ಹಾಫ್‌ ಮ್ಯಾರಥಾನ್‌: 3,500 ಮಂದಿ ಭಾಗಿ


Team Udayavani, Jan 20, 2019, 5:39 AM IST

20-january-5.jpg

ಸುಳ್ಯ: ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ರಾಜ್ಯ, ಜಿಲ್ಲಾ ಘಟಕ ಹಾಗೂ ಕೆವಿಜಿ ಸಮೂಹ ಸಂಸ್ಥೆಗಳ ಆಶ್ರ ಯದಲ್ಲಿ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸಮಾರೋಪ ಸಮಾರಂಭ ಎನ್‌ಎಂಸಿ ಮೈದಾನ ದಲ್ಲಿ ನಡೆಯಿತು.

ಆ್ಯತ್ಲೆಟಿಕ್ಸ್‌ ಫೆಡರೇಶನ್‌ ಆಫ್‌ ಇಂಡಿಯಾದ ಕಾರ್ಯಕಾರಿ ಸದಸ್ಯ ಚಂದ್ರಶೇಖರ ರೈ ಮಾತನಾಡಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಬಹುತೇಕ ಸಾಧಕರು ಗ್ರಾಮಾಂತರ ಪ್ರದೇಶವರು. ಉತ್ತಮ ಮಾರ್ಗದರ್ಶನ, ಪರಿಶ್ರಮ, ಪ್ರತಿಭೆಗೆ ತಕ್ಕ ಅವಕಾಶಗಳನ್ನು ಸೃಷ್ಟಿಸಿದರೆ ಸುಳ್ಯದಿಂದಲೂ ಅನೇಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಲು ಸಾಧ್ಯವಿದೆ ಎಂದರು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಕುಶಾಲಪ್ಪ ಗೌಡ ನಾಳ ಅವರನ್ನು ಸಮ್ಮಾನಿಸಲಾಯಿತು. ರಾಜ್ಯಮಟ್ಟದ ಹಾಫ್‌ ಮ್ಯಾರಥನ್‌ ಯಶಸ್ಸಿಗೆ ಶ್ರಮಿಸಿದ ಅಕ್ಷಯ್‌ ಕೆ.ಸಿ., ಮಹಮ್ಮದ್‌ ಶಾಫಿ, ಅತಿಥಿಗಳಾದ ಕುರಿಯನ್‌ ಮ್ಯಾಥ್ಯೂ, ಚಂದ್ರಶೇಖರ ರೈ ಅವರನ್ನು ಸಮ್ಮಾನಿಸಲಾಯಿತು.

ಎಓಎಲ್‌ಇ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸಭಾಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಫಾಸ್ಟ್‌ಟ್ರಾಕ್‌ ಮ್ಯಾನೆಜಿಂಗ್‌ ಡೈರೆಕ್ಟರ್‌ ಮಹಮ್ಮದ್‌ ಶಾಫಿ, ಯುವಜನ ಸೇವಾ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್‌ ಬಾಬ್ಲುಬೆಟ್ಟು, ಅಂತಾರಾಷ್ಟ್ರೀಯ ಸಫರ್ರ್‌ ತನ್ವಿ ಜಗದೀಶ್‌, ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮಾಯಿಲಪ್ಪ ಗೌಡ ಉಪಸ್ಥಿತರಿದ್ದರು.

ಅನಘ ಉಬರಡ್ಕ ಪ್ರಾರ್ಥಿಸಿದರು. ಲಕ್ಷ್ಮೀಶ ರೈ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ.ಎಂ. ವಂದಿಸಿದರು. ತುಕಾರಾಮ ಏನೆಕಲ್ಲು ಬಹುಮಾನಿತರ ಪಟ್ಟಿ ವಾಚಿಸಿದರು. ಕಿಶೋರ್‌ ಕುಮಾರ್‌ ಉಳುವಾರು, ಸುಶ್ಮಿತಾ ಕಡಪಳ, ಬೇಬಿವಿದ್ಯಾ ನಿರೂಪಿಸಿದರು.

ಉದ್ಘಾಟನೆ:
ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌, ದಕ್ಷಿಣ ಕನ್ನಡ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಮತ್ತು ಕೆ.ವಿ.ಜಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ವತಿಯಿಂದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸುಳ್ಯದ ಕೆ.ವಿ.ಜಿ ಕ್ರೀಡಾಂಗಣ ದಲ್ಲಿ ನಡೆಯಿತು.

ಬೆಳಗ್ಗೆ ಕರ್ನಾಟಕ ರಾಜ್ಯ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಎನ್‌. ಮುತ್ತಪ್ಪ ರೈ ಉದ್ಘಾಟಿಸಿದರು. ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ನಿರ್ದೇಶಕ ಅಕ್ಷಯ್‌ ಕೆ.ಸಿ., ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯ ಆ್ಯತ್ಲೆಟಿಕ್ಸ್‌ ತರಬೇತುದಾರ ಕುರಿಯನ್‌ ಮ್ಯಾಥ್ಯೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅರಂತೋಡು ಪಾಪ್ಯುಲರ್‌ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮಾಯಿಲಪ್ಪ ಗೌಡ ಕೊಂಬೆಟ್ಟು, ಅಂತಾರಾಷ್ಟ್ರೀಯ ಕ್ರೀಡಾಪಟು ತನ್ವಿ ಜಗದೀಶ್‌, ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ತಾರನಾಥ್‌ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜಗದೀಶ್‌ ಉಪಸ್ಥಿತರಿದ್ದರು.

ಮೈದಾನ, ವ್ಯಾಯಾಮ ಕೇಂದ್ರ ಸ್ಥಾಪಿಸಿ:
ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯ ಆ್ಯತ್ಲೆಟಿಕ್ಸ್‌ ತರಬೇತುದಾರ ಕುರಿಯನ್‌ ಮ್ಯಾಥ್ಯೂ ಮಾತನಾಡಿ, ಆರೋಗ್ಯ ವೃದ್ಧಿಗೆ ಬೇಕಿರುವುದು ಆಸ್ಪತ್ರೆಗಳು ಅಲ್ಲ. ಬದಲಿಗೆ ಮೈದಾನ, ದೈಹಿಕ ಕ್ಷಮತೆ ಕಾಪಾಡಲು ಪೂರಕವಾಗಿ ವ್ಯಾಯಾಮ ಕೇಂದ್ರಗಳು. ಅವುಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕು. ಕೆವಿಜಿ ಸಂಸ್ಥೆ ವತಿಯಿಂದ ಎನ್‌ಎಂಸಿ ಕ್ರೀಡಾ ಮೈದಾನದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸ್ಥಾಪಿಸಬೇಕು. ಸರಕಾರದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲು ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು. ಈ ಮೂಲಕ ಸುಳ್ಯದ ಪ್ರತಿಭೆಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಲು ಅವಕಾಶ ದೊರೆಯಬೇಕು ಎಂದರು.

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.