ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
Team Udayavani, Jul 11, 2017, 2:50 AM IST
ಹಳೆಯಂಗಡಿ: ಗ್ರಾಮ ಸಭೆಗೆ ಅಧಿಕಾರಿಗಳು ಗೈರುಹಾಜರಾದರೂ ಅವರ ಮೇಲೆ ಯಾಕೆ ಯಾವುದೇ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ? ಈ ಬಗ್ಗೆ ಜಿ.ಪಂ. ಸಭೆಯಲ್ಲೂ ಪ್ರಸ್ತಾವಿಸಬೇಕು ಎಂದು ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆಯು ಕದಿಕೆ ಸಾಲ್ಯಾನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಜಲಜಾ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು, ಅಲ್ಲಿ ಗ್ರಾಮಸ್ಥರು ಈ ಆಕ್ಷೇಪವನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಸದಸ್ಯರು, ಈ ಬಗ್ಗೆ ಕಳೆದ ಕೆಲವು ಸಭೆಗಳಲ್ಲಿ ಪ್ರಸ್ತಾವವಾಗಿದೆ. ಕೆಲವು ಇಲಾಖೆಗಳಲ್ಲಿ ಸಿಬಂದಿ ಕೊರತೆಯ ನೆಪ ಹಾಗೂ ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ಗ್ರಾಮ ಸಭೆ ನಡೆಯುತ್ತದೆ ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂದರು.
ಪಡಿತರ ಚೀಟಿ ಗೊಂದಲ
ಎಪಿಎಲ್‌ನಿಂದ ಬಿಪಿಎಲ್ ಪಡಿತರ ಚೀಟಿಗೆ ವರ್ಗಾಯಿಸುವಲ್ಲಿ ತೊಡಕಾಗಿದೆ. ಸರಕಾರದ ನಿರ್ದೇಶನದಂತೆ ಪಡಿತರ ಚೀಟಿ ವಿತರಿಸಲಾಗುತ್ತಿದೆ. ಹೊಸ ಆದೇಶ ಬರುವವರೆಗೆ ತಿದ್ದುಪಡಿ ವ್ಯವಸ್ಥೆ ನಡೆದಿಲ್ಲ. ಹೊಸ ಪಡಿತರ ಚೀಟಿ ಪಡೆಯಲು ಸೂಕ್ತ ಮಾನದಂಡ ನೀಡಲಾಗಿದೆ ಎಂದು ಆಹಾರ ಮತ್ತು ಪಡಿತರ ವಿತರಣ ಇಲಾಖೆಯ ಸಹಾಯಕ ನಿರ್ದೇಶಕ ವಾಸು ಶೆಟ್ಟಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಉದ್ಧಟತನದ ಆರೋಪ
ಹಳೆಯಂಗಡಿಗೆ ಹೊಸ ಮೆಸ್ಕಾಂ ಶಾಖಾ ಕಚೇರಿ ಆರಂಭವಾಗಿ ವರ್ಷಗಳಾಗಿದ್ದರೂ ಸುಧಾರಣೆ ಇಲ್ಲವಾಗಿದೆ. ಸಿಬಂದಿಯ ಉದ್ಧಟತನಕ್ಕೆ ಕಡಿವಾಣ ಹಾಕಬೇಕು. ಸಂಜೆಯ ಹೊತ್ತಿಗೆ ದೂರು ನೀಡಿದರೆ ಅವರು ಸ್ಪಂದಿಸುವುದಿಲ್ಲ. ವಿದ್ಯುತ್ ಕಡಿತ ಸಂದರ್ಭ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಕರೆಂಟ್ ಹೋದರೆ ದೂರನ್ನು ಕೇಳುವವರೇ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಮೆಸ್ಕಾಂ ಶಾಖಾಧಿಕಾರಿ ಶ್ರೀನಿವಾಸ ಮೂರ್ತಿ, ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.