ಹಜ್ ಯಾತ್ರೆ: ಜು. 24ರಂದು ಮೊದಲ ತಂಡ ನಿರ್ಗಮನ
Team Udayavani, Jul 20, 2017, 7:30 AM IST
ಮಂಗಳೂರು: ಕರ್ನಾಟಕದಿಂದ ಹಜ್ ಯಾತ್ರೆಗೆ ತೆರಳುವವರ ಮೊದಲ ತಂಡವು ಮಂಗಳೂರು ವಿಮಾನ ನಿಲ್ದಾಣದಿಂದ ಜು. 24ರಂದು ನಿರ್ಗಮಿಸಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
24ರಿಂದ 26ರ ತನಕ ಪ್ರವಾಸ ಇರುತ್ತದೆ. 24ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಯಾತ್ರೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಸಂಜೆ 4.15ಕ್ಕೆ ಮೊದಲ ವಿಮಾನ ನಿರ್ಗಮಿಸಲಿದೆ. ಅದಕ್ಕೂ ಮುನ್ನ ಪೂರ್ವಾಹ್ನ 11 ಗಂಟೆಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಜರಗಲಿದೆ ಎಂದರು.
ಜು. 25 ಮತ್ತು 26ರಂದು ಮಧ್ಯಾಹ್ನ 12.55 ಹಾಗೂ ಸಂಜೆ 4.15ಕ್ಕೆ ವಿಮಾನ ಹೊರಡಲಿದೆ. ಯಾತ್ರಿಕರು ತಮ್ಮ ಪ್ರಯಾಣದ ಎರಡು ದಿನ ಮುಂಚಿತವಾಗಿ ಮಂಗಳೂರು ಹಳೆ ವಿಮಾನ ನಿಲ್ದಾಣಕ್ಕೆ ತಮ್ಮ ಲಗೇಜ್,
ಕನ್ಫರ್ಮೇಶನ್ ಕಾರ್ಡ್ ಹಾಗೂ ಹಣ ಪಾವತಿ ರಶೀದಿಗಳ ಸಮೇತ ಬಂದು ನೋಂದಾಯಿಸಿಕೊಳ್ಳಬೇಕು ಎಂದವರು ತಿಳಿಸಿದರು.
ಹಸಿರು ಶ್ರೇಣಿಗೆ ಅರ್ಜಿ ಸಲ್ಲಿಸಿದವರ ಪೈಕಿ 19,734 ಅರ್ಜಿದಾರರನ್ನು ಸೌಲಭ್ಯಗಳ ಕೊರತೆಯಿಂದಾಗಿ ಅಝೀಝಿಯಾಕ್ಕೆ ವರ್ಗಾಯಿಸಲಾಗಿದ್ದು, ಅವರು ನೀಡಿರುವ ಹೆಚ್ಚುವರಿ ದರವನ್ನು ಹಿಂದಿರುಗಿಸಲಾಗುವುದು ಎಂದು ಕೇಂದ್ರ ಹಜ್ ಸಮಿತಿ ತಿಳಿಸಿದೆ. ಇದರಲ್ಲಿ ಕೆಲವು ಕನ್ನಡಿಗರೂ ಒಳಗೊಂಡಿದ್ದು, ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೇನಪೊಯ ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಎಸ್.ಎಂ. ರಶೀದ್, ಸದಸ್ಯ ಸಿ. ಮುಹಮ್ಮದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.