ನೂಲು ಪೂರೈಕೆಯಿಲ್ಲದೆ ಸೊರಗಿದ ಕೈಮಗ್ಗ ಉದ್ಯಮ

Team Udayavani, Oct 7, 2018, 10:37 AM IST

7-october-4.gif

ಪುಂಜಾಲಕಟ್ಟೆ: ಕಳೆದ ಹಲವು ವರ್ಷಗಳ ಹಿಂದೆ ಸಂಗಬೆಟ್ಟು ಗ್ರಾಮದಲ್ಲಿರುವ ಹಲವರ ಮೂಲ ಕಸುಬು ಕೈಮಗ್ಗ ಆಗಿ ಗ್ರಾಮ ಹೆಸರುವಾಸಿಯಾಗಿತ್ತು. ಆಧುನಿಕತೆ ಪ್ರವೇಶ ಹಾಗೂ ನೂಲು ಪೂರೈಕೆಯಿಲ್ಲದೆ ಕಸುಬು ಮರೆಯಾಗಿ ಈಗ ಪರಿಕರಗಳು ಮಾತ್ರ ಉಳಿದುಕೊಂಡಿವೆ.

ಸಂಗಬೆಟ್ಟು ಗ್ರಾಮದ ನಿವಾಸಿ ರಾಮ ಶೆಟ್ಟಿಗಾರ್‌ (72) ಕೈಮಗ್ಗ ಕೆಲಸವನ್ನು 54 ವರ್ಷಗಳಿಂದ ನಡೆಸುತ್ತಿದ್ದು, ಕಳೆದ 3 ವರ್ಷಗಳಿಂದ ಮಾರುಕಟ್ಟೆಯಲ್ಲಿ ನೂಲು ಪೂರೈಕೆಯಿಲ್ಲದೆ ಮೂಲ ಕಸುಬನ್ನು ನಿಲ್ಲಿಸಿದ್ದಾರೆ. ಅಂದು ಇವರ ಕೈಮಗ್ಗದ ನವೀನ ವಿನ್ಯಾಸದ ಸೀರೆಗಳಿಗೆ ಹಲವು ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಬೇಡಿಕೆಯಿತ್ತು. 5 ಮೀ. ಉದ್ದದ ಸೀರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ, 6 ಮೀ. ಉದ್ದದ ಸೀರೆಗೆ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಆಧುನಿಕತೆ ಮುಂದುವರಿದಂತೆ ಕೈಮಗ್ಗದಿಂದ ತಯಾರಿಸುವ ವಸ್ತ್ರಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾಯಿತು.

ಕೈಮಗ್ಗದ ಬಟ್ಟೆ ಹೆಚ್ಚು ಬಾಳಿಕೆ, ಬಣ್ಣ ಮಾಸುವುದಿಲ್ಲ. ಇದರಿಂದಾಗಿ ಕೆಲವರು ಇನ್ನೂ ಕೈಮಗ್ಗದ ಬಟ್ಟೆಯನ್ನು ಬಳಸುತ್ತಿದ್ದಾರೆ ಎಂದು ರಾಮ ಶೆಟ್ಟಿಗಾರ ಅವರು ಸ್ಮರಿಸುತ್ತಾರೆ. ಆಧುನಿಕತೆಯಿಂದಾಗಿ ಕೈಮಗ್ಗದಿಂದ ದೂರ ಉಳಿದ ಕೆಲಸಗಾರರು ಇತರ ಕೆಲಸದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೈಮಗ್ಗದ ಬಟ್ಟೆಗಳಿಗೆ ಬಹು ಬೇಡಿಕೆಯಿದೆ ಎನ್ನುತ್ತಾರೆ ಕೈಮಗ್ಗ ಕೆಲಸಗಾರರು.

ಬಳಕೆಗೆ ಉತ್ತಮ
ಕಳೆದ 54 ವರ್ಷಗಳಿಂದ ಕೈಮಗ್ಗ ಕಸುಬು ನಡೆಸುತ್ತಿದ್ದೆ, ಬಟ್ಟೆ ತಯಾರಿಕೆಗೆ ಬೇಕಾಗಿರುವ ನೂಲು ಮಾರುಕಟ್ಟೆಯಲ್ಲಿ ಸಿಗದಿದ್ದ ಕಾರಣದಿಂದಾಗಿ ಕಳೆದ 3 ವರ್ಷಗಳಿಂದ ಕಸುಬು ನಿಲ್ಲಿಸಬೇಕಾಯಿತು. ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳಿಗೆ ನೈಸರ್ಗಿಕವಾದ ಬಣ್ಣ ಉಪಯೋಗಿಸ ಲಾಗುತ್ತಿದ್ದು, ಇದು ಬಳಕೆಗೆ ಉತ್ತಮವಾಗಿದೆ. ಪ್ರತಿನಿತ್ಯ 1ರಿಂದ 2 ಸೀರೆ ತಯಾರಿಸಬಹುದು. ಆಧುನಿಕ ತಂತ್ರಜ್ಞಾನದಿಂದ ತಯಾರಿಕೆ ಅತಿ ವೇಗವಾಗುತ್ತಿದೆ.ಹೀಗಾಗಿ ಕೈಮಗ್ಗದ ಕೆಲಸ ಮರೆಯಾಗುತ್ತಿದೆ.
– ರಾಮ ಶೆಟ್ಟಿಗಾರ
ಕೈಮಗ್ಗ ಕೆಲಸಗಾರರು

ಟಾಪ್ ನ್ಯೂಸ್

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.