ವಿಮುಕ್ತಿ ಶ್ಮಶಾನದಲ್ಲಿ ಹಸಿರು ಸಿರಿ, ನೀರ ಕಾರಂಜಿ
Team Udayavani, Feb 2, 2018, 11:10 AM IST
ಸುಳ್ಯ : ಶ್ಮಶಾನ ಅಂದಾಕ್ಷಣ ಕಣ್ಣೆದುರಿಗೆ ಕಾಣುವ ಚಿತ್ರಣ ಭಯ ಮಿಶ್ರಿತ ಪರಿಸರ. ಆದರೆ ಇಲ್ಲೊಂದು ಶ್ಮಶಾನದೊಳಗೆ ಹೊಕ್ಕರೆ ಭಿನ್ನ ದೃಶ್ಯ ಎದುರಾಗುತ್ತದೆ. ದುಃಖೀತ ಮನಸ್ಸಿಗೆ ಸಾಂತ್ವನ ಹೇಳುವಂತಿದೆ ಇಲ್ಲಿನ ವಾತಾವರಣ. ಹೀಗೆ ವಿಶಿಷ್ಟ ರೀತಿಯಲ್ಲಿ ನಿರ್ಮಾಣಗೊಂಡಿರುವ ವಿಮುಕ್ತಿ ಶ್ಮಶಾನ ವಿಶೇಷ ರೀತಿ ಗಮನ ಸೆಳೆಯುತ್ತಿದೆ.
ಉಬರಡ್ಕ ಗ್ರಾ.ಪಂ. ವ್ಯಾಪ್ತಿಯ ಕೋಡಿಯಾಲಬೈಲಿನಲ್ಲಿ 50 ಸೆಂಟ್ಸ್ ಸ್ಥಳದಲ್ಲಿ ಪಂಚಾಯತ್ ಹಾಗೂ ಪ್ರಾಂತೀಯ ಲಯನ್ಸ್ ಜತೆಗೂಡಿ ಸುಮಾರು 35 ಲಕ್ಷ ವೆಚ್ಚದಲ್ಲಿ ಶಶ್ಮಾನ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. 60 ದಿನದಲ್ಲಿ ಈ ವಿಶಿಷ್ಟ ಶ್ಮಶಾನ ಪೂರ್ಣ ಗೊಂಡು, ಫೆ. 10 ರಂದು ಲೋಕಾರ್ಪಣೆ ಗೊಳ್ಳಲಿದೆ. ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉದ್ದೇಶಿತ ವೆಚ್ಚದ ಅಂದಾಜು ಮೊತ್ತ ಹೆಚ್ಚಾಗಿದ್ದು, ಕಾಮಗಾರಿ ಪೂರ್ಣ ಹಂತಕ್ಕೆ ತಲುಪುವ ಸಂದರ್ಭ 50 ಲಕ್ಷ ರೂ.ವ್ಯಯವಾಗಬಹುದು ಅನ್ನುತ್ತಿದೆ ಇಲ್ಲಿನ ಚಿತ್ರಣ.
ಇಲ್ಲಿ ಲಯನ್ಸ್ ಪ್ರಾಂತಿಯ ಸಂಸ್ಥೆ ಈ ಶ್ಮಶಾನಕ್ಕೆ 5 ಲಕ್ಷ ರೂ. ಮತ್ತು ಉಳಿದ 25 ಲಕ್ಷ ರೂ.ಗಳನ್ನು ಉಬರಡ್ಕ ಗ್ರಾ.ಪಂ. ಸರಕಾರದ ವಿವಿಧ ಮೂಲಗಳಿಂದ ಬರುವ ಅನುದಾನ ಬಳಸಿ ವಿನಿಯೋಗಿಸಲಿದೆ. ಕಾಮಗಾರಿ ಮೇಲುಸ್ತುವಾರಿಯನ್ನು ಲಯನ್ಸ್ ಕ್ಲಬ್ ವಹಿಸಿಕೊಂಡಿದ್ದರೆ, ನಿರ್ವಹಣೆ ಹೊಣೆ ಪಂ.ಗೆ ಸೇರಿದೆ.
ಏನೇನಿದೆ?
ಸಾಮಾನ್ಯವಾಗಿ ಶ್ಮಶಾನ ಅಂದರೆ ಶವ ಸುಡಲು ಬೇಕಾದ ಪರಿಕರ ಇರುತ್ತದೆ. ಅಲ್ಲಿ ಸಿಬಂದಿಯ ವಾಸಕ್ಕೊಂದು ಕೊಠಡಿ ಇದ್ದರೆ ಹೆಚ್ಚು. ಆದರೆ ಈ ವಿಮುಕ್ತಿ ಶ್ಮಶಾನ ಪರಿಸರವನ್ನು ಪಾರ್ಕ್ ಮಾದರಿಯಲ್ಲಿ ಸಿದ್ಧಗೊಳಿಸಲಾಗಿದೆ. ಇಲ್ಲಿ ನೆಲದಿಂದ 10 ಅಡಿ ಎತ್ತರ ಶ್ಮಶಾನಧಿಪತಿ ಶಿವನ ಮೂರ್ತಿ, ಅದರ ಸುತ್ತ ಕೊಳ, ನೀರಿನ ಕಾರಂಜಿ, ಆರು ಅಡಿ ಎತ್ತರದ ಶ್ವಪಚನ ಸತ್ಯಹರಿಶ್ಚಂದ್ರನ ಮೂರ್ತಿ, 136 ಮೀಟರ್ ಉದ್ದ, 3 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ, ಶ್ಮಶಾನದ ಒಳ ಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಿದ ರಸ್ತೆ, 40ಕ್ಕೂ ಅಧಿಕ ಬಗೆಯ ಹೂವಿನ ಗಿಡಗಳು, ಶೌಚಾಲಯ, ಸ್ನಾನಗೃಹ, ಶವ ಸುಡಲು ಎರಡು ಸಿಲಿಕಾನ್ ಛೇಂಬರ್, ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್, ಸುತ್ತಲೂ ಆವರಣ ಗೋಡೆ ಇತ್ಯಾದಿ ನಿರ್ಮಿಸಲಾಗಿದೆ.
ವ್ಯಾಪ್ತಿಗೆ ಮಿತಿ ಇಲ್ಲ
ಗ್ರಾ.ಪಂ. ವ್ಯಾಪ್ತಿಯೊಳಗೆ ಈ ಶ್ಮಶಾನ ಇದ್ದರೂ, ಇದು ಸುಳ್ಯ ಪೇಟೆಯಿಂದ 2 ಕಿ.ಮೀ. ದೂರದಲ್ಲಿದೆ. ತಾಲೂಕಿನ ಯಾವುದೇ ಭಾಗದಿಂದ ಶವ ಸುಡಲು ಬಂದರೂ, ಇಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಶ್ಮಶಾನದ ನಿರ್ವಹ ಣೆಗೆ ಗ್ರಾ.ಪಂ. ವತಿಯಿಂದ ಸಿಬಂದಿ ನೇಮಿಸಲಾಗಿದೆ. ಶವ ಸುಡಲು ಬೇಕಾದ ಕಟ್ಟಿಗೆ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಅದಕ್ಕೆ ಸಣ್ಣ ಮೊತ್ತವನ್ನು ನಿಗದಿ ಪಡಿಸಲಾಗುತ್ತದೆ.
ಸುಸಜ್ಜಿತವಾಗಿದೆ
ಶ್ಮಶಾನ ನಿರ್ಮಾಣಕ್ಕೆ 50 ಸೆಂಟ್ಸ್ ಸ್ಥಳವನ್ನು ಈ ಹಿಂದೆಯೇ ಕಾದಿರಿಸಿದ್ದೆವು. ಈಗ ಲಯನ್ಸ್ ಸಹಕಾರದಿಂದ ಸುಸಜ್ಜಿತ ಶ್ಮಶಾನ ನಿರ್ಮಾಣಕ್ಕೆ ಮುಂದಾದೆವು. ನಿರೀಕ್ಷೆಯಂತೆ ಕಾಮಗಾರಿ ಸಾಗಿದೆ. ಶಾಸಕರು ಮತ್ತು ಧರ್ಮಸ್ಥಳದ ವತಿಯಿಂದ ಅನುದಾನ ಲಭಿಸುವ ಭರವಸೆ ದೊರಕಿದೆ.
– ಹರೀಶ್ ರೈ ಉಬರಡ್ಕ ಅಧ್ಯಕ್ಷರು, ಗ್ರಾ.ಪಂ. ಉಬರಡ್ಕ
ಸಹಕಾರದಿಂದ ಯಶಸ್ವಿ
ಪ್ರಾಂತಿಯ ಲಯನ್ಸ್ ವತಿಯಿಂದ ಒಂದು ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಅವಕಾಶ ಇದ್ದು, ಈ ಶ್ಮಶಾನದ ಅಭಿವೃದ್ಧಿಗೆ ಕೈ ಜೋಡಿಸಿದ್ದೇವೆ. ಉಬರಡ್ಕ ಪಂಚಾಯತ್, ಲಯನ್ಸ್, ಇತರೆ ಕೆಲವರ ಸಹಕಾರದಿಂದ ಸುಂದರವಾದ ಶ್ಮಶಾನ ಸಿದ್ಧವಾಗಿದೆ.
– ಜಯರಾಮ ದೇರಪ್ಪಜ್ಜನಮನೆ
ಪ್ರಾಂತೀಯ ಅಧ್ಯಕ್ಷರು ಲಯನ್ಸ್
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.