Market ಧಾರಣೆ ಇಳಿಕೆ ತಂತ್ರಕ್ಕೆ ಬೆಳೆಗಾರರ ಪ್ರತಿತಂತ್ರ?
ಹೊರ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಳಿತ
Team Udayavani, Oct 14, 2023, 10:43 PM IST
ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊರ ಮಾರುಕಟ್ಟೆಯ ವ್ಯಾಪಾರಿಗಳು ಧಾರಣೆ ಇಳಿಕೆಯ ತಂತ್ರಗಾರಿಕೆ ನಡೆಸುತ್ತಿದ್ದು, ಬೆಳೆಗಾರರು ಅಡಿಕೆ ಮಾರಾಟ ಮಾಡದೆ ಕಾದು ನೋಡುವ ಪ್ರತಿ ತಂತ್ರಗಾರಿಕೆ ಪ್ರದರ್ಶಿಸಲು ಮುಂದಾಗಿದ್ದಾರೆ.
ಅಡಿಕೆ ಧಾರಣೆಯು ಏರಿಕೆಯ ನಾಗಲೋಟದ ನಡುವೆ ಕೆಲವು ದಿನಗಳಿಂದ ಧಾರಣೆ ಏಕಾಏಕಿ ಕುಸಿತ ಕಂಡಿದೆ. ಹೊಸ ಅಡಿಕೆಗೆ ಹೋಲಿಸಿದರೆ ಸಿಂಗಲ್ ಚೋಲ್ ಧಾರಣೆಯಲ್ಲಿ ಹೆಚ್ಚಿನ ಇಳಿಕೆ ಕಂಡಿದ್ದು ಇದರ ಹಿಂದೆ ಧಾರಣೆ ಕುಗ್ಗಿಸುವ ಲಾಬಿ ಇರುವ ಸಾಧ್ಯತೆ ಕಂಡು ಬಂದಿದೆ. ಬರ್ಮಾದಿಂದ ಕಳಪೆ ದರ್ಜೆಯ ಅಡಿಕೆ ಪೂರೈಕೆ ಆಗಿರುವ ಅನುಮಾನ ಬೆಳೆಗಾರರಿಂದ ವ್ಯಕ್ತವಾಗಿದ್ದು, ಧಾರಣೆ ಇಳಿಕೆಯ ಹಿಂದಿನ ಅಸಲಿ ಕಥೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಹೊರ ಮಾರುಕಟ್ಟೆಯಲ್ಲಿ ಇಳಿಕೆ
ಪ್ರತೀ ಬಾರಿ ಮಾರುಕಟ್ಟೆಯಲ್ಲಿ ಸಹಕಾರ ಸಂಘಗಳ ಧಾರಣೆಗಿಂತ ಹೊರ ಮಾರುಕಟ್ಟೆಯ ಧಾರಣೆ ಹೆಚ್ಚಿರುತಿತ್ತು. ಆದರೆ ಈ ಬಾರಿ ಅದಲು ಬದಲಾಗಿದೆ. ಅ. 14ರಂದು ಪುತ್ತೂರು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 421 ರೂ. ಇದ್ದರೆ, ಕ್ಯಾಂಪ್ಕೋದಲ್ಲಿ 425 ರೂ. ಧಾರಣೆ ಇತ್ತು. ಡಬ್ಬಲ್ ಚೋಲ್ಗೆ 450ರಿಂದ 470 ರೂ. ತನಕ ಇದ್ದರೆ, ಕ್ಯಾಂಪ್ಕೋದಲ್ಲಿ 460-485 ರೂ. ತನಕ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.