ಎರಡು ಗುಜರಿ ವ್ಯಾಪಾರ ಸಂಸ್ಥೆಗಳಿಂದ 83 ಕೋ. ರೂ. ಜಿಎಸ್‌ಟಿ ವಂಚನೆ ಪತ್ತೆ!

Team Udayavani, Jun 10, 2019, 11:35 AM IST

scrap

ಸಾಂದರ್ಭಿಕ ಚಿತ್ರ

ಮಂಗಳೂರು: ಎರಡು ಗುಜರಿ ವ್ಯಾಪಾರ ಸಂಸ್ಥೆಗಳು 83 ಕೋಟಿ ರೂ. ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಮಾಡಿದ ಪ್ರಕರಣವನ್ನು ಮಂಗಳೂರಿನ ಕೇಂದ್ರೀಯ ಜಿಎಸ್‌ಟಿ ಕಮಿಷನರೆಟ್‌ ಭೇದಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದೆ.

ಮಂಗಳೂರಿನ ಗುಜರಿ ವ್ಯಾಪಾರಿ ಮೆ| ತೌಹೀದ್‌ ಸ್ಕ್ರಾಪ್ ಡೀಲರ್‌ನ ಪಿ.ಕೆ. ಅಬ್ದುಲ್‌ ರಹೀಂ ಮತ್ತು ಮೆ| ಎಂ.ಕೆ. ಟ್ರೇಡರ್ನ ಮಾಲಕ ಅಬ್ದುಲ್‌ ಖಾದರ್‌ ಕೂಳೂರು ಚಾಯಬ್ಬ ಬಂಧಿತರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರಿಬ್ಬರೂ 2018ನೇ ಇಸವಿಯಿಂದ ನಕಲಿ ಬಿಲ್‌ ತಯಾರಿಸಿ ಸರಕಾರಕ್ಕೆ ಜಿಎಸ್‌ಟಿ ಪಾವತಿಸದೆ ವಂಚನೆ ಎಸಗುತ್ತಿದ್ದರು ಎಂಬುದನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಮಂಗಳೂರಿನ ಕೇಂದ್ರೀಯ ಜಿಎಸ್‌ಟಿ ಕಮಿಷನರೆಟ್‌ನ ತೆರಿಗೆಗಳ್ಳತನ ಪತ್ತೆ ತಂಡ (ಆ್ಯಂಟಿ ಇವೇಶನ್‌ ವಿಂಗ್‌) ಖಚಿತ ಮಾಹಿತಿ ಮೇರೆಗೆ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸಿ ಈ ವಂಚನೆಯನ್ನು ಬಯಲಿಗೆಳೆದಿದೆ. ಈ ಸಂಸ್ಥೆಗಳು ರಾಜ್ಯದ ವಿವಿಧೆಡೆ ವ್ಯವಹಾರ ಸಂಬಂಧ ಹೊಂದಿದ್ದು, ಎರಡು ದಿನಗಳ ಹಿಂದೆ ಬೆಳ್ತಗಂಡಿ ಗುಜರಿ ಅಂಗಡಿಗೂ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಎರಡೂ ಸಂಸ್ಥೆಗಳು ಸುಮಾರು 15 ಕೋಟಿ ರೂ. ಮೊತ್ತದ ನಕಲಿ ಬಿಲ್‌ ಬಳಕೆ ಮಾಡಿದ್ದು, ಒಟ್ಟು 83 ಕೋಟಿ ರೂ. ಮೊತ್ತದ ಸರಕು ಇದರಲ್ಲಿ ಒಳಗೊಂಡಿದೆ ಎಂದು ಕೇಂದ್ರೀಯ ಜಿಎಸ್‌ಟಿ ಕಮಿಷನರ್‌ ಧರ್ಮ ಸಿಂಗ್‌ ಪ್ರಕಟನೆ ತಿಳಿಸಿದೆ.

ನಕಲಿ ವ್ಯವಹಾರ ಹೀಗೆ ನಡೆಯುತ್ತಿತ್ತು
ಮೆ| ತೌಹೀದ್‌ ಸ್ಕ್ರಾಪ್ ಡೀಲರ್‌ ಮತ್ತು ಮೆ| ಎಂ.ಕೆ. ಟ್ರೇಡರ್ ಸಂಸ್ಥೆಗಳು ಬೇರೆ ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿ ನಕಲಿ ಬಿಲ್‌ (ಇನ್‌ವಾಯ್ಸ) ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪಡೆದು ಸರಕಾರಕ್ಕೆ ವಂಚಿಸುತ್ತಿದ್ದವು. ಇಲ್ಲಿ ನಿಜವಾಗಿಯೂ ಸರಕು ಸಾಗಾಟ ಆಗುತ್ತಿರಲಿಲ್ಲ.

ಈ ಸಂಸ್ಥೆಗಳ ಮಾಲಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಲೋಹದ ಗುಜರಿ ಸಾಮಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್‌ ಕಾಪರ್‌ ರಾಡ್ಸ್‌ ಇಂಗೊಟ್ಸ್‌ ಕಾಸ್ಟಿಂಗ್ಸ್‌ ಮತ್ತಿತರ ಸಾಮಗ್ರಿಗಳ ತಯಾರಿಕ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಈ ನಕಲಿ ಐಟಿಸಿಗಳನ್ನು ಉಪಯೋಗಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅಲ್ಲದೆ ಅವರು ನಕಲಿ ಬಿಲ್‌ ಹೊಂದಿದವರಿಗೆ ನಕಲಿ ಐಟಿಸಿ ಕ್ರೆಡಿಟ್‌ ವರ್ಗಾವಣೆ ಮಾಡಲು ಕೂಡ ಈ ನಕಲಿ ಬಿಲ್‌ಗ‌ಳನ್ನು ಉಪಯೋಗಿಸುತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳು ನಕಲಿ ಬಿಲ್‌ ತಯಾರಿಸುವ ವ್ಯಕ್ತಿಗೆ ಶೇ. 3ರಷ್ಟು ಕಮಿಷನ್‌ ಪಾವತಿ ಮಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇಂತಹ ನಕಲಿ ಬಿಲ್‌ ತಯಾರಿಸಿ ಕೊಡುವ ಜಾಲವೇ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

Tamil Nadu braced for torrential rains; 5 flights, 4 trains canceled

Chennai: ಧಾರಾಕಾರ ಮಳೆಗೆ ತಮಿಳುನಾಡು ಹೈರಾಣ; 5 ವಿಮಾನ, 4 ರೈಲುಗಳ ಸಂಚಾರ ರದ್ದು

High Court: “ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

High Court: “ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

Jaishankar reaches Pakistan: Indian Foreign Minister visits after 9 years

Jaishankar: ಪಾಕ್‌ ತಲುಪಿದ ಜೈಶಂಕರ್‌: 9 ವರ್ಷ ಬಳಿಕ ಭಾರತದ ವಿದೇಶಾಂಗ ಸಚಿವ ಭೇಟಿ

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವುMadikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Missing case: ಕುದ್ರೋಳಿಗೆ ಬಂದಿದ್ದ ಮಹಿಳೆ ನಾಪತ್ತೆ; ದೂರು ದಾಖಲು

10

Kulai: ಅವೈಜ್ಞಾನಿಕ ಕುಳಾಯಿ ಮೀನುಗಾರಿಕಾ ಜೆಟ್ಟಿ

9

Mangaluru: ಸಾವಯವ ಕೃಷಿಕ ಗ್ರಾಹಕ ಬಳಗದಿಂದ ನ. 1ರಂದು ನಗರದಲ್ಲಿ ಕಾರ್ಯಾಗಾರ

8(1)

Padil ಸುತ್ತಮುತ್ತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿ; ಸಂಚಾರ ದುಸ್ತರ

4(4)

Mangaluru: ಜನಸಾಗರವೇ ಸಂಭ್ರಮಿಸಿದ ಮಂಗಳೂರು ದಸರಾ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Untitled-1

Missing case: ಕುದ್ರೋಳಿಗೆ ಬಂದಿದ್ದ ಮಹಿಳೆ ನಾಪತ್ತೆ; ದೂರು ದಾಖಲು

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

Tamil Nadu braced for torrential rains; 5 flights, 4 trains canceled

Chennai: ಧಾರಾಕಾರ ಮಳೆಗೆ ತಮಿಳುನಾಡು ಹೈರಾಣ; 5 ವಿಮಾನ, 4 ರೈಲುಗಳ ಸಂಚಾರ ರದ್ದು

High Court: “ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

High Court: “ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

Jaishankar reaches Pakistan: Indian Foreign Minister visits after 9 years

Jaishankar: ಪಾಕ್‌ ತಲುಪಿದ ಜೈಶಂಕರ್‌: 9 ವರ್ಷ ಬಳಿಕ ಭಾರತದ ವಿದೇಶಾಂಗ ಸಚಿವ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.