ಅಜ್ಞಾನದ ದೀಪ ಹೋಗಲಾಡಿಸುವವನೇ ಗುರು: ಡಾ | ಲೀಲಾ

Team Udayavani, Jul 11, 2017, 2:45 AM IST

Leela-10-7.jpg

ಉರ್ವಸ್ಟೋರ್‌: ಮಕ್ಕಳಲ್ಲಿ ಅಜ್ಞಾನದ ದೀಪವನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ನೀಡುವವನೇ ಗುರು. ಅತ್ಮಸ್ಥೈರ್ಯದ ಕಿಡಿಯನ್ನು ಮಗುವಿನ ಮನದಲ್ಲಿ ಹಚ್ಚಿದಾಗ ಸುಗಂಧ ಪುಷ್ಪದಂತೆ ಆ ಮಗು ಮನೆಗೂ, ಕುಟುಂಬಕ್ಕೂ, ಸಮಾಜಕ್ಕೂ ಸುಗಂಧದಂತೆ ಪರಿಮಳವನ್ನು ನೀಡಬಲ್ಲರು ಎಂದು ಶಾರದಾ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ್ತಿ ಡಾ| ಲೀಲಾ ಉಪಾಧ್ಯಾಯ ಹೇಳಿದರು. ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉರ್ವಸ್ಟೋರ್‌ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ ಗುರುಪೂರ್ಣಿಮಾ-ಗುರುನಮನ – ಮಾತಾಪಿತರ ಚರಣ ಪೂಜನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. 

ಮಕ್ಕಳು ಸಮಾಜದ ಸಂಪತ್ತಾಗಬೇಕು. ಮಾಹಿತಿ ಜ್ಞಾನದ ಜತೆಗೆ ಆತ್ಮ ವಿಕಸನ, ಆತ್ಮಸ್ಥೈರ್ಯವನ್ನು ತುಂಬಬೇಕು. ಮನೆಯಲ್ಲಿ ಹೆತ್ತವರು, ಶಾಲೆಯಲ್ಲಿ ಗುರುಗಳು ಆದರ್ಶವಾಗಿರಬೇಕು ಎಂದವರು ಅಭಿಪ್ರಾಯಪಟ್ಟರು. ಗುರುವು ವ್ಯಕ್ತಿ ಮತ್ತು ಮಹಾನ್‌ ಶಕ್ತಿಗೆ ಒಂದು ಸಂಪರ್ಕ. ಮಾತಾ ಪಿತರ ಚರಣ ಪೂಜನ ಕಾರ್ಯಕ್ರಮವು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಕಲಾ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಸಂಸ್ಕಾರ, ಸಮಾಜಮುಖೀ ಸ್ಪರ್ಶವನ್ನು ನೀಡುತ್ತಿರುವ ಭರತಾಂಜಲಿ ಸಂಸ್ಥೆಯು ಆದರ್ಶ ಎಂದರು.

ಗುರುನಮನ ಸ್ವೀಕರಿಸಿದ ವಿದುಷಿ ಕಮಲಾ ಭಟ್‌, ಕಲಾ ಜೀವನದಲ್ಲಿ ಆದರ್ಶವನ್ನು ಕಾಪಾಡಿಕೊಂಡು ನೃತ್ಯ ವಿದ್ಯೆಯ ಜತೆಗೆ ಸಂಸ್ಕಾರದ ಸಿಂಚನವನ್ನು ಮಕ್ಕಳಿಗೆ ನೀಡುತ್ತಿರುವ ತನ್ನ ಶಿಷ್ಯೆ ಪ್ರತಿಮಾ ಹಾಗೂ ಶ್ರೀಧರ್‌ ಅಭಿನಂದನಾರ್ಹರು ಎಂದರು. ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಸುರೇಂದ್ರ ರಾವ್‌ ಮುಖ್ಯ ಅತಿಥಿಯಾಗಿದ್ದರು. ಅಪೂರ್ವಾ, ರೂಪಾ ವಸಂತ್‌ ಕೇದಿಕೆ ಅನಿಸಿಕೆ ವ್ಯಕ್ತಪಡಿಸಿದರು. ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ವಿದುಷಿ ಪ್ರತಿಮಾ ಶ್ರೀಧರ್‌ ವಂದಿಸಿದರು. ಉಪನ್ಯಾಸಕಿ ಮಾಧುರಿ ಶ್ರೀರಾಮ್‌ ನಿರೂಪಿಸಿದರು.

ಟಾಪ್ ನ್ಯೂಸ್

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

6

Gurupura: 300 ಕೆ.ಜಿ. ಗೋಮಾಂಸ ಸಾಗಾಟ; ಇಬ್ಬರ ಸೆರೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.