ಸ್ನೇಹ, ಪ್ರೀತಿ, ನಿಷ್ಠೆಯ ಪ್ರತೀಕ ಹಚಿಕೊ
Team Udayavani, May 28, 2018, 3:41 PM IST
ಮನುಷ್ಯನಾದವನಿಗೆ ಸಾಕು ಪ್ರಾಣಿಗಳೆಂದರೆ ಬಲು ಪ್ರೀತಿ. ಅಂತೆಯೇ ಆ ಮುಗ್ಧ ಪ್ರಾಣಿಗಳಿಗೂ ತನ್ನ ಯಜಮಾನನೆಂದರೆ ಅಷ್ಠೆà ನಿಷ್ಠೆ. ಇಂತಹ ಕಥೆ ಕೇವಲ ಕೇಳಲು ಮಾತ್ರವಲ್ಲ ನೋಡಲೂ ಖುಷಿಯಾಗಿರುತ್ತದೆ. ಇಂತಹದೊಂದು ನೈಜ ಘಟನೆಯನ್ನು ಆಧಾರಿತ ಸಿನೆಮಾ, ಜಪಾನ್ ದೇಶದ ಒಂದು ನಾಯಿಯ ಕಥೆಯೇ ‘ಹಚಿಕೊ’. 2010ರಲ್ಲಿ ಬಿಡುಗಡೆಗೊಂಡ ಈ ಸಿನೆಮಾವನ್ನು ಲಾಸ್ಸೆ ಹಾಲ್ಸ್‌ಸ್ಟರೋಮ್ ನಿರ್ದೇಶಿಸಿದ್ದಾರೆ.
ಇಡೀ ಸಿನೆಮಾ ಕೇವಲ ಒಂದು ಕುಟುಂಬ ಹಾಗೂ ಒಂದು ನಾಯಿಯ ಕಥೆಯನ್ನು ವಿಸ್ತರಿಸುತ್ತಾ ಹೋಗುತ್ತದೆ. ಆದರೆ ಈ ಕಥೆ ಅಂತಿಮ ಘಟ್ಟಕ್ಕೆ ತಲುಪುವಾಗ ನೋಡುಗರ ಹೃದಯ ಸ್ಪರ್ಶಿಸು ತ್ತದೆ. ಜನರಿಗೆ ನಾಯಿಯ ಪ್ರೀತಿ ಮತ್ತು ನಿಷ್ಠೆಯ ಅರ್ಥವನ್ನು ಬೋಧಿಸುವುದಕ್ಕೆ ಈ ಕಥೆ ಉತ್ತಮ ಉದಾಹರಣೆಯಾಗಿದೆ.
ನಮ್ಮ ಜೀವನದಲ್ಲಿ ಪ್ರೀತಿ ಮತ್ತು ನಿಷ್ಠೆ ಎಷ್ಟು ಮುಖ್ಯವೆಂದು ಸಾಕುಪ್ರಾಣಿಗಳು ಹಲವು ಬಾರಿ ತೋರಿಸಿಕೊಡುತ್ತವೆ. ಬುದ್ಧಿ ಜೀವಿ ಎಂದುಕೊಳ್ಳುವ ಮನುಷ್ಯ ಕೆಲವೊಮ್ಮೆ ಪ್ರಾಣಿಗಳ ಪ್ರೀತಿಯನ್ನು ಲಘುವಾಗಿ ಪರಿಗಣಿಸುತ್ತಾನೆ. ಇಂತಹ ಕಥೆಯ ಜತೆಗೆ ಸತ್ಯ ವಿಚಾರವನ್ನು ತೆರೆದಿಡುವ ಅಂದರೆ ಅನ್ನ ಹಾಕಿದ ಮನೆಗೆ ಯಾವತ್ತೂ ಋಣಿಯಾಗಿರುವುದು ಈ ಪ್ರಾಣಿಗಳೇ ಎನ್ನುವುದು ಈ ಚಿತ್ರದ ಒಟ್ಟು ಸಾರಾಂಶ.
ಒಂದು ದಿನ ತನ್ನನ್ನು ಬಿಟ್ಟು ಕೆಲಸಕ್ಕೆ ತೆರಳುವ ಯಜಮಾನ ಮತ್ತೆ ವಾಪಾಸ್ ಬರುತ್ತಾನೆ ಎಂದುಕೊಳ್ಳುವ
ಹಚಿ ಎನ್ನುವ ನಾಯಿ 9 ವರ್ಷಗಳ ಕಾಲ ರೈಲು ನಿಲ್ದಾಣದಲ್ಲಿ ತನ್ನ ಪ್ರೀತಿಯ ಯಜಮಾನನಿಗಾಗಿ ಕಾದು ಕೊನೆಗೊಂದು ದಿನ ಪ್ರಾಣ ಬಿಡುತ್ತದೆ. ಇದರಲ್ಲಿ ನಾಯಿಯ ಸ್ವಾಮಿನಿಷ್ಠೆ ಕಥೆಯನ್ನು ಮೆಚ್ಚುವಂತೆ ಮಾಡುತ್ತದೆ.
ಈ ಚಿತ್ರವು ಭಕ್ತಿ, ಪ್ರೀತಿ, ನಿಸ್ವಾರ್ಥತೆ ಮತ್ತು ವಿಧೇಯತೆಗಳ ತಣ್ತೀಗಳನ್ನು ಬಲಪಡಿಸುತ್ತದೆ ಮತ್ತು ಪ್ರೀತಿಯ ಕುಟುಂಬದ ಸಕಾರಾತ್ಮಕ ಚಿತ್ರಣ, ಕುಟುಂಬ ಸದಸ್ಯರು ಸಾಕು ಪ್ರಾಣಿಯ ಜತೆ ಒಡನಾಟವಾಡುವ ಮೂಲಕ ಜೀವನದಲ್ಲಿ ತಮ್ಮ ಸಾಕುಪ್ರಾಣಿಗಳ ಮೌಲ್ಯಗಳನ್ನು ಗೌರವಿಸಬೇಕೆಂಬುದನ್ನು ಅರಿಯಬಹುದು. ಮನುಷ್ಯ ತನ್ನ ಉಪಯೋಗಕ್ಕಾಗಿ ಸಾಕುವ ಪ್ರಾಣಿಗಳು ಬಯಸುವುದು ಮಾತ್ರ ನಿಸ್ವಾರ್ಥ ಪ್ರೀತಿಯನ್ನು ಎಂಬುದನ್ನು ತೋರಿಸಿಕೊಟ್ಟಿದೆ.
ಭರತ್‌ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.