15 ದಿನದಲ್ಲೇ ಉದ್ಯೋಗಕ್ಕೆ ಕತ್ತರಿ


Team Udayavani, Aug 3, 2017, 7:10 AM IST

UPNYASAKA.jpg

ಮಂಗಳೂರು: ರಾಜ್ಯ ಸರಕಾರವು 2017-18ನೇ ಸಾಲಿನಲ್ಲಿ ನೇಮಕಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ 15 ದಿನಗಳ ಉದ್ಯೋಗ ಭಾಗ್ಯ ನೀಡಿದೆ. ಅಂದರೆ ಜು. 15ರಂದು ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದ ಸರಕಾರ ಜುಲೈ 31ಕ್ಕೆ ಮತ್ತೆ ಹೊಸ ಸುತ್ತೋಲೆಯನ್ನು ಹೊರಡಿಸುವ ಮೂಲಕ ಹಿಂದಿನ ನೇಮಕಾತಿಯನ್ನು ರದ್ದುಗೊಳಿಸಿದೆ. 

ಹೀಗಾಗಿ ಜು.15ರ ವೇಳೆಗೆ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡವರಲ್ಲಿ ಶೇ.50ರಷ್ಟು ಮಂದಿ ರಾಜ್ಯ ಸರಕಾರದ ಆದೇಶದಿಂದ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ರಾಜ್ಯದ ಸರಕಾರಿ ಪದವಿ ಕಾಲೇಜುಗಳಿಗೆ ಈಗಾಗಲೇ ಖಾಯಂ ಉಪನ್ಯಾಸಕರನ್ನು ನೇಮಿಸಿರುವ ಸರಕಾರ, ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಅತಿಥಿ ಉಪನ್ಯಾಸಕರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಅತಿಥಿ ಉಪ ನ್ಯಾಸಕರ ಭವಿಷ್ಯ ಅತಂತ್ರ ಸ್ಥಿತಿಗೆ ತಲು ಪಿರುವ ಜತೆಗೆ, ವಿದ್ಯಾರ್ಥಿಗಳಿಗೂ ಪಾಠ ಇಲ್ಲದಂತಾಗಿದೆ. 

ಭಿನ್ನ ರೀತಿಯ ಸುತ್ತೋಲೆ
2013ರಲ್ಲಿ ನೇಮಕಗೊಂಡ ಅತಿಥಿ ಉಪ ನ್ಯಾಸಕರನ್ನು ಹಲವು ಗೊಂದಲಗಳ ಮಧ್ಯೆ 2016-17ನೇ ಶೈಕ್ಷಣಿಕ ವರ್ಷದ ವರೆಗೆ ಮುಂದುವರಿಸಿತ್ತು. ಆದರೆ ಈ ಶೈಕ್ಷಣಿಕ ವರ್ಷದಿಂದ ತನ್ನ ನಿಯಮದಲ್ಲಿ ಬದ ಲಾವಣೆ ಮಾಡಿಕೊಂಡು ಅತಿಥಿ ಉಪ ನ್ಯಾಸಕರ ನೇಮಕಾತಿಗಾಗಿ ಜೂ. 23ಕ್ಕೆ ಸುತ್ತೋಲೆ ಯೊಂದನ್ನು ಹೊರಡಿಸಿತ್ತು. 

ಇದರಲ್ಲಿ ಕೆಲವೊಂದು ಅರ್ಹತೆಗಳನ್ನು ನೀಡ ಲಾಗಿದ್ದು, ಅವರು ಪಡೆದ ಅಂಕಗಳಿಗೆ ಗರಿಷ್ಠ 40 ಅಂಕಗಳು, ಪಿಎಚ್‌ಡಿ/ಎನ್‌ಇಟಿ/ಎಸ್‌ಎಲ್‌ಇಟಿ ಪಡೆದವರಿಗೆ 30 ಅಂಕಗಳು, ಪ್ರತಿ ವರ್ಷಕ್ಕೆ 3 ಅಂಕಗಳಂತೆ 10 ವರ್ಷ ಅನುಭವ ಪಡೆದವರಿಗೆ ಗರಿಷ್ಠ 30 ಅಂಕಗಳನ್ನು ನೀಡಿ ಒಟ್ಟು 100 ಅಂಕಗಳಲ್ಲಿ ಆಯ್ಕೆಪ್ರಕ್ರಿಯೆ ನಡೆಸಿತ್ತು. 

ಅದರಂತೆ ಜು.14ರ ವೇಳೆಗೆ ಅತಿಥಿ ಉಪನ್ಯಾಸಕರ ಅಂತಿಮ ಅರ್ಹತಾ ಪಟ್ಟಿ ಸಿದ್ಧ ಗೊಳಿಸಲಾಗಿತ್ತು. ಆಯ್ಕೆಗೊಂಡ ಅಭ್ಯರ್ಥಿ  ಗಳು ಜು. 15ರಿಂದ ಕೆಲಸಕ್ಕೆ ಹಾಜ ರಾಗಿ ದ್ದರು. ಆದರೆ ಜು. 31ಕ್ಕೆ ಸರಕಾರ ಮತ್ತೂಂದು ಸುತ್ತೋಲೆ ಹೊರ ಡಿಸುವ ಮೂಲಕ ಹಿಂದಿನ ನೇಮಕಾತಿ ರದ್ದುಗೊಳಿಸಿದೆ. 

ಆ ಸುತ್ತೋಲೆಯ ಪ್ರಕಾರ ಅಭ್ಯರ್ಥಿಯ ಅರ್ಹತೆಗೆ ಆತ ಪಡೆದ ಅಂಕಗಳಲ್ಲಿ ಶೇ. 50 ಅನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಗರಿಷ್ಠ 50 ಅಂಕಗಳು, ಪಿಎಚ್‌ಡಿಗೆ 15 ಅಂಕ, ಎನ್‌ಇಟಿ/ಎಸ್‌ಎಲ್‌ಇಟಿಗೆ 12 ಅಂಕ, ಎಂ.ಫಿಲ್‌ ಪಡೆದವರಿಗೆ 8 ಅಂಕ, ಪ್ರತಿ ವರ್ಷಕ್ಕೆ 3 ಅಂಕಗಳಂತೆ 5 ವರ್ಷ ಅನುಭವ ಪಡೆ ದವರಿಗೆ ಗರಿಷ್ಠ 15 ಅಂಕ ನೀಡಿ ಒಟ್ಟು 100 ಅಂಕಗಳಲ್ಲಿ ಮತ್ತೆ ಆಯ್ಕೆಪ್ರಕ್ರಿಯೆ ನಡೆಸಿದೆ. 

ಈ ಸುತ್ತೋಲೆಯ ಪ್ರಕಾರ ಹಿಂದೆ ನೇಮಕಗೊಂಡವ ರಲ್ಲಿ ಶೇ. 50ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 

250 ಖಾಯಂ ಉಪನ್ಯಾಸಕರು 
ದ.ಕ., ಕೊಡಗು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ 37 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಇಲ್ಲಿಗೆ ಸುಮಾರು 250 ಮಂದಿ ಖಾಯಂ ಉಪನ್ಯಾಸಕರು ಆಗಮಿಸಲಿದ್ದಾರೆ. ಇವರು ಅತಿಥಿ ಉಪನ್ಯಾಸಕರಿಗಿಂತ ಎರಡು ಪಟ್ಟು ಅಂದರೆ ವಾರದಲ್ಲಿ 16 ಗಂಟೆ ಪಾಠ ಮಾಡ ಬೇಕಾಗುತ್ತದೆ. ಹೀಗಾಗಿ ಇಬ್ಬರು ಅತಿಥಿ ಉಪನ್ಯಾಸಕರ ಜವಾಬ್ದಾರಿಯನ್ನು ಖಾಯಂ ಉಪನ್ಯಾಸಕರು ನಿರ್ವಹಿಸಲಿದ್ದು, ಅತಿಥಿ ಉಪನ್ಯಾಸಕರ ಸಂಖ್ಯೆ ಅರ್ಧದಷ್ಟು ಇಳಿಕೆ ಯಾಗಲಿದೆ. ದ.ಕ.ದಲ್ಲಿ ಒಟ್ಟು 19 ಸ. ಪ್ರಥಮ ದರ್ಜೆ ಕಾಲೇಜುಗಳಿದ್ದು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ 641 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. 

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸರಕಾರ ಎ, ಬಿ, ಸಿ ವಲಯಗಳನ್ನಾಗಿ ವಿಭಾಗಿಸಿರುತ್ತದೆ. ಅಂದರೆ ಎ ವಲಯದ ಕಾಲೇಜು ನಗರದ ಕಾಲೇಜುಗಳಾಗಿದ್ದು, ಸಿ ವಲಯ ಗ್ರಾಮೀಣ ಭಾಗದ ಕಾಲೇಜಾಗಿರುತ್ತದೆ. ಪ್ರಸ್ತುತ ಸರಕಾರವು ಸಿ ವಲಯದ ಉಪನ್ಯಾಸಕರನ್ನು ಉಳಿದ ವಲಯಕ್ಕೆ ವರ್ಗಾವಣೆಗೊಳಿ ಸಿದ್ದು, ಹೊಸ ಖಾಯಂ ಉಪನ್ಯಾಸಕರನ್ನು ಸಿ ವಲಯಕ್ಕೆ ನೇಮಕಗೊಳಿಸುತ್ತದೆ. 

ಆ.10ರೊಳಗೆ ನೇಮಕ
ನಮ್ಮ ವ್ಯಾಪ್ತಿಯ 37 ಸರಕಾರಿ ಕಾಲೇಜುಗಳಿಗೆ ಸುಮಾರು 250 ಖಾಯಂ ಉಪನ್ಯಾಸಕರ ಮರು ನೇಮಕವಾಗಲಿದ್ದು, ಉಳಿದಂತೆ ಸುಮಾರು 300ರಷ್ಟು ಅತಿಥಿ ಉಪನ್ಯಾಸಕರ ನೇಮಕವಾಗಬಹುದು. ಆ. 10 ರೊಳಗೆ ಖಾಯಂ ಉಪನ್ಯಾಸಕರ ನೇಮಕವಾಗಲಿದೆ. ಉಳಿದ ಹುದ್ದೆಗಳನ್ನು ಅತಿಥಿ ಉಪನ್ಯಾಸಕರು ತುಂಬಲಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾಗಿಲ್ಲ.
– ಡಾ| ಉದಯಶಂಕರ್‌
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಮಂಗಳೂರು ವಿಭಾಗ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.