ವಿವಿಧೆಡೆ ಆಲಿಕಲ್ಲು ಮಳೆ; ಹಾನಿ
Team Udayavani, Apr 9, 2018, 8:21 AM IST
ವೇಣೂರು: ರವಿವಾರ ಸಂಜೆ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ. ವೇಣೂರು ಪರಿಸರದಲ್ಲಿ ಅಡಿಕೆ ಗಾತ್ರದ ಆಲಿಕಲ್ಲುಗಳು ಭಾರೀ ಪ್ರಮಾಣದಲ್ಲಿ ಬಿದ್ದು ಜನರು ಗಾಬರಿಗೊಂಡರು.
ರವಿವಾರ ಸಂಜೆ 3.30ರ ಸುಮಾರಿಗೆ ವೇಣೂರು, ಹೊಸಂಗಡಿ, ಕುಕ್ಕೇಡಿ ಭಾಗದಲ್ಲಿ ಗುಡುಗು ಮಿಂಚಿನ ಮಳೆಯ ಜತೆಗೆ ಆಲಿಕಲ್ಲು ಬೀಳಲು ಪ್ರಾರಂಭವಾಯಿತು. ದೊಡ್ಡ ಗಾತ್ರದ ಆಲಿಕಲ್ಲು ಗಳು ಭಾರೀ ಪ್ರಮಾಣದಲ್ಲಿ ಬಿದ್ದದ್ದರಿಂದ ಜನರು ದಿಗಿಲುಗೊಂಡರು. ದ್ವಿಚಕ್ರ ಸವಾರರು ಮಾತ್ರವಲ್ಲದೆ ಘನ ವಾಹನಗಳಿಗೂ ಸಂಚರಿಸಲು ಸಾಧ್ಯವಾಗದೆ ರಸ್ತೆ ಬದಿ ನಿಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಮನೆ, ಕಟ್ಟಡಗಳ ಛಾವಣಿ ಮೇಲೆ ಆಲಿ ಕಲ್ಲುಗಳು ಬಿದ್ದು ಭಾರೀ ಸದ್ದು ಉಂಟಾಗಿ ಜನರು ಗಾಬರಿಗೀಡಾದರು. ವೇಣೂರು ಪರಿಸರದ ಮರಗಳಲ್ಲಿದ್ದ ಮಾವಿನ ಮಿಡಿ ಉದುರಿವೆ. ಗೇರು, ಬಾಳೆ ಕೃಷಿಗೂ ಹಾನಿಯಾಗಿದೆ.
ಪುತ್ತೂರು ತಾಲೂಕಿನ ಕೆದಿಲ, ಕಬಕ, ವಡ್ಯ, ಉಪ್ಪಿ ನಂಗಡಿ, ಬೆಳ್ತಂಗಡಿ ತಾಲೂಕಿನ ನಿಡ್ಲೆ, ಕಾವಳ ಮುಡೂರು, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರ, ಬಾಳುಗೋಡು, ಐನೆಕಿದು ಗಳಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ.
ಮರ ಬಿದ್ದು ಮನೆಗೆ ಹಾನಿ, ಗಾಯ
ಮಳೆ ಜತೆಗೆ ಬೀಸಿದ ಭಾರೀ ಗಾಳಿಯಿಂದ ಗುಂಡೂರಿ ರಾಮಪ್ಪ ಆಚಾರಿ ಅವರ ಮನೆ ಮೇಲೆ ಮರ ಬಿದ್ದು, ಅವರ ಸಹೋದರ ಸುಂದರ ಆಚಾರಿ ಗಾಯಗೊಂಡಿದ್ದಾರೆ. ಅವರನ್ನು ಸಿದ್ದಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಸುಮಾರು ಸಿಮೆಂಟ್ ಶೀಟ್ಗಳು ಪುಡಿಯಾಗಿದ್ದು, ಅಂಗಳದಲ್ಲಿ ನಿಲ್ಲಿಸಲಾಗಿದ್ದ 2 ಬೈಕ್ಗಳಿಗೂ ಹಾನಿಯಾಗಿದೆ.
ಇಷ್ಟು ದೊಡ್ಡ ಆಲಿಕಲ್ಲು ಕಂಡಿಲ್ಲ
ವೇಣೂರಿನ ಹಿರಿಯ ವೈದ್ಯ 87ರ ಹರೆಯದ ಡಾ| ಬಿ.ಪಿ. ಇಂದ್ರ ಹೇಳುವಂತೆ ಅವರು ಯುವಕರಾಗಿದ್ದ ವೇಳೆ ಆಲಿಕಲ್ಲು ಮಳೆ ಬಿದ್ದಿದೆ. ಆದರೆ ಅದು ಹೆಕ್ಕುವಷ್ಟರಲ್ಲಿ ನೀರಾಗುತ್ತಿತ್ತು. ಇಷ್ಟೊಂದು ದೊಡ್ಡ ಗಾತ್ರದ ಆಲಿಕಲ್ಲುಗಳು ಭಾರೀ ಪ್ರಮಾಣದಲ್ಲಿ ಬಿದ್ದಿರುವುದನ್ನು ಕಂಡಿಲ್ಲ. ಮಾವು, ಅಡಿಕೆ, ಗೇರು, ಬಾಳೆ ಸಹಿತ ಕೃಷಿಗೆ ಆಲಿಕಲ್ಲು ಮಳೆ ಒಳ್ಳೆಯದಲ್ಲ. ಆದರೆ ಬಿರುಬೇಸಗೆಯಲ್ಲಿ ಸುರಿದ ಮಳೆ ಜೀವರಾಶಿಗೆ ಈ ಮಳೆ ತಂಪು ಒದಗಿಸಿದೆ ಎಂದಿದ್ದಾರೆ.
ವೇಣೂರಿನ ಕೃಷ್ಣ ಭಟ್ ಅವರು ಮಾಹಿತಿ ನೀಡಿ, ಸುಮಾರು 100 ಚದರ ಅಡಿ ವಿಸ್ತೀರ್ಣದಲ್ಲಿ ಎರಡ ರಿಂದ ಮೂರು ಬಕೆಟುಗಳಷ್ಟು ಆಲಿಕಲ್ಲು ಬಿದ್ದಿವೆ ಎಂದಿದ್ದಾರೆ. ಬಾಳೆ ಎಲೆಗಳು ಚಿಂದಿಯಾಗಿವೆ, ಇತರ ಮರಗಳೂ ಹಾನಿಗೊಂಡಿವೆ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.