ಹಳೆಯಂಗಡಿ: ಮೊಹಮ್ಮದ್ ಸವಾನ್‌ಗೆ ಧನಸಹಾಯ
Team Udayavani, Apr 8, 2018, 11:46 AM IST
ಹಳೆಯಂಗಡಿ: ಕಾಲಿನ ಅಶಕ್ತಿಯಿಂದ ಬಳಲುತ್ತಿರುವ ಹಳೆಯಂಗಡಿ ಗ್ರಾಮದ ಬೊಳ್ಳೂರಿನ ಇಂದಿರಾನಗರದ ಆಶಿಯಾರ ಪುತ್ರ ಮೊಹಮ್ಮದ್ ಸವಾನ್ ಗೆ ದುಬಾಯಿಯಲ್ಲಿ ಉದ್ಯೋಗದಲ್ಲಿರುವ ಸಹೋದರರಾದ ಮೊಹಮ್ಮದ್ ಅಶ್ರಫ್ ಹಾಗು ಕಲಂದರ್ ಹಾರಿಸ್ ಇವರು ಸಂಗ್ರಹಿಸಿದ ಮೊತ್ತವನ್ನು ಅವರ ತಂದೆ ಬದ್ರುದ್ದೀನ್ ಬೊಳ್ಳೂರು ರವರು ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ರಿಲಾಯನ್ಸ್ ಅಸೋಸಿಯನ್‌ನ ಮಾಜಿ ಅಧ್ಯಕ್ಷ ಹಾರಿಸ್ ನವರಂಗ್, ಖಾದರ್ ಕೋಡಿಕಲ್, ಹನೀಫ್, ತಾಯಿಫ್, ಇಕ್ಬಾಲ್ ಎಮ್.ಎ. ಮತ್ತು ಯೂಸುಫ್ ಬೊಳ್ಳೂರು ಉಪಸ್ಥಿತರಿದ್ದರು. ಎ. 4ರಂದು ಉದಯವಾಣಿಯ ಸುದಿನದಲ್ಲಿ ಮೊಹಮ್ಮದ್ ಸವಾನ್‌ನ ಬಗ್ಗೆ ವರದಿ ಪ್ರಕಟಗೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.