ಅಂತರ್ಜಲ ಮಟ ಇಳಿಕೆ; 2 ದಿನಗಳಿಗೊಮ್ಮೆ ನೀರು ಪೂರೈಕೆ
ಹಿರಿಯಾಜೆ ನಿವಾಸಿಗಳ ಬಾಯಾರಿದ ಬದುಕು
Team Udayavani, Apr 27, 2019, 4:34 PM IST
ಬೆಳ್ತಂಗಡಿ ಎ. 26: ಕೊಳವಿ ಬಾವಿಗಳಲ್ಲಿನೀರಿನ ಮಟ್ಟ ಇಳಿಯುತ್ತಿದೆ, ಪಂಚಾಯತ್‌ನೀರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ… ಭೂಮಿಒಣಗಿದ್ದು, ಬಾವಿ ತೆಗೆಯಲು ಹಣವಿಲ್ಲ. ಇದುತಾಲೂಕಿನ ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಹಿರಿಯಾಜೆ ನಿವಾಸಿಗಳ ಅಳಲು.
ಕಳೆದ ಎರಡು ವರ್ಷಗಳ ಹಿಂದೆ ಕಲುಷಿತ ಕೆರೆ ನೀರನ್ನೇ ಅವಲಂಬಿಸಿದ್ದ ಇಲ್ಲಿನ ನಿವಾಸಿಗಳಿಗೆಪ್ರಸ್ತುತ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯತ್‌ನಿಂದ ಕೊರೆದ ಕೊಳವೆ ಬಾವಿನೀರಿನ ಆಶ್ರಯ ದೊರೆತಿದೆ. ಪಂಚಾಯತ್ ನೀರು ಎರಡು ದಿನಗಳಿಗೊಮ್ಮೆಬರುತ್ತದೆ. ಆದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ನೇರ ಟ್ಯಾಂಕ್‌ಗೆ ತುಂಬಿ ಸರಬರಾಜು ಮಾಡಿದ್ದಲ್ಲಿಕೊಂಚ ನೀರು ಸಂಗ್ರಹಿಸಿಕೊಳ್ಳಬಹುದು. ಆದರೆ ನೇರವಾಗಿ ನೀರು ಸರಬರಾಜಾಗಿ ಎತ್ತರ ಪ್ರದೇಶವಾದ್ದರಿಂದ ನೀರು ಬರುವುದೇ ಅಪರೂಪವಾಗಿದೆ ಎನ್ನುತ್ತಾರೆ ಹಿರಿಯಾಜೆ ನಿವಾಸಿ ಪ್ರೇಮಾ.
ಸಮಯಕ್ಕೆ ಸರಿ ನೀರಿಲ್ಲ:
ನಾವು ಕೆಲಸಕ್ಕೆ ಹೋಗುವವರು. ಅವರಸಮಯಕ್ಕೆ ನೀರು ಬಿಟ್ಟರೆ ನಾವು ಸಂಗ್ರಹಿಸಿಡುವುದು ಹೇಗೆ ? ನಿರ್ದಿಷ್ಟ ಸಮಯ ಎಂದು ನಿಗದಿಪಡಿಸಿದರೆ ನಾವು ಅದೇ ಸಮಯದಲ್ಲಿ ನೀರು ಸಂಗ್ರಹಿಸಿಡಬಹುದು. ಒಮ್ಮೊಮ್ಮೆ ಬೆಳಗ್ಗೆ ಮತ್ತೂಮ್ಮೆಸಂಜೆ ನೀರು ಬಿಡುವುದರಿಂದ ಸಮಸ್ಯೆಯಾಗಿದೆ ಎಂದು ಗಣೇಶ್ ಅಳಲು ತೋಡಿಕೊಂಡರು.ಪ್ರತಿದಿನ ಸಂಜೆ 6ರಿಂದ 1 ಗಂಟೆ ನೀರು ಬರುತ್ತಿದೆ. ನೀರು ಬಾರದಿದ್ದಲ್ಲಿ ಸ್ಥಳೀಯರ ಮನೆಯಿಂದನೀರು ಹೊತ್ತು ತರಬೇಕಾಗಿದೆ. ಸಮಸ್ಯೆ ಯಾರಿಗೆ ಹೇಳುವುದು, ನೀರು ಇಲ್ಲದಿದ್ದರೆ ಪಂಚಾಯತ್‌ಸಿಬಂದಿಯಾದರೂ ಏನು ಮಾಡಿಯಾರು… ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಏನುಎಂಬುದು ಚಿಂತೆಯಾಗಿದೆ ಎಂದು ಸ್ಥಳೀಯರಾದ ಜಯಾನಂದ, ಪ್ರಮೀಳಾ, ಶತೀಶ್, ಬೇಬಿ ಸಮಸ್ಯೆಬಗ್ಗೆ ಆತಂಕ ವ್ಯಕ್ತಪಡಿಸಿದರು.
ನಿವಾಸಿಗಳ ಬೇಡಿಕೆಗಳು:
> ಕೆರೆಗಳ ಹೂಳು ತೆಗೆಯಬೇಕು.
> ನೇರವಾಗಿ ಪೈಪ್‌ಲೈನ್ ಮೂಲಕ ನೀರು
> ನೀಡದೆ ಟ್ಯಾಂಕ್ ಮೂಲಕವೇ ನೀರು ಬರುವಂತಾಗಲಿ.
> ಸಮಯಕ್ಕೆ ಸರಿಯಾಗಿ ನೀರು ಸಿಗಲಿ.
> ಕೊಳವೆ ಬಾವಿಯಿಂದ ನೀರು ಒದಗಿಸಲು
ಕ್ರಮ ಅಗತ್ಯ.
ಒಣ ಭೂಮಿ ಹಾಗೂ ಎತ್ತರಪ್ರದೇಶವಾದ್ದರಿಂದ ಗ್ರಾ.ಪಂ.ನಿಂದ
ಸರಬರಾಜಾಗುತ್ತಿರುವ ನೀರು ಪ್ರಶರ್ ಇಲ್ಲದೆ ಮೇಲೆ ಏರುತ್ತಿಲ್ಲ.
ಹೆಚ್ಚಿನವರು ಕೆಲಸಕ್ಕೆ ತೆರಳುವುದರಿಂದ ಸಮಯಕ್ಕೆ ಸರಿಯಾಗಿ ನೀರು
ಬಾರದೇ ಸಂಗ್ರಹಿಸಿಡಲು ತೊಡಕಾಗಿದೆ ಎಂಬುದು ಉದಯವಾಣಿ ತಂಡಕ್ಕೆ
ಕಂಡುಬಂದಿದೆ.
ನೀರಿದ್ದರೂ ಉಪಯೋಗಕ್ಕಿಲ್ಲ :
ಹಿರಿಯಾಜೆ ದೇವಸ್ಥಾನ ಕೆಳಗಿರುವ ಕೆರೆಯಲ್ಲಿ ಊರಿಗೆಆಗುವಷ್ಟು ನೀರಿದೆ. ಸಮೀಪದಲ್ಲೇ ನೀರಿನ ತೊರೆಗೆಕಟ್ಟ ಕಟ್ಟಿದ್ದು, ನೀರಿನ ಒರತೆ ಈಗಲೂ ಇದೆ. ಆದರೆನೀರು ಕಲುಷಿತಗೊಂಡಿದ್ದರಿಂದ ಊರಿಗೆ ಊರೇಬಾಯಾರಿದಂತಾಗಿದೆ. ಸಿಕ್ಕಸಿಕ್ಕಲ್ಲಿ ಕೊಳವೆ ಬಾವಿ ತೆಗೆದು ಅಂತರ್ಜಲ ಮಟ್ಟ ಕುಸಿತ ಮಾಡುವ ಬದಲು, ಕೆರೆಯಕಲುಷಿತ ನೀರು ಹಾಗೂ ಕೆಸರು ತೆಗೆದಲ್ಲಿ ಮೂರುಗ್ರಾಮಗಳಿಗೆ ನೀಡುವಷ್ಟು ನೀರು ಸಿಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಉದಯವಾಣಿ ಆಗ್ರಹ:
ವಾರಕ್ಕೆ 2 ದಿನ ಟ್ಯಾಂಕರ್‌ನೀರು ಸರಬರಾಜುಮಾಡಿದ್ದಲ್ಲಿ ಉತ್ತಮ. ಇಲ್ಲವೇಸ್ಥಳೀಯ ಖಾಸಗಿ ಕೊಳವೆಬಾವಿಮೂಲಕ ನೀರು ಒದಗಿಸುವ ಚಿಂತನೆಗ್ರಾ.ಪಂ.ನಿಂದ ಆಗಬೇಕಿದೆ.
ಮಾಹಿತಿ ನೀಡಿ: ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನಸಹಿತ “ಉದಯವಾಣಿ’ ವಾಟ್ಸಪ್ ನಂಬರ್ 91080 51452 ಬರೆದು ಕಳುಹಿಸಿ.
.ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.