ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್ಟಿ ಅಗತ್ಯ: ಡಾ| ಸುಬ್ರಹ್ಮಣ್ಯಂ
Team Udayavani, Jul 13, 2017, 2:10 AM IST
ಬಂದರು: ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್ಟಿಯಂತಹ ತೆರಿಗೆ ಪದ್ಧತಿಗಳು ಅಗತ್ಯವಾಗಿದ್ದು, ಹೊಸ ತೆರಿಗೆ ಪದ್ಧತಿಗಳು ಬಂದಾಗ ಆತಂಕಗಳಾಗುವುದು ಸಹಜ. ಎಲ್ಲರೂ ಕೈಜೋಡಿಸಿಕೊಂಡು ಇದರ ಯಶಸ್ಸಿಗೆ ಶ್ರಮಿಸಬೇಕು ಎಂದು ಸೆಂಟ್ರಲ್ ಎಕ್ಸೈಸ್ನ ಆಯುಕ್ತ ಡಾ| ಎಂ. ಸುಬ್ರಹ್ಮಣ್ಯಂ ಹೇಳಿದರು. ಅವರು ಬುಧವಾರ ನಗರದ ಬಂದರಿನಲ್ಲಿರುವ ಕೆಸಿಸಿಐ ಸಭಾಂಗಣದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಯೋಜಿಸಿದ್ದ ಜಿಎಸ್ಟಿ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ವ್ಯಾಟ್ ಬಂದಾಗಲೂ ವರ್ತಕರು ಸಹಿತ ಎಲ್ಲರಿಗೂ ಆತಂಕ ಎದುರಾಗಿತ್ತು. ಆದರೆ ಸಮಯ ಕಳೆದಂತೆ ಅದು ಸರಿಯಾಗಿದೆ. ಹೂಡಿಕೆದಾರರು ಈ ಹಿಂದಿನ ಎಲ್ಲ ಗೊಂದಲಗಳನ್ನು ಬಿಟ್ಟು ಹೊಸ ಪದ್ಧತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕುರಿತು ಯಾವುದೇ ಅನುಮಾನಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದರು. ಜಿಎಸ್ಟಿಯಲ್ಲಿ ಸಿಜಿಎಸ್ಟಿ, ಎಸ್ಜಿಎಸ್ಟಿ ಹಾಗೂ ಐಜಿಎಸ್ಟಿಗಳೆಂಬ ವಿಭಾಗಗಳಿಗೆ ಇವುಗಳ ಕುರಿತು ತಿಳಿವಳಿಕೆ ಇದ್ದಾಗ ನಮಗೆ ಜಿಎಸ್ಟಿ ಅಳವಡಿಸಿಕೊಳ್ಳುವುದು ಸುಲಭವಾಗುತ್ತದೆ. ಜಿಎಸ್ಟಿ ವ್ಯಾಪ್ತಿಗೆ ಒಗ್ಗಿಕೊಳ್ಳಲು ಅಕ್ಟೋಬರ್ವರೆಗೆ ಅವಕಾಶ ಇರುವುದರಿಂದ ವರ್ತಕರು ಆತಂಕ ಪಡಬೇಕಾಗಿಲ್ಲ ಎಂದರು.
ಬಳಿಕ ತೆರಿಗೆ ಇಲಾಖಾ ಅಧಿಕಾರಿ ಗಳೊಂದಿಗೆ ಸಂವಾದ ನಡೆಯಿತು. ವೇದಿಕೆಯಲ್ಲಿ ಕೆಸಿಸಿಐ ಗೌರವ ಕೋಶಾಧ್ಯಕ್ಷ ಎಂ. ಗಣೇಶ್ ಭಟ್, ಗೌರವ ಕಾರ್ಯದರ್ಶಿ ಪಿ.ಬಿ. ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನಾ ಸ್ವಾಗತಿಸಿದರು. ಉಪಾಧ್ಯಕ್ಷೆ ವಾತಿಕಾ ಪೈ ಅತಿಥಿಯವರನ್ನು ಪರಿಚಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.