ಹಳೆಯಂಗಡಿ: ರಸ್ತೆಯಲ್ಲಿಯೇ ನಿಂತ ಮಳೆ ನೀರು
Team Udayavani, Jun 15, 2018, 11:28 AM IST
ಹಳೆಯಂಗಡಿ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ಒಳರಸ್ತೆಯಾದ ಸಂತೆಕಟ್ಟೆ -ಕದಿಕೆಯಲ್ಲಿ ಮಳೆ ನೀರಿನಿಂದ ರಸ್ತೆಯೇ ಜಲಾವೃತಗೊಂಡಿದೆ. ಪಕ್ಕದ ಚರಂಡಿಯಲ್ಲಿ ಹೂಳು ತುಂಬಿದ್ದು ಮೇಲಿನಿಂದ ಕೆಸರು ನೀರು ಸಹಿತ ಮಳೆ ನೀರು ಹರಿಯುತ್ತಿದೆ. ಹದಿನೈದು ದಿನದ ಹಿಂದೆಯಷ್ಟೇ ಗ್ರಾ.ಪಂ.ಸಿಬಂದಿಗಳು ರಸ್ತೆಯಲ್ಲಿದ್ದ ಮಣ್ಣು ಹಾಗೂ ಚರಂಡಿಯಲ್ಲಿನ ಹೂಳೆತ್ತಿ ಕ್ರಮ ಕೈಗೊಂಡಿದ್ದರೂ ಸಹ ಅದು ಪ್ರಯೋಜನವಿಲ್ಲದಂತಾಗಿದೆ.
ಇಲ್ಲಿನ ಹಳೆಯಂಗಡಿ ಮಹಿಳಾ ಮತ್ತು ಯುವತಿ ಮಂಡಲದ ಸಭಾಂಗಣದ ಬಳಿಯೇ ಈ ರೀತಿಯಾಗಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನ ಸವಾರರು ಕದಿಕೆ, ಸಂತೆಕಟ್ಟೆ ಪ್ರದೇಶಕ್ಕೆ ಸಂಚರಿಸುವವರು ಹಳೆಯಂಗಡಿಯಿಂದ ಪಡುಪಣಂಬೂರು
ಶನೈಶ್ಚರ ಮಂದಿರದ ರಸ್ತೆಯಾಗಿ ಸುತ್ತಿ ಬಳಸಿ ಸಂಚರಿಸುತ್ತಿದ್ದಾರೆ.
ಪಡುಪಣಂಬೂರು: ಪಂ. ಸದಸ್ಯೆಯಿಂದಲೇ ಮಳೆ ನೀರಿಗೆ ಮುಕ್ತಿ..!
ಇಲ್ಲಿನ ತೋಕೂರು ಕಲ್ಲಾಪು ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದ್ದ ಮಣ್ಣನ್ನು ಗ್ರಾಮ ಹಳೆಯಂಗಡಿಯ ಸಂತೆಕಟ್ಟೆ-ಕದಿಕೆ ರಸ್ತೆಯಲ್ಲಿ ನಿಂತಿರುವ ಮಳೆ ನೀರು. ರಸ್ತೆಯಲ್ಲಿದ್ದ ಮಣ್ಣನ್ನು ತೆಗೆಯುತ್ತಿರುವ ಗ್ರಾ.ಪಂ. ಸದಸ್ಯೆ ಕುಸುಮಾ. ಪಂಚಾಯತ್‌ನ ಸದಸ್ಯೆಯೊಬ್ಬರು ಸ್ವತಹ ತೆರವು ಮಾಡಿದರು.
ಪಡುಪಣಂಬೂರು ಗ್ರಾ.ಪಂ.ಗೆ ಸೇರುವ ಈ ರಸ್ತೆಯಲ್ಲಿ ಮಳೆ ನೀರು ನೇರವಾಗಿ ಚರಂಡಿಗೆ ಹರಿಯಲು ಸಾಧ್ಯವಾಗದೇ ಇರುವುದಕ್ಕೆ ಡಾಮರು ರಸ್ತೆ ಮೇಲಿನ ಮಣ್ಣು ಕಾರಣವಾಗಿತ್ತು. ಅದು ಖಾಸಗಿ ಜಮೀನಿನಿಂದ ನೇರವಾಗಿ ರಸ್ತೆಗೆ ಮಳೆ ನೀರಿನೊಂದಿಗೆ ಹರಿಯುತ್ತಿದ್ದರಿಂದ ಅದನ್ನು ತೆಗೆಯಲು ಸಂಬಂಧಿಸಿದವರಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮಾ ಚಂದ್ರಶೇಖರ್ ಅವರು ಸೂಚಿಸಿದರೂ ಕಿವಿಗೊಡದಿದ್ದರಿಂದ ನೇರವಾಗಿ ತಾವೇ ಹಾರೆ ಮತ್ತು ಗುದ್ದಲಿಯನ್ನು ತಂದು ಸುಮಾರು ಎರಡು ತಾಸು ಶ್ರಮ ವಹಿಸಿ ರಸ್ತೆ ಮೇಲಿದ್ದ ಮಣ್ಣನ್ನೆಲ್ಲಾ ತೆಗೆದು ಮಳೆ ನೀರು ಚರಂಡಿಗೆ ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.
ನನ್ನ ಜವಾಬ್ದಾರಿ
ರಸ್ತೆಯ ಮೇಲೆ ಮಣ್ಣು ಬಿದ್ದು ಮಳೆ ನೀರಿನೊಂದಿಗೆ ಡಾಮರು ಸಹ ಕಿತ್ತು ಹೋಗುವ ಪರಿಸ್ಥಿತಿ ಇತ್ತು. ಕೆಲವರಲ್ಲಿ ವಿನಂತಿಸಿದೆ ಯಾರೂ ಸ್ಪಂದಿಸಲಿಲ್ಲ. ಎಲ್ಲವನ್ನೂ ಪಂಚಾಯತ್‌ನವರೇ ಮಾಡಬೇಕು ಎಂದು ಹೇಳುತ್ತಾರೆ. ಅದಕ್ಕೆ ಜನಪ್ರತಿನಿಧಿಯಾದ ನನ್ನ ಜವಾಬ್ದಾರಿ ಎಂದು ನಾನೇ ಮಣ್ಣನ್ನು ತೆರವು ಮಾಡಿದೆ.
– ಕುಸುಮಾ, ಗ್ರಾಮ ಪಂಚಾಯತ್ ಸದಸ್ಯೆ,
ಪಡುಪಣಂಬೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.