ಅತಿಥಿ ಉಪನ್ಯಾಸಕರ ವೇತನ ಹೊಣೆ ಪ್ರಾಂಶುಪಾಲರದ್ದು: ಶಾಸಕಿ ಶಕುಂತಳಾ
Team Udayavani, Apr 13, 2017, 1:57 PM IST
ಉಪ್ಪಿನಂಗಡಿ: ಅತಿಥಿ ಉಪನ್ಯಾಸಕರ ಸೇವೆ ಪಡೆದು ಬಳಿಕ ತಾಂತ್ರಿಕ ನೆಪವೊಡ್ಡಿ ವೇತನ ನೀಡದಿರುವುದು ಅಕ್ಷಮ್ಯ ನಡೆಯಾಗಿದೆ. ನೇಮಕಾತಿ ಸರಕಾರಿ ನಿಯಮಾವಳಿಯ ಉಲ್ಲಂಘನೆಯೊಂದಿಗೆ ನಡೆದಿದ್ದರೆ ಉಪನ್ಯಾಸಕರ ವೇತನ ಪಾವತಿಯ ಹೊಣೆ ಪ್ರಾಂಶುಪಾಲರದ್ದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.
ಬುಧವಾರ ಸರಕಾರಿ ಪ್ರಥಮ ಧರ್ಜೆ ಕಾಲೇಜಿಗೆ ಡಿಢೀರ್ ಭೇಟಿ ನೀಡಿ, ಅತಿಥಿ ಉಪನ್ಯಾಸಕರಿಗೆ ವೇತನ ನೀಡದಿರುವ ದೂರಿನ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಲೇಜು ಇಲಾಖೆಯ ನಿಯಮಾವಳಿ ಯನ್ನು ಉಲ್ಲಂ ಸಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗಿರುವುದರಿಂದ ಹಾಗೂ ಸದ್ರಿ ನೇಮಕಾತಿಯ ವಿಚಾರ ಕಾಲೇಜು ಆಡಳಿತ ಮಂಡಳಿಗೆ ತಿಳಿಸದಿರುವುದರಿಂದ ಸದ್ರಿ ಉಪನ್ಯಾಸಕರಿಗೆ ಪ್ರಾಂಶುಪಾಲರ ವೇತನದಿಂದಲೇ ನೀಡಬೇಕೆಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕಿ ತಿಳಿಸಿದರು.
ಕಳೆದ ಬಾರಿ ಕಳವಾದ ಲ್ಯಾಪ್‌ಟಾಪ್ ಹಾಗೂ ಪ್ರಾಜೆಕ್ಟರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಲೇಜು ಪ್ರಾಂಶುಪಾಲೆ ಮೇರಿ, ಕಳವಿಗೀಡಾಗಿದೆ ಎನ್ನಲಾದ ನಾಲ್ಕು ಲ್ಯಾಪ್‌ಟಾಪ್‌ಗ್ಳು ಹಿಂತಿರುಗಿ ಬಂದು ಎಲ್ಲ 29 ಲ್ಯಾಪ್‌ಟಾಪ್ ಗಳು ಕಾಲೇಜಿನಲ್ಲಿವೆ. ಕಳವಿಗೀಡಾದ ನಾಲ್ಕು ಪ್ರಾಜೆಕ್ಟರ್‌ಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲ ನಾಲ್ಕು ಪ್ರಾಜೆಕ್ಟರ್‌ಗಳ ಮೊತ್ತವನ್ನು ಪ್ರಾಂಶುಪಾಲೆಯಾದ ತಾನೇ ಭರಿಸುತ್ತೇನೆ. ಎಂದು ತಿಳಿಸಿದರು. ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಶ್ರಫ್ ಬಸ್ತಿಕಾರ್, ಕೃಷ್ಣ ರಾವ್ ಅರ್ತಿಲ, ಮಹೇಂದ್ರ ವರ್ಮ, ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
MUST WATCH
ಹೊಸ ಸೇರ್ಪಡೆ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.