ಸುರತ್ಕಲ್-ಗುಜರಾತ್: ರೋರೋ ರೈಲು ಸೇವೆ
Team Udayavani, Sep 22, 2018, 10:01 AM IST
ಮಹಾನಗರ: ಸುರತ್ಕಲ್‌ನಿಂದ ಗುಜರಾತ್‌ಗೆ ಕೊಂಕಣ ರೈಲ್ವೇ ವಿಭಾಗವು ರೋರೋ (ರೈಲ್ವೆ ವ್ಯಾಗನ್‌ಗಳ ಮೇಲೆ ಸರಕು ತುಂಬಿದ ಲಾರಿಗಳ ಸಾಗಾಟ: ರೋಲ್ ಆನ್- ರೋಲ್ ಆಫ್) ರೈಲು ಸೇವೆಯನ್ನು ಆರಂಭಿಸಿದೆ. ಈ ಮೂಲಕ ಮುಂಬಯಿವರೆಗೆ ಮಾತ್ರ ಇದ್ದ ರೋರೋ ಸೇವೆ ಗುಜರಾತ್‌ಗೂ ವಿಸ್ತರಣೆಯಾಗಲಿದ್ದು, ಟ್ರಕ್‌ಗಳ ರಸ್ತೆ ಸಂಚಾರಕ್ಕೆ ಕಡಿವಾಣ ಬೀಳುವ ಸಾಧ್ಯತೆಯಿದೆ.
ನವಮಂಗಳೂರು ಬಂದರಿಗೆ ಬರುವ ವಿವಿಧ ಸರಕುಗಳನ್ನು ಟ್ರಕ್‌ಗಳ ಮೂಲಕ ಬೇರೆ ಬೇರೆ ನಗರಗಳಿಗೆ ಸಾಗಿಸಲಾಗುತ್ತದೆ. ಇದರಲ್ಲಿ ಮುಂಬಯಿಗೆ ಸರಕು ಸಾಗಿಸುವ ಟ್ರಕ್‌ಗಳನ್ನು ರೋರೋ ಮೂಲಕ ಸಾಗಿಸಲಾಗುತ್ತದೆ. ಆದರೆ, ಗುಜರಾತ್‌ಗೆ ಟ್ರಕ್‌ಗಳು ರಸ್ತೆ ಮೂಲಕವೇ ಸಂಚರಿಸುತ್ತಿತ್ತು. ಇದನ್ನು ತಪ್ಪಿಸಲು ಸುರತ್ಕಲ್ ನಿಂದ ಗುಜರಾತ್‌ಗೆ ರೋರೋ ಸೇವೆ ಆರಂಭಿಸುವ ಬಗ್ಗೆ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಟ್ರಾಫಿಕ್ ದಟ್ಟಣೆ ಕಡಿಮೆ
ಈಗ ಸುರತ್ಕಲ್‌ನಿಂದ ಮಹಾರಾಷ್ಟ್ರದ ಕೊಲಾಡ್ ಮಧ್ಯೆ ರೋರೋ ಸೇವೆ ಲಭ್ಯವಿದ್ದು, ಇದನ್ನು ಅಲ್ಲಿಂದ 280 ಕಿ.ಮೀ. ದೂರದ ಗುಜರಾತ್‌ನ ಕಾರಂಬೆಲಿ ಬಳಿಯ ವ್ಯಾಪ್ತಿವರೆಗೆ ವಿಸ್ತರಿಸಲಾಗಿದೆ. ಕೊಂಕಣ ರೈಲ್ವೇ ಹಾಗೂ ಪಶ್ಚಿಮ ರೈಲು ಈ ಸೇವೆಯನ್ನು ಪರಿಚಯಿಸಲಿದೆ.ಇದರಿಂದಾಗಿ ಮುಂಬಯಿ/ಭೀವಂಡಿ ಸೇರಿದಂತೆ ಬೇರೆ ಬೇರೆ ಭಾಗದ ರಸ್ತೆ ಮಾರ್ಗದಲ್ಲಿ ಸಾಗಾಣಿಕೆ ವೇಳೆ ಟ್ರಾಫಿಕ್ ದಟ್ಟಣೆ ಕಡಿಮೆಗೊಳ್ಳಲಿದೆ. ಜತೆಗೆ ಟ್ರಕ್‌ಗಳ ಕಾರ್ಯನಿರ್ವಹಣೆ ಸಮರ್ಪ ಕವಾಗಲಿದ್ದು, ಇಂಧನ ಇತ್ಯಾದಿಯಲ್ಲಿ ಉಳಿತಾಯ ಮಾಡಬ ಹುದು ಎಂಬುದು ಲೆಕ್ಕಾಚಾರ.
ಮಂಗಳವಾರದಿಂದ ನೂತನ ರೋರೋ ಸೇವೆ ಆರಂಭವಾಗಿದ್ದು, ಪ್ರತೀ ದಿನ ಸಂಚಾರ ನಡೆಸಲಿದೆ. ಒಮ್ಮೆ ರೋರೋ ಸಂಚರಿಸುವಾಗ 50 ಟ್ರಕ್‌ಗಳ ಸಾಗಾಟಕ್ಕೆ ಇಲ್ಲಿ ಅವಕಾಶವಿದೆ. ರಬ್ಬರ್, ಫ್ಲೈವುಡ್, ಅಡಿಕೆ, ತೆಂಗಿನಕಾಯಿ ಸೇರಿದಂತೆ ಹಲವು ವಸ್ತುಗಳನ್ನು ಇದರಲ್ಲಿ ಸಾಗಿಸಲಾಗುತ್ತದೆ. ಎಂಆರ್‌ಪಿಎಲ್, ಬೈಕಂಪಾಡಿ, ಯೆಯ್ನಾಡಿ ಕೈಗಾರಿಕಾಪ್ರದೇಶ, ಎನ್ ಎಂಪಿಟಿ ಸೇರಿದಂತೆ ಬೃಹತ್ ಕೈಗಾರಿಕೆಗಳ ಟ್ರಕ್‌ಗಳು ಸುರತ್ಕಲ್ ಭಾಗದಲ್ಲಿಯೇ ಇರುವುದರಿಂದ ಹಾಗೂ ಕೊಂಕಣ ರೈಲ್ವೇ ಸೇವೆಯು ಅಲ್ಲಿಂದಲೇ ಆರಂಭವಾಗುವ ಹಿನ್ನೆಲೆಯಲ್ಲಿ ರೋರೋ ರೈಲು ಅಲ್ಲಿಂದಲೇ ಸಂಚಾರ ಆರಂಭಿಸುತ್ತದೆ.
ದರ ನಿಗದಿ
ಸುರತ್ಕಲ್‌ನಿಂದ ವ್ಯಾಪ್ತಿಗೆ ನೂತನ ರೋರೋ ಸೇವೆಯಂತೆ 10 ಟನ್‌ಗೆ ಜಿಎಸ್‌ಟಿ ಸೇರಿದಂತೆ 18,380 ರೂ., 15 ಟನ್‌ಗೆ 21,530 ರೂ., 20 ಟನ್‌ಗೆ 25,470 ರೂ., 25 ಟನ್‌ಗೆ 29,400 ರೂ., 30 ಟನ್‌ಗೆ 34,650 ರೂ., 40 ಟನ್‌ಗೆ 45,150 ರೂ. ದರ ವಿಧಿಸಲಾಗುತ್ತದೆ.
ರೋರೋ ಅನುಕೂಲಗಳು
ಈಗಾಗಲೇ ಜಾರಿಯಲ್ಲಿರುವ ಮಂಗಳೂರು-ಮುಂಬಯಿ ರೋರೋ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾಗಾಟಕ್ಕೆ ಟ್ರಕ್‌ಗಳು ಸರದಿಯಲ್ಲಿ ಕಾಯುತ್ತಿವೆ. ರೋರೋ ಮೂಲಕ ಗೂಡ್ಸ್ ತುಂಬಿದ ಟ್ರಕ್‌ಗಳ ಸಾಗಾಟ ಲಾರಿ ಮಾಲಕರಿಗೆ, ಚಾಲಕರಿಗೂ ಅನುಕೂಲವಾಗಿದೆ. ಟರ್ಮಿನಲ್‌ನಲ್ಲಿ ಟ್ರಕ್ ಗಳ ಲೋಡ್ ಮತ್ತು ಆನ್‌ಲೋಡ್‌ಗೆ ಕೇವಲ 2 ತಾಸುಗಳ ಸಮಯವಷ್ಟೆ ಬೇಕಾಗುತ್ತದೆ. ಮಾರ್ಗ ಮಧ್ಯೆ, ಅಪಘಾತಗಳ ಸಂಭವ ಕಡಿಮೆ. ಅಡಚಣೆ ಸಾಧ್ಯತೆಯೂ ಇಲ್ಲ. ಇಂಧನ, ಟ್ರಕ್‌ಗಳ ನಿರ್ವಹಣೆ ವೆಚ್ಚದಲ್ಲಿ ಗಣನೀಯ ಉಳಿತಾಯವಾಗುತ್ತದೆ. ಟ್ರಕ್‌ಗಳ ನಿರ್ವಹಣೆ ಸಮಸ್ಯೆಯೂ ತೊಡಕಾಗದು, ವಾಯು ಮಾಲಿನ್ಯ ಹಾಗೂ ಸಂಚಾರ ದಟ್ಟನೆಯನ್ನೂ ಕಡಿಮೆ ಎಂಬುದು ಕೊಂಕಣ ರೈಲ್ವೇ ವಿಭಾಗದ ಅಭಿಪ್ರಾಯ.
1999ರಿಂದ ರೋರೋ ಸೇವೆ ಆರಂಭ
ರೈಲ್ವೇ ವ್ಯಾಗನ್‌ಗಳ ಮೇಲೆ ಸರಕು ತುಂಬಿದ ಲಾರಿಗಳನ್ನು ಸಾಗಿಸುವ ರೋರೋ ಸೇವೆ ಸುರತ್ಕಲ್ -ಕೊಲಾಡ್ ಮಧ್ಯೆ 1999 ಜ. 26ರಂದು ಆರಂಭಗೊಂಡಿತು. ಲಕ್ಷಾಂತರ ಗೂಡ್ಸ್ ಟ್ರಕ್‌ಗಳು ರೋರೋ ಮೂಲಕವೇ ಸಂಚರಿಸುತ್ತಿವೆ. ಈಗ ಕೊಲಾಡ್-ವರ್ಣಾ (417 ಕಿ.ಮೀ., 8-10 ತಾಸುಗಳ ಸಂಚಾರ), ಕೊಲಾಡ್ -ಸುರತ್ಕಲ್ (721 ಕಿ.ಮೀ., 21-24 ತಾಸುಗಳ ಸಂಚಾರ) ರೋರೋ ಸೇವೆ ಚಾಲ್ತಿಯಲ್ಲಿದೆ. ಅಂಕೋಲಾ-ಸುರತ್ಕಲ್ ಮಧ್ಯೆಯೂ (205 ಕಿ.ಮೀ., 3-5 ತಾಸು ಸಂಚಾರ)ರೋರೋ ಸೇವೆ ಸದ್ಯ
ಲಭ್ಯವಿದೆ.
ಮಂಗಳವಾರದಿಂದ ಆರಂಭ
ರೋರೋ ಸೇವೆಯನ್ನು ಸುರತ್ಕಲ್‌ನಿಂದ ಗುಜರಾತ್‌ನ ಕಾರಂಬೆಲಿಗೆ ವಿಸ್ತರಿಸಲಾಗಿದೆ. ಕರಾವಳಿ ಭಾಗದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನಿಗಮವು ಈ ನಿರ್ಧಾರ ಮಾಡಿದೆ. ಪ್ರತೀದಿನ ಒಂದೊಂದು ರೋರೋ ರೈಲು ಸೇವೆ ಮಂಗಳವಾರದಿಂದಲೇ ಆರಂಭವಾಗಿದೆ. ರಸ್ತೆ ಸಂಚಾರದ ಒತ್ತಡ ಕಡಿಮೆ ಮಾಡುವ ಉದ್ದೇಶ ಹಾಗೂ ಟ್ರಕ್‌ಗಳ ನಿರ್ವಹಣೆಗೂ ಅನುಕೂಲ.
– ಸುಧಾ ಕೃಷ್ಣಮೂರ್ತಿ,
ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.