ಬಯಲು ರಂಗಮಂದಿರಕ್ಕೆ ಹಸುರು ಛಾವಣಿ
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಸ್ಯ ಲೋಕ
Team Udayavani, Sep 26, 2019, 5:53 AM IST
ಪುತ್ತೂರು: ಕಾಂಕ್ರೀಟ್ ಕಟ್ಟಡ, ಕೃತಕ ಗಿಡಗಳೇ ಸ್ವಾಗತ ಕೋರುವ ಈ ಕಾಲಘಟ್ಟದಲ್ಲಿ ಅಕ್ಷರ ಜ್ಞಾನ ಉಣಬಡಿಸುವ ಸರಕಾರಿ ಶಾಲೆ ಆವರಣದಲ್ಲಿ ಹಸುರು ಗಿಡ-ಬಳ್ಳಿಗಳು ಸೊಂಪಾಗಿ ಹರಡಿ ವಿದ್ಯಾರ್ಥಿಗಳನ್ನು ಕೈ ಬೀಸಿ ತನ್ನೆಡೆಗೆ ಸೆಳೆಯುತ್ತಿದೆ.
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರೌಢಶಾಲಾ ವಠಾರದಲ್ಲಿ ಹಸುರು ನಳ ನಳಿಸುತ್ತಿದೆ. ಸೀಮಿತ ಸ್ಥಳದಲ್ಲಿ ಬಗೆ-ಬಗೆಯ ಗಿಡ, ಬಳ್ಳಿ, ಹುಲ್ಲು ಹಬ್ಬಿ ಹಸುರಿನ ಸೊಗಡನ್ನು ಪಸರಿಸಿದೆ. ಮನಸ್ಸಿಗೆ ಮುದ ತುಂಬುವ ಈ ಹಸುರು ಲೋಕ ಶಾಲಾ ವಾತಾವರಣದ ಅಂದ ಹೆಚ್ಚಿಸಿದೆ.
ಬಳ್ಳಿ ಹಾಸಿದ ಛಾವಣಿ
ಶಾಲಾ ಸ್ಥಾಪನೆಯ ಬೆಳ್ಳಿಹಬ್ಬದ ಪ್ರಯುಕ್ತ ನಿರ್ಮಿಸಿದ ತೆರೆದ ಬಯಲು ರಂಗಮಂದಿರದ ಮೇಲ್ಭಾಗದಲ್ಲಿ ಬಳ್ಳಿಯೇ ಹಬ್ಬಿ, ಬೆಸೆದು ಹಾಸಿದ ಛಾವಣಿ ಗಮನ ಸೆಳೆಯುತ್ತಿದೆ. ಮೂರು ವರ್ಷಗಳ ಹಿಂದೆ ಬಿರು ಬಿಸಿಲಿನ ಹೊತ್ತಲ್ಲೇ ರಂಗ ಮಂದಿರದ ನಾಲ್ಕು ದಿಕ್ಕಿನಲ್ಲಿ ಬಳ್ಳಿ ನೆಡಲಾಗಿತ್ತು. ಅದು ಬೆಳೆದು ಛಾವಣಿ ಪೂರ್ತಿ ಹಬ್ಬಿ ಬಿಸಿಲೇ ನುಸುಳದಷ್ಟು ಆವರಿಸಿಕೊಂಡಿದೆ. ತೆರೆದ ರಂಗಮಂದಿರಕ್ಕೆ ಪ್ರಕೃತಿಯೇ ಮಾಡು ಕಟ್ಟಿಕೊಟ್ಟಂತಿದೆ ಈಗಿನ ದೃಶ್ಯ. ಥಟ್ಟನೆ ಕಂಡಾಗ ದಟ್ಟ ಕಾಡಿನ ಮಧ್ಯೆ ಪ್ರಕೃತಿ ಸೃಷ್ಟಿಸಿದ ಮನೆಯಂತೆ ಭಾಸ ವಾಗುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ.
ಅಲ್ಲೆ ಆಟ-ಪಾಠ
ಡಿಸೆಂಬರ್ ತಿಂಗಳ ಬಿರು ಬಿಸಿಲಿನಲ್ಲಿ ಮಕ್ಕಳು ಹಸುರು ಹಬ್ಬಿರುವ ಛಾವಣಿಯ ರಂಗಮಂದಿರಕ್ಕೆ ಹೊಕ್ಕಿ ಆಟ-ಪಾಠದಲ್ಲಿ ತಲ್ಲಿನರಾಗುತ್ತಾರೆ. ತಣ್ಣನೆಯ ಗಾಳಿಗೆ ಮಕ್ಕಳು ಸಂಭ್ರಮಿಸುತ್ತಾರೆ.
ಹಿತಾನುಭವದ ಜಾಗ
ಬಳ್ಳಿಗಳೇ ರಂಗಮಂದಿರದ ಛಾವಣಿಗೆ ಹಬ್ಬಿವೆ. ಬಿಸಿಲಿನಿಂದ ರಕ್ಷಣೆ, ತಂಪು ವಾತಾವರಣ ಮಕ್ಕಳ ಜತೆಗೆ ಶಿಕ್ಷಕರಿಗೂ ಹಿತಾನುಭವ ಮೂಡಿಸುತ್ತದೆ. ಸಣ್ಣ ಸಭೆ, ಚಟುವಟಿಕೆಗಳನ್ನು ಇದೇ ರಂಗಮಂದಿರದೊಳಗೆ ಆಯೋಜಿಸುತ್ತೇವೆ.
– ವಿನೋದ್ ಕುಮಾರ್ ಕೆ.ಎಸ್.
ಮುಖ್ಯಗುರು, ಕೆಪಿಎಸ್ ಕೆಯ್ಯೂರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.