ಮಾನವೀಯತೆ ಮೆರೆದವರ ಗುರುತಿಸಿದ ಗುಲ್ಬರ್ಗದ ವಕೀಲ


Team Udayavani, Jan 31, 2018, 12:25 PM IST

31-26.jpg

ಮಂಗಳೂರು: ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಮಾಯಕ ಜೀವಗಳಿಬ್ಬರ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಮಹನೀಯರಿಬ್ಬರಿಗೆ ತಲಾ 50,000 ರೂ. ಪುರಸ್ಕಾರ ನೀಡಿ ಅಭಿನಂದಿಸುವ ಮೂಲಕ ಗುಲ್ಬರ್ಗದ ನ್ಯಾಯವಾದಿ ಪಿ. ವಿಲಾಸ್‌ ಕುಮಾರ್‌ ಮಾದರಿಯಾಗಿದ್ದಾರೆ.

ಜ. 3ರಂದು ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾಗಿ ಬಿದ್ದಿದ್ದ ದೀಪಕ್‌ ರಾವ್‌ ಅವರ ರಕ್ಷಣೆಗೆ ಧಾವಿಸಿದ್ದ ಅಬ್ದುಲ್‌ ಮಜೀದ್‌ ಹಾಗೂ ಆದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿ ಯಲ್ಲಿದ್ದ ಬಶೀರ್‌ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ ಶೇಖರ್‌ ಕುಲಾಲ್‌ ಅವರಿಗೆ ಪಿ. ವಿಲಾಸ್‌ ಕುಮಾರ್‌ ಅವರು ಕಳುಹಿಸಿಕೊಟ್ಟಿರುವ ತಲಾ 50,000 ರೂ. ಮೊತ್ತದ ಚೆಕ್‌ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಕುಮಾರ್‌ ಅವರು ನೀಡಿ ಅಭಿನಂದಿಸಿದರು.

ನೈಜ ಮಾನವತಾವಾದಿಗಳು
ಚೆಕ್‌ಗಳೊಂದಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರಿಗೆ ಪತ್ರವೊಂದನ್ನು ಬರೆದಿರುವ ಪಿ. ವಿಲಾಸ್‌ ಕುಮಾರ್‌ ಅವರು “ಅಬ್ದುಲ್‌ ಮಜೀದ್‌ ಹಾಗೂ ಶೇಖರ್‌ ಅವರು ಮಾಡಿರುವ ಉದಾತ್ತ ಕಾರ್ಯವನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಮಜೀದ್‌ ಹಾಗೂ ಶೇಖರ್‌ ಮತ್ತು ಅವರ ಸ್ನೇಹಿತ ತಮ್ಮ ಜೀವಕ್ಕೆ ಎದುರಾಗಬಹುದಾದ ಅಪಾಯಗಳನ್ನು ಲೆಕ್ಕಿಸದೆ, ಜಾತಿ, ಧರ್ಮ ನೋಡದೆ ರಕ್ಷಣೆಗೆ ಧಾವಿಸುವ ಮೂಲಕ ತಾವು ನಿಜವಾದ ಮಾನವತಾವಾದಿಗಳು ಮತ್ತು ಜಾತ್ಯತೀತ ವಾದಿಗಳೆಂದು ತಮ್ಮನ್ನು ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ದ್ವೇಷ ವನ್ನು ಹರಡಲು ಪ್ರಯತ್ನಿಸುವ ವ್ಯಕ್ತಿಗಳಿಗೆ ಇವರು ಮಾದರಿಯಾಗಿದ್ದಾರೆ. ಇವರಿಗೆ ನಾನು ಸೆಲ್ಯೂಟ್‌ ಮಾಡುತ್ತೇನೆ ಮತ್ತು ದ.ಕ. ಜಿಲ್ಲೆಗೆ ಇವರು ನೀಡಿರುವ ಸಂದೇಶ ಬಹು ಕಾಲ ಉಳಿಯಬೇಕು’ ಎಂದು ಹೇಳಿದ್ದಾರೆ.

ಸರಕಾರವೂ ಅಭಿನಂದಿಸಲಿ
“ಮಜೀದ್‌ ಮತ್ತು ಶೇಖರ್‌ ಅವರ ಪರಿಚಯ ನನಗಿಲ್ಲ. ನಾನು ಶ್ರೀಮಂತನಲ್ಲ. ಓರ್ವ ಸಾಮಾನ್ಯ ನ್ಯಾಯವಾದಿ. ನಾನು ಯಾವುದೇ ಪ್ರಚಾರಕ್ಕೋಸ್ಕರ ಈ ಚೆಕ್‌ಗಳನ್ನು ಅವರಿಗೆ ಕಳುಹಿಸಿಕೊಡುತ್ತಿಲ್ಲ. ಸಮಾಜ ದಲ್ಲಿ ದ್ವೇಷ, ಅಶಾಂತಿಯನ್ನು ಹರಡುವ ಉದ್ದೇಶದಿಂದ ಇಂದು ಕೆಲವು ಮಂದಿ ಕೊಲೆ ಮಾಡಲು, ಮೂಗು, ನಾಲಗೆ, ಕಿವಿ ಕತ್ತರಿಸಲು ಲಕ್ಷ, ಕೋಟಿ ರೂಪಾಯಿಗಳ ಬಹುಮಾನ ಘೋಷಿಸುವುದನ್ನು ಕಾಣು ತ್ತಿದ್ದೇವೆ. ಇಂತಹ ಶಕ್ತಿಗಳಿಗೆ ಉತ್ತರ ನೀಡುವ ಹಾಗೂ ಜಾತ್ಯತೀತವಾದ ಮತ್ತು ಶಾಂತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಾಗೂ ಮಜೀದ್‌ ಹಾಗೂ ಶೇಖರ್‌ ಅವರು ಮಾಡಿರುವ ಉದಾತ್ತ ಕಾರ್ಯವನ್ನು ಗೌರವಿಸಿ ಅವರಿಗೆ ತಲಾ 50,000 ರೂ. ಮೊತ್ತದ ಚೆಕ್‌ಗಳನ್ನು ಕಳುಹಿಸುತ್ತಿದ್ದೇನೆ. ಮಾನವೀ ಯತೆ, ಜಾತ್ಯತೀತವಾದದ ಮೇಲೆ ನಂಬಿಕೆ ಇರುವವರಿಂದ ಮಾತ್ರ ಇವರಿಗೆ ಅಭಿನಂದನೆಗಳು ದೊರೆ ತರೆ ಸಾಲದು. ಸರಕಾರದಿಂದಲೂ ಅಭಿ ನಂದನೆ ಗಳು ಸಲ್ಲ ಬೇಕು. 800 ಕಿ.ಮೀ. ದೂರದಲ್ಲಿರು ವುದ ರಿಂದ ಮತ್ತು ಕೆಲವು ಪೂರ್ವನಿರ್ಧರಿತ ಕೆಲಸಗಳ ಕಾರಣದಿಂದಾಗಿ ನನಗೆ ವೈಯಕ್ತಿಕ ವಾಗಿ ಅಲ್ಲಿಗೆ ಬರಲಾಗುತ್ತಿಲ್ಲ. ಆದುದ ರಿಂದ ನನ್ನ ಈ ಚೆಕ್‌ಗಳನ್ನು ಇಬ್ಬ ರಿಗೆ ಹಸ್ತಾಂ ತರಿಸ ಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದ ವರು ಜಿಲ್ಲಾಧಿಕಾರಿಯವರನ್ನು ಕೋರಿದ್ದರು. 

ಜಿಲ್ಲಾಧಿಕಾರಿಯವರು ತುರ್ತು ಕಾರ್ಯ ಕ್ರಮ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಇರದ ಕಾರಣ ಅಪರ ಜಿಲ್ಲಾಧಿಕಾರಿಯವರು ಚೆಕ್‌ಗಳನ್ನು ಹಸ್ತಾಂತರಿಸಿದರು. ಚೆಕ್‌ ಸ್ವೀಕರಿಸಿದ ಅಬ್ದುಲ್‌ ಮಜೀದ್‌ ಮತ್ತು ಶೇಖರ ಕುಲಾಲ್‌ ಅವರು ಮಾತನಾಡಿ, ಎಲ್ಲಕ್ಕಿಂತಲೂ ಮಾನವೀಯ ತೆಯೇ ಮುಖ್ಯ ಎಂದರು. ಚೆಕ್‌ ವಿತರಣೆ ಸಮಾರಂಭದಲ್ಲಿ ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

ಜೀವ ಉಳಿಸಲು ನೆರವಾಗಿ 
ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾಗ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಧಾವಿಸುವ ಮೂಲಕ ಮಾನವೀàಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಎಲ್ಲರೂ ತೋರ್ಪಡಿಸಬೇಕು ಮತ್ತು ಜೀವ ಉಳಿಸಲು ಸಹಾಯ ಮಾಡಬೇಕು. ಸಹಾಯ ಮಾಡಿದವರ ರಕ್ಷಣೆಗೆ ಕಾನೂನು ಕೂಡ ನೆರವಿಗೆ ಬರುತ್ತದೆ ಎಂದು ಡಿಸಿಪಿ ಹನುಮಂತರಾಯ ಸಾರ್ವಜನಿಕರಲ್ಲಿ ಕೋರಿದರು.

ಟಾಪ್ ನ್ಯೂಸ್

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.