಲ್ಲಾ ಸೇವೆಗಳು ಲಭ್ಯವಿದೆ?
Team Udayavani, Sep 28, 2022, 4:53 PM IST
ಉಜಿರೆ: ಕ್ಲಾಸಿಕ್ ಐಷಾರಾಮಿ, ಆಧುನಿಕ ಸೌಕರ್ಯಗಳಿಗೆ ಹೆಸರು ವಾಸಿಯಾದ ಓಷನ್ ಪರ್ಲ್ ಹೋಟೆಲ್ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸುತ್ತಿದ್ದು. ಈಗ ಪ್ರೇಕ್ಷಣೀಯ ಧಾರ್ಮಿಕ ಪುಣ್ಯ ಸ್ಥಳವಾದ ಧರ್ಮಸ್ಥಳದ ಉಜಿರೆಯಲ್ಲಿ ಸೆಪ್ಟೆಂಬರ್ 30 ರಂದು ಆರಂಭವಾಗುತ್ತಿದೆ.
ಉಜಿರೆಯಲ್ಲಿ ಐಷಾರಾಮಿ ಹೋಟೆಲ್ ಉದ್ಘಾಟನೆ ನಡೆಯಲಿದ್ದು, ಆತ್ಮೀಯ ಆತಿಥ್ಯ, ಬೆರಗು ಮೂಡಿಸುವ ಅತ್ಯಾಕರ್ಷಕ ನೋಟಗಳು, ಐಷಾರಾಮಿ ಅತ್ಯುತ್ತಮ ಸೇವೆಯನ್ನು ಇ,ಲ್ಲಿ ಆನಂದಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಓಷನ್ ಪರ್ಲ್ ಹೋಟೆಲ್ಸ್ ಪ್ರೈ.ಲಿ. ಗ್ರೂಪ್, ದಿ ಓಷನ್ ಪರ್ಲ್ ಮಂಗಳೂರು, ದಿ ಓಷನ್ ಪರ್ಲ್ ಉಡುಪಿ, ಮತ್ತು ದಿ ಓಷನ್ ಪರ್ಲ್ ಇನ್ ಮಂಗಳೂರು ಸೇರಿ ಕರ್ನಾಟಕದಲ್ಲಿ ಮೂರು ಹೋಟೆಲ್ ಗಳನ್ನು ಹೊಂದಿದ್ದು, 4 ನೇ ಹೋಟೆಲ್ ಅನ್ನು ಸೇರಿಸಲು ಹೆಮ್ಮೆಪಡುತ್ತಿದೆ.
ಓಷನ್ ಪರ್ಲ್ ಹೊಟೇಲ್‌ಗಳು ರೆಸ್ಟೊರೆಂಟ್ ಉದ್ಯಮದ ಜಯರಾಮ್ ಬನಾನ್ ಅವರ ಪ್ರತಿಷ್ಠಿತ ಜೆಆರ್ ಬಿ ಗ್ರೂಪ್‌ಗೆ ಸೇರಿದ್ದು, ಹೊರಾಂಗಣ ಕ್ಯಾಟರಿಂಗ್ ಸೇವೆಗಳು, ಔತಣಕೂಟ ಇತ್ಯಾದಿಗಳ ಸೇವೆ ನೀಡುತ್ತಿದೆ.
ಗ್ರೂಪ್‌ನ ಸಾಗರ್ ರತ್ನ ಬ್ರಾಂಡ್‌ನ ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಸರಪಳಿಯು ದೇಶದ ಉತ್ತರದ ರಾಜ್ಯಗಳಾದ್ಯಂತ 150 ಕ್ಕೂ ಹೆಚ್ಚು ಬ್ರ್ಯಾಂಚ್ ಗಳನ್ನು ಹೊಂದಿದ್ದು, ಕರ್ನಾಟಕ ದಲ್ಲಿ ಅಸ್ತಿತ್ವವನ್ನು ಹೊಂದಿರುವ ದೆಹಲಿಯ ಅಂತಾರಾಷ್ಟ್ರೀಯ ಎನ್ ಸಿಟಿ ಖ್ಯಾತಿ ಪಡೆದಿದೆ ಮತ್ತು ದೇಶದ ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಅತಿದೊಡ್ಡ ಸರಪಳಿ ಎಂದು ಪರಿಗಣಿಸಲಾಗಿದೆ.
ಓಷನ್ ಪರ್ಲ್ ಹುಬ್ಬಳ್ಳಿಯ ದಿ ಓಷನ್ ರೆಸಾರ್ಟ್ ಮತ್ತು ಸ್ಪಾ ಜತೆಗೆ ನಗರದ ಪ್ರತಿಷ್ಠಿತ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ನಿರ್ವಹಿಸುತ್ತಿದೆ. ದೆಹಲಿಯ ಚತ್ತರ್‌ಪುರ ಮಂದಿರ ರಸ್ತೆಯಲ್ಲಿರುವ ದಿ ಓಷನ್ ರಿಟ್ರೀಟ್ ಮತ್ತು ಓಷನ್ ಪರ್ಲ್ ಗಾರ್ಡೆನಿಯಾ ಎಂಬ ಬ್ರ್ಯಾಂಡ್ ಹೆಸರಿನಡಿಯಲ್ಲಿ ನಡೆಸುತ್ತಿರುವ ಔತಣಕೂಟಗಳು ದೆಹಲಿಯ ಅತ್ಯುತ್ತಮ ಔತಣಕೂಟಗಳೆಂದು ಹೆಸರುವಾಸಿಯಾಗಿದೆ.
ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ, ಪ್ರೇಕ್ಷಣೀಯ ಪಟ್ಟಣವಾದ ಉಜಿರೆಯ ಲಲಿತಾ ನಗರದ ಕಾಶಿ ಪ್ಯಾಲೇಸ್ ನಲ್ಲಿ ಆರಂಭವಾಗಲಿರುವ ಓಷನ್ ಪರ್ಲ್, ಉಜಿರೆಯು ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ ಇದೆ, ಈ ಐಷಾರಾಮಿ ಹೋಟೆಲ್ 34 ಕೊಠಡಿಗಳನ್ನು ಹೊಂದಿದ್ದು, ಇದರಲ್ಲಿ 31 ಎಕ್ಸಿಕ್ಯೂಟಿವ್ ಕೊಠಡಿಗಳು, 2 ಸೂಟ್ ರೂಮ್ಸ್ ಮತ್ತು 1 ಪ್ರೆಸಿಡೆನ್ಶಿಯಲ್ ಸೂಟ್ ಅನ್ನು 3 ಮಹಡಿಗಳಲ್ಲಿ ನಿರ್ಮಿಸಲಾಗಿದೆ.
ಓಷನ್ ಪರ್ಲ್ , ಉಜಿರೆಯು ಬೆಳ್ತಂಗಡಿ ಮೂಲದ ಶಶಿಧರ್ ಶೆಟ್ಟಿಯವರ ಒಡೆತನದಲ್ಲಿದೆ. ಆಹಾರ ಸೇವಾ ಉದ್ಯಮದಲ್ಲಿ ಮೂರು ದಶಕಗಳಿಗೂ ಮೀರಿದ ಅನುಭವ ಮತ್ತು ಪರಿಣತಿಯೊಂದಿಗೆ ಮಾನ್ಯತೆ ಪಡೆದ ಉದ್ಯಮಿಯಾಗಿರುವ ಅವರು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು ಅಧ್ಯಕ್ಷರಾಗಿದ್ದಾರೆ. ದೇಶದ 12 ರಾಜ್ಯಗಳಲ್ಲಿ ಹರಡಿರುವ ಪ್ರಸಿದ್ಧ ಕೈಗಾರಿಕಾ ಸಮೂಹಗಳ ಕ್ಯಾಂಟೀನ್‌ಗಳನ್ನು ಶಶಿ ಕ್ಯಾಟರಿಂಗ್ ಸರ್ವಿಸಸ್ ನಡೆಸುತ್ತಿದೆ.
ಉಜಿರೆಯು ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ಓಷನ್ ಪರ್ಲ್ ಹೋಟೆಲ್ ಜಯರಾಮ್ ಬನಾನ್ ಮತ್ತು ಶಶಿಧರ್ ಶೆಟ್ಟಿ 75 ವರ್ಷಗಳ ಅನುಭವದ ಸಂಯೋಜಿತ ಎರಡು ಟೈಟಾನ್ಸ್‌ಗಳ ಜಂಟಿ ಉದ್ಯಮವಾಗಿದೆ. ಓಷನ್ ಪರ್ಲ್ ಹೋಟೆಲನ್ನು ಶಶಿಧರ ಶೆಟ್ಟಿಯವರ ತಾಯಿ ಕಾಶಿ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಮಂಜುನಾಥನ ನೆಲೆ ಬೀಡಾದ ಪುಣ್ಯ ಸ್ಥಳ ಧರ್ಮಸ್ಥಳಕ್ಕೆ ಭೇಟಿ ನೀಡುವವರಿಗೆ ಉಜಿರೆಯ ಓಷನ್ ಪರ್ಲ್ ಹೊಸ ಹೆಗ್ಗುರುತಾಗುವ ನಿರೀಕ್ಷೆಯಿದೆ.
ಯಾವೆಲ್ಲಾ ಸೇವೆಗಳು ಲಭ್ಯವಿದೆ?
• ಪೆಸಿಫಿಕ್- 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್.
• 140 ಆಸನ ಸಾಮರ್ಥ್ಯದೊಂದಿಗೆ ‘ಸಾಗರ ರತ್ನ’ ಬ್ರ್ಯಾಂಡ್ ಸಸ್ಯಾಹಾರಿ ರೆಸ್ಟೋರೆಂಟ್
• ಕೋರಲ್- 50 ಮಂದಿ ಕುಳಿತುಕೊಳ್ಳುವ ಬಹು-ತಿನಿಸು ಮಾಂಸಾಹಾರಿ ರೆಸ್ಟೋರೆಂಟ್.
• ಫಿಟ್ನೆಸ್ ಉತ್ಸಾಹಿಗಳ ಗುಣಮಟ್ಟ ಮತ್ತು ಅಗತ್ಯಗಳನ್ನು ಪೂರೈಸುವ ಜಿಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.