![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 7, 2019, 10:39 AM IST
ಗುರುಪುರ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಗುರುಪುರ ಸೇತುವೆಯ ಗುಂಡಿ ಮುಚ್ಚುವ ಕಾರ್ಯ ಗುರುವಾರ ನಡೆಯುತ್ತಿದ್ದು, ಈ ಕಾರಣದಿಂದ ಸೇತುವೆ ಮೇಲೆ ಒಂದು ದಿನದ ಮಟ್ಟಿಗೆ ವಾಹನ ಸಂಚಾರ ನಿರ್ಭಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಈ ಬಗ್ಗೆ ಪ್ರಕಟನೆ ಹೊರಡಿಸಿ ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದರು.
ಇಂದು ಮುಂಜಾನೆ ಆರರಿಂದ ಸಂಜೆ ಆರರವರೆಗೆ ದುರಸ್ಥಿ ನಡೆಸಲು ಅವಕಾಶ ನೀಡಿಲಾಗಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ದುರಸ್ಥಿ ಕಾರ್ಯ ಆರಂಭವಾಗಿದೆ.
ಬದಲಿ ಮಾರ್ಗ
ಮೂಡುಬಿದಿರೆಯಿಂದ ಮಂಗಳೂರಿನತ್ತ ಸಾಗುವ ವಾಹನಗಳು ಕೈಕಂಬ-ಬಜಪೆ- ಮರವೂರು ರಸ್ತೆ ಮೂಲಕ ಮತ್ತು ಕೈಕಂಬ- ಪೊಳಲಿ-ಬಿ.ಸಿ. ರೋಡ್ ಮೂಲಕ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಾಗುವ ವಾಹನಗಳು ಮಂಗಳೂರು-ಮರವೂರುಸೇತುವೆ-ಬಜಪೆ-ಕೈಕಂಬವಾಗಿ ಮೂಡುಬಿದಿರೆ ತಲುಪಬೇಕಾಗಿದೆ.
You seem to have an Ad Blocker on.
To continue reading, please turn it off or whitelist Udayavani.