ಗುರು ಪೂರ್ಣಿಮೆ: ರಾಮಯ್ಯ ಕಿಲ್ಲೆ ಅವರಿಗೆ ಗುರುವಂದನೆ
Team Udayavani, Jul 10, 2017, 1:15 AM IST
ತಲಪಾಡಿ: ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ತಲಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ತಲಪಾಡಿ ಪಂಜಾಳಗುತ್ತುವಿನ ರಾಮಯ್ಯ ಕಿಲ್ಲೆ ಅವರಿಗೆ ಗುರುಪೂರ್ಣಿಮೆ ಅಂಗವಾಗಿ ಅವರ ನಿವಾಸದಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಗುರುವಂದನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ರಾಮಯ್ಯ ಕಿಲ್ಲೆ ಅವರು ತಲಪಾಡಿ ಗ್ರಾಮ ಪಂಚಾಯತ್ ಅನ್ನು ಜನಪರವಾಗಿಸಿದವರು. ರಾಜಕೀಯವಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಘದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕಿಲ್ಲೆಯವರು ಸಾಕಷ್ಟು ಬೆವರಿಳಿಸಿದ್ದರು. ಬಿಜೆಪಿ ಶಾಸಕ ಜಯರಾಮ ಶೆಟ್ಟಿ ಶಾಸಕರಾಗಲು ಕೂಡ ಇವರ ಶ್ರಮ ಬಹಳವಿತ್ತು. ಇಂತಹ ವ್ಯಕ್ತಿಗೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ಭಗತ್ ಸಿಂಗ್ ಹೆಸರಿನ ಸಂಘಟನೆಯ ಕಾರ್ಯಕರ್ತರು ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಮುಖಂಡರಾದ ಲಲಿತಾ ಸುಂದರ್, ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಾನದ ಹರೀಶ್ ಅಂಬ್ಲಿಮೊಗರು, ದಯಾನಂದ ತೊಕ್ಕೊಟ್ಟು ರಾಕೇಶ್ ಬೈಪಾಸ್, ರವಿ ಶೆಟ್ಟಿ ಮಾಡೂರು, ವಿಶ್ವನಾಥ ಶೆಟ್ಟಿ, ನವೀನ್ ಎ.ಕೆ., ಕೃಷ್ಣ ಪೊನ್ನೆತ್ತೋಡು, ಚೇತನ್ ಬೈಪಾಸ್, ಶಿವಾಜಿ, ಮೋಹನ್ ಸಾಲ್ಯಾನ್, ಲಕ್ಷಿ$¾à ನಾರಾಯಣ್, ರಾಜೇಶ್ ಯು.ಬಿ., ಉದಯ ತೊಕ್ಕೊಟ್ಟು, ವಸಂತ್ ಅಂಬಿಕಾರೋಡ್, ಗಂಗಾಧರ್ ಅಂಬ್ಲಿಮೊಗರು ಉಪಸ್ಥಿತರಿದ್ದರು. ಪ್ರವೀಣ್ ಬಸ್ತಿ ಗುರುವಂದನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ಪ್ರಸ್ತಾವನೆಗೈದರು. ಪ್ರವೀಣ್ ಎಸ್. ಕುಂಪಲ ನಿರ್ವಹಿಸಿದರು. ಕಿರಣ್ ಕೊಲ್ಯ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.