ಮಂಗಳೂರಿನಲ್ಲೂ ಗುರ್ಮಿತ್ ಪ್ರವಚನ!
Team Udayavani, Aug 28, 2017, 7:25 AM IST
ಮಂಗಳೂರು: ಅತ್ಯಾಚಾರ ಆರೋಪ ಸಾಬೀತಾಗಿರುವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಘೋಷಿತ ದೇವ ಮಾನವ, ವರ್ಣರಂಜಿತ ವ್ಯಕ್ತಿ ಗುರ್ಮಿತ್ ರಾಂ ರಹೀಂ ಸಿಂಗ್ ಸುಮಾರು 10 ವರ್ಷದ ಹಿಂದೆ ಮಂಗಳೂರಿಗೆ ಆಗಮಿಸಿ, ಸಾವಿರಾರು ಭಕ್ತರಿಗೆ ವಿಶೇಷ ಪ್ರವಚನ ನೀಡಿದ್ದರು. ಎರಡು ದಿನ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ವಿಶೇಷ ಪ್ರವಚನದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಪೂರ್ವದಲ್ಲಿ ಕೆಲವು ವರ್ಷ ಗಳ ಹಿಂದೆ ಗುರ್ಮಿತ್ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಪ್ರವಚನ ನೀಡಿದ್ದರು. ಆ ಬಳಿಕ ಗುರ್ಮಿತ್ ಅವರ ಸಂಬಂಧಿಕರೊಬ್ಬರು ಮಂಗಳೂರಿನಲ್ಲಿರುವ ಕಾರಣದಿಂದ ನಗರಕ್ಕೆ ಭೇಟಿ ನೀಡಿದ್ದರು.
ಡೇರಾ ಸಚ್ಚಾ ಸೌದಾ ಎಂಬ ಆಧ್ಯಾತ್ಮಿಕ ಪಂಥವನ್ನು ಮನ್ನಡೆಸಿಕೊಂಡು, ಹೊರ ದೇಶ ಹಾಗೂ ದೇಶದ 46 ಕಡೆಗಳಲ್ಲಿ ಶಾಖೆಗಳನ್ನು ಮಾಡಿ ಗುರ್ಮಿತ್ ರಾಂ ರಹೀಂ ಸಿಂಗ್ ಮಾನವೀಯ ಸಂದೇಶ ಗಳನ್ನು ಸಾರುತ್ತ ಬಂದಿದ್ದರು. ಇದ ರನ್ವಯ ಗುರ್ಮಿತ್ ಅವರ ಅನುಯಾಯಿಗಳು ಮಂಗ ಳೂರಿನಲ್ಲಿ ಪ್ರವಚನ ಆಯೋ ಜಿಸಿದ್ದರು.
ಭಾರೀ ಜನಾಕರ್ಷಣೆ
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮೊದಲ ದಿನ ಆಯೋ ಜಿಸಿದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಪಹರೆಯ ಮಧ್ಯೆ ಗುರ್ಮಿತ್ ಸಿಂಗ್ ಆಗಮಿಸಿದ್ದರು. ಸ್ಥಳೀಯ ಪೊಲೀಸರ ಜತೆಗೆ ಗುರ್ಮಿತ್ ಅವರ ಖಾಸಗಿ ಅಂಗರಕ್ಷರೂ ಜತೆಯಲ್ಲಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಕ್ಕಿಂತಲೂ ಮಿಕ್ಕಿ ಜನ ಭಾಗವಹಿಸಿದ್ದರು. ಗುರ್ಮಿತ್ ಸಿಂಗ್ ವೇದಿಕೆಗೆ ಬರು ತ್ತಿದ್ದಂತೆ ಕರತಾಡನ, ಶಿಳ್ಳೆಗಳ ಮೂಲಕ ಜನರು ಸ್ವಾಗತಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ್, ಧರ್ಮಗಳ ಸಾರವನ್ನು ಪ್ರಸ್ತಾವಿಸುವ ಮೂಲಕ ಗುರ್ಮಿತ್ ಸಿಂಗ್ ಸೇರಿದ್ದ ಜನರನ್ನು ಆಕರ್ಷಿತರನ್ನಾಗಿಸಿದ್ದರು. ಮಾನ ವೀಯ ಸಂದೇಶಗಳನ್ನು ಈ ಸಭೆ ಯಲ್ಲಿ ನೀಡಿದ್ದರು. ಗುರ್ಮಿತ್ ಹಿಂದಿ ಸಂದೇಶ ವನ್ನು ಮಂಗಳೂರಿನಲ್ಲಿ ಉಪನ್ಯಾಸಕರಾಗಿದ್ದ ಬೈಕಾಡಿ ಜನಾರ್ದನ ಆಚಾರ್ ಅವರು ಭಾಷಾಂತರಿಸಿದ್ದರು.
ಮರುದಿನ ಸಂಜೆ ಸುರತ್ಕಲ್ ಮೈದಾನದಲ್ಲಿ ಗುರ್ಮಿತ್ ಸಿಂಗ್ ಪ್ರವಚನ ಆಯೋಜನೆಗೊಂಡಿತ್ತು. ಕರಾವಳಿ ಹಾಗೂ ಹೊರರಾಜ್ಯದ ಗುರ್ಮಿತ್ ಅನುಯಾಯಿಗಳು ಈ ಕಾರ್ಯ ಕ್ರಮವನ್ನು ಸಂಘಟಿಸಿದ್ದರು. ಇಲ್ಲೂ ಸಾವಿರಾರು ಭಕ್ತರು ಕರಾವಳಿ ಹಾಗೂ ಬೇರೆ ಬೇರೆ ಊರಿನಿಂದ ಆಗಮಿಸಿದ್ದರು. ಎಲ್ಲ ಧರ್ಮಗಳ ಮಾನ ವೀಯ ಅಂಶಗಳನ್ನು ಆಯ್ಕೆ ಮಾಡಿ, ಭಾಷಣದಲ್ಲಿ ಪ್ರಸ್ತಾವ ಮಾಡಲಾಗಿತ್ತು.
ಮಂಗಳೂರು ಹಾಗೂ ಸುರತ್ಕಲ್ ಕಾರ್ಯಕ್ರಮ ಆದ ಬಳಿಕ ಮರುದಿನ ಮಡಿಕೇರಿ ಹಾಗೂ ಮೈಸೂರಿನಲ್ಲಿ ಪ್ರವಚನ ಆಯೋಜಿಸಲಾಗಿತ್ತು. ಇದ ರಲ್ಲೂ ಬೈಕಾಡಿ ಅವರು ಭಾಷಾಂತರ ಮಾಡಲು ಸಹಕರಿಸಿದ್ದರು.
ಮಾಲ್ ಸುತ್ತಾಡಿದ್ದ ಗುರ್ಮಿತ್ ಸಿಂಗ್!
ಆಧ್ಯಾತ್ಮಿಕ ಸಾಧನೆ ಮಾಡಿದ ಗುರ್ಮಿತ್ ಸಿಂಗ್ ತನ್ನ ಐಷಾರಾಮಿ ಜೀವನದ ಮೂಲಕವೇ ಗುರುತಿಸಿಕೊಂಡವರು. ಸಿನೆಮಾ, ಮಾಲ್, ಕಾರು, ಬೈಕ್‌ಗಳ ಶೋಕಿ ಸೇರಿ ದಂತೆ ಬಗೆ ಬಗೆಯ ಅವತಾರಗಳ ಮೂಲಕ ವಿಜೃಂಭಿಸಿ ಸುದ್ದಿಯಲ್ಲಿದ್ದರು. ಕರಾ ವಳಿ ಭಾಗ ದಲ್ಲಿ ಪ್ರವಚನ ನೀಡುವ ಆಶಯ ದಿಂದ ಮಂಗಳೂರಿಗೆ ಆಗಮಿಸಿದ ಗುರ್ಮಿತ್ ಇಲ್ಲಿನ ಮಾಲ್ ಗಳಿಗೆ ಭೇಟಿ ನೀಡು ವು ದನ್ನು ಮರೆಯ ಲಿಲ್ಲ. ತನ್ನ ಬೆಂಬಲಿಗರ ಸುಮಾರು 10ಕ್ಕೂ ಅಧಿಕ ಐಷಾರಾಮಿ ಕಾರುಗಳ ಜತೆಗೆ ಮಂಗಳೂರು ಸುತ್ತಾಡಿ, ಮಾಲ್‌ಗೆ ಭೇಟಿ ನೀಡಿದ್ದರು. ಗುರ್ಮಿತ್ ಆಗಮನದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು ಹಾಗೂ ಅಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.