ಮಂಗಳೂರು-ವಿಜಯಪುರ ರೈಲಿಗೆ ಉತ್ತಮ ಸ್ಪಂದನೆ
Team Udayavani, Nov 29, 2019, 5:56 AM IST
ತಾತ್ಕಾಲಿಕ ನೆಲೆಯ ರೈಲು ಸೇವೆ ಆರಂಭವಾಗಿ 17 ದಿನಗಳು
ಶಾಶ್ವತಗೊಳಿಸಲು ರೈಲ್ವೇ ಇಲಾಖೆಯಿಂದ ಬೇಕಿವೆ ಪೂರಕ ಕ್ರಮಗಳು
ಮಂಗಳೂರು: ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಆರಂಭಗೊಂಡಿರುವ ತಾತ್ಕಾಲಿಕ ರೈಲಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಾಮಾನ್ಯ ದರ್ಜೆಯ ಎಲ್ಲ ಬೋಗಿಗಳು ಭರ್ತಿಯಾಗುತ್ತಿವೆ. ರೈಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪೂರಕ ಕ್ರಮ ಕೈಗೊಳ್ಳುವ ಮೂಲಕ ಖಾಯಂಗೊಳಿಸಲು ನೈಋತ್ಯ ರೈಲ್ವೇ ಶ್ರಮಿಸಬೇಕಿದೆ.
ಕರಾವಳಿಯಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಈ ರೈಲನ್ನು ನ. 11ರಂದು ಆರಂಭಿ ಸಿದ್ದು, ಮೂರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆ ಯಲ್ಲಿ ಪ್ರತಿದಿನ ಓಡಾಡುತ್ತಿದೆ. ಜನಪ್ರಿಯಗೊಳ್ಳು ತ್ತಿರುವುದರ ಸೂಚನೆಯಾಗಿ ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬೇಡಿಕೆ ವ್ಯಕ್ತವಾಗಿದೆ.
ಸದ್ಯ ಒಂದು ಎಸಿ ಟು-ಟೈರ್ ಮತ್ತು ಎಸಿ ತ್ರಿ ಟೈರ್, ಆರು ದ್ವಿತೀಯ ದರ್ಜೆ ಸ್ಲಿàಪರ್ ಮತ್ತು ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿ ಅಳವಡಿಸಲಾಗಿದೆ. ಎಸಿ ಟು-ಟೈರ್ ಮತ್ತು ತ್ರಿ ಟೈರ್‌ಗೆ ಹೆಚ್ಚಿನ ಇಲ್ಲ. ದ್ವಿತೀಯ ದರ್ಜೆ ಸ್ಲಿಪರ್‌ಗೂ ಸಾಮಾನ್ಯ ಸ್ಪಂದನೆಯಿದ್ದು, ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಆದರೆ ಸಾಮಾನ್ಯ ದರ್ಜೆಯ 4 ಬೋಗಿಗಳು ಭರ್ತಿಯಾಗುತ್ತಿವೆ.
ಕಡಿಮೆ ಯಾನ ದರ
ಮಂಗಳೂರು-ವಿಜಯಪುರ ನಡುವೆ ಎಸಿ ಟು-ಟೈರ್‌ಗೆ 2,045 ರೂ. ಎಸಿ ತ್ರಿ ಟೈರ್‌ಗೆ 1,450 ರೂ., ದ್ವಿತೀಯ ದರ್ಜೆ ಸ್ಲಿಪರ್‌ಗೆ 530 ರೂ. ಮತ್ತು ಸಾಮಾನ್ಯಕ್ಕೆ 214 ರೂ. ದರ ಇದೆ. ದ್ವಿತೀಯ ದರ್ಜೆ ಸ್ಲಿàಪರ್ ಮತ್ತು ಸಾಮಾನ್ಯ ದರ್ಜೆ ದರಗಳು ಬಸ್ ಯಾನ ದರಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ. ಬಸ್ ದರ 800ರಿಂದ 1,000 ರೂ. ವರೆಗೆ ಇರುತ್ತದೆ. ಪ್ರಸ್ತುತ ಈ ರೈಲಿಗೆ ಬಿ.ಸಿ. ರೋಡ್, ಪುತ್ತೂರು, ಸುಬ್ರಹ್ಮಣ್ಯದಲ್ಲಿ ನಿಲುಗಡೆಯೂ ಇದೆ.
ಪೂರಕ ಪ್ರಯತ್ನ ಅಗತ್ಯ
ಉತ್ತರ ಕರ್ನಾಟಕದಿಂದ ಕರಾವಳಿಗೆ ಶಿಕ್ಷಣ, ವ್ಯವಹಾರ, ಉದ್ಯೋಗ, ಚಿಕಿತ್ಸೆ ನಿಮಿತ್ತ ಗಣನೀಯ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಸಾಮಾನ್ಯ ಜನತೆ ಹೆಚ್ಚಾಗಿ ಜನರಲ್ ಅಥವಾ ದ್ವಿತೀಯ ದರ್ಜೆ ಸ್ಲಿàಪರ್ ಬೋಗಿ ಆಯ್ದುಕೊಳ್ಳುತ್ತಾರೆ. ಆದುದರಿಂದ ಜನರಲ್ ಬೋಗಿಗಳನ್ನು ಹೆಚ್ಚಿಸುವ ಅಗತ್ಯವಿದೆ. ತಾತ್ಕಾಲಿಕ ನೆಲೆಯ ರೈಲನ್ನು ಖಾಯಂಗೊಳಿಸಲು ರೈಲ್ವೇ ಮಂಡಳಿ ಒಪ್ಪಿಗೆ ಸೂಚಿಸಬೇಕಿದ್ದರೆ ತಾತ್ಕಾಲಿಕ ಸಂಚಾರ ಅವಧಿಯಲ್ಲಿ ಉತ್ತಮ ನಿರ್ವಹಣೆ, ಲಾಭ ದಾಖಲಾಗಿರಬೇಕು. ಆದ್ದರಿಂದ 3 ತಿಂಗಳ ಅವಧಿಯಲ್ಲಿ ಉತ್ತಮ ನಿರ್ವಹಣೆ ತೋರುವುದಕ್ಕಾಗಿ ಪ್ರಚಾರ, ಮಾಹಿತಿಯಂತಹ ಪೂರಕ ಕ್ರಮಗಳು ಅವಶ್ಯ.
ವೇಳಾಪಟ್ಟಿ ಬದಲಿಸಿ
ರೈಲು ಪ್ರಸ್ತುತ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಇದ್ದು, ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವುದು ಅಗತ್ಯ. ಸಮಯದಲ್ಲೂ ಬದಲಾವಣೆ ಮಾಡಿದರೆ ಅನುಕೂಲ. ಪ್ರಸ್ತುತ ರೈಲು ಸಂಜೆ 6.40ಕ್ಕೆ ವಿಜಯಪುರದಿಂದ ಹೊರಟು ರಾತ್ರಿ 12.30ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ. ಇದನ್ನು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವಂತೆ ಬದಲಾಯಿಸಬೇಕು. ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬಂದು, ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪುವಂತೆ ಮತ್ತು ಮಂಗಳೂರಿನಿಂದ ಸಂಜೆ 4.30ರ ಬದಲು ರಾತ್ರಿ 7 ಗಂಟೆಗೆ ಹೊರಟು ಮರುದಿನ 8 ಗಂಟೆಗೆ ಹುಬ್ಬಳ್ಳಿ ತಲುಪುವಂತೆ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎಂದು ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಂಗಳೂರು ಜಂಕ್ಷನ್-ವಿಜಯಪುರ ರೈಲನ್ನು ಖಾಯಂಗೊಳಿಸುವ ಕುರಿತು 2 ತಿಂಗಳ ಅನಂತರ ನಿರ್ಧರಿಸಲಾಗುವುದು. ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಸೇವೆ ಪಡೆದು ರೈಲು ಜನಪ್ರಿಯ ಆಗುವ ಸಾಧ್ಯತೆ ಇದೆ.
– ಇ. ವಿಜಯಾ, ನೈಋತ್ಯ ರೈಲ್ವೇ ಮುಖ್ಯ ಪಿಆರ್‌ಒ
ವಿಜಯಪುರ-ಮಂಗಳೂರು ರೈಲು ಸಂಚಾರದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿಯ ಜನರಿಗೆ ಅನುಕೂಲವಾಗಿದೆ. 4 ಜನರಲ್ ಬೋಗಿಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಬೋಗಿಗಳಿಗೆ ಬೇಡಿಕೆ ಇದೆ. ಹೆಚ್ಚುವರಿಯಾಗಿ 4 ಜನರಲ್ ಬೋಗಿ ಜೋಡಿಸುವಂತೆ ಸಚಿವ ಸುರೇಶ್ ಅಂಗಡಿಯವರಿಗೆ ಬೇಡಿಕೆ ಸಲ್ಲಿಸಲಾಗಿದೆ.
-ಕುತ್ಬದ್ದೀನ್ ಖಾಜಿ,
ಅಧ್ಯಕ್ಷರು, ಕರ್ನಾಟಕ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ – ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.