ಮೋಡಿ ಮಾಡಿದ ಮಾಯಾ ಮಾರುತೇಯ 


Team Udayavani, Mar 15, 2019, 12:30 AM IST

x-43.jpg

ವೀರ ರಸವೇ ಪ್ರಧಾನವಾಗಿರುವ “ಮಾಯಾ ಮಾರುತೇಯ’ ತೆಂಕುತಿಟ್ಟಿಗೆ ಹೇಳಿ ಮಾಡಿಸಿದಂತಿದೆ. ಸ್ತ್ರೀ ಹಾಗೂ ಹಾಸ್ಯ ವೇಷಗಳಿಲ್ಲದ ಕಾರಣ ಎಲ್ಲಿ ಸಪ್ಪೆಯಾಗುವುದೋ ಎಂಬ ಆತಂಕಕ್ಕೂ ಅವಕಾಶವಿಲ್ಲ. ದ್ರೋಣಾಚಾರ್ಯರು ರಾತ್ರಿ ಯುದ್ಧವನ್ನೇ ಘೋಷಿಸಿದ್ದರಿಂದ ಕಥೆ ನಡೆಯುವುದೂ ನಟ್ಟಿರುಳಲ್ಲಿಯೇ. 

ಅದೊಂದು ವಿಶಿಷ್ಟ ಪ್ರಸಂಗ. ಸ್ತ್ರೀವೇಷ ಹಾಗೂ ಹಾಸ್ಯಗಾರರಿಲ್ಲದೆಯೂ ಅದ್ಭುತ ರಂಜನೆ ನೀಡಿತು. ಮುಖ್ಯ ಭೂಮಿಕೆಯ ಕಲಾವಿದರೇ ತಮ್ಮ ವಾಕ್ಚಾತುರ್ಯ, ಅಭಿನಯದ ಮೂಲಕ ನಕ್ಕು ನಗಿಸಿದರು. ಗಜಮೇಳ ಎಂದೇ ಹೆಸರಾದ  ಹನುಮಗಿರಿ ಶ್ರೀ ಕೋದಂಡರಾಮ  ಕೃಪಾಪೋಷಿತ ಯಕ್ಷಗಾನ ಮಂಡಳಿ ಬಾರಕೂರು ಸಮೀಪದ ಹೊಸಾಳದಲ್ಲಿ ಮಾ. 8ರಂದು ಮಾಡಿದ ರಂಗ ಪ್ರಯೋಗವಿದು. ಕಾಲಮಿತಿಯ ಯಕ್ಷಗಾನ ಬಯಲಾಟಗಳನ್ನೇ ಆಡುವ ಮೇಳ ಇಲ್ಲಿ ಮೂರು ಪ್ರಸಂಗಗಳ ಮೂಲಕ ಇಡೀ ರಾತ್ರಿ ರಂಜನೆ ಒದಗಿಸಿತು. ಮೊದಲಿಗೆ “ಗಜೇಂದ್ರ ಮೋಕ್ಷ’ ಪದ್ಯಾಣ ಗಣಪತಿ ಭಟ್ಟರ ಮಾಧುರ್ಯಪೂರ್ಣ ಹಾಡುಗಳ ಮೂಲಕ ರಂಜಿಸಿತು. ಬಳಿಕ “ಕನಕಾಂಗಿ ಕಲ್ಯಾಣ’ ಸಂತೋಷ ಕುಮಾರ್‌ ಹಿಲಿಯಾಣ (ಕನಕಾಂಗಿ), ದಿವಾಕರ ರೈ ಸಂಪಾಜೆ (ಅಭಿಮನ್ಯು) ಅವರ ನೃತ್ಯಗಾರಿಕೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೀತಾರಾಮ ಕುಮಾರ ಕಟೀಲು ಹಾಗೂ ಬಂಟ್ವಾಳ ಜಯರಾಮ ಆಚಾರ್ಯರ ಹಾಸ್ಯದ ಮೂಲಕ ಮನಗೆದ್ದಿತು. ಬಡಗು ಶೈಲಿಯ ಕಿರೀಟ ತೊಟ್ಟಿದ್ದ ಸೀತಾರಾಮ ಕುಮಾರರ ವಿದ್ವತೂ³ರ್ಣ ಚಾಟೂಕ್ತಿಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆಯೂ ಸಿಕ್ಕಿತು. ಯುವ ಭಾಗವತ ಆಕಾಶ್‌ ಕಾಶಿ ಅವರ ಗತ್ತಿನ ಹಾಡುಗಳೂ ಚೆನ್ನಾಗಿದ್ದವು. ಸುಭದ್ರೆ (ಎಂ.ಕೆ. ರಮೇಶ ಆಚಾರ್ಯ), ಬಲರಾಮ (ಶಿವರಾಮ ಜೋಗಿ), ಘಟೋದ್ಗಜ ಹಾಗೂ ಕೌರವ ಪಾತ್ರಧಾರಿಗಳೂ ಉತ್ತಮ ಅಭಿನಯ ನೀಡಿದರು.

ವಿಜೃಂಭಿಸಿದ ಪೆರ್ಮುದೆ
“ಮಾಯಾ ಮಾರುತೇಯ’ ಪ್ರಸಂಗ ಅಪೂರ್ವವೂ ವಿಶಿಷ್ಟವೂ ಆಗಿ ಕಲಾವಂತಿಕೆ ಮೆರೆಯಿತು. ಕೌರವ ಪಾತ್ರಧಾರಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ಪೀಠಿಕೆಯಿಂದಲೇ ವಿಜೃಂಭಿಸಿದರು. ಕುರುಕ್ಷೇತ್ರ ಯುದ್ಧದ ಹದಿನಾಲ್ಕು ದಿನಗಳು ಕಳೆದರೂ ಮಹತ್ವದ ಯಾವ ಸಾಧನೆಯೂ ಆಗಲಿಲ್ಲ ಎಂಬ ಹಳಹಳಿಕೆ, ಭೀಷ್ಮ – ದ್ರೋಣಾದಿಗಳು ಸಾವಿರಗಳ ಲೆಕ್ಕದಲ್ಲಿ ಸೈನಿಕರನ್ನು ತರಿದರೂ ತನಗೆ ಬೇಕಾದ ತಲೆಗಳನ್ನು ತೆಗೆಯಲಿಲ್ಲ ಎಂಬ ಅಸಮಾಧಾನ, ತನ್ನವರ ಮೇಲೆಯೇ ಅನುಮಾನ, ಸತತ ಸೋಲಿನಿಂದಾದ ಅವಮಾನ, ಅದೇ ಕಾರಣಕ್ಕಾಗಿ ಭುಸುಗುಡುವ ಸಿಟ್ಟು, ಹತಾಶೆಯ ನಿಟ್ಟುಸಿರು, ಅಸಹಾಯಕತೆ, ದುಃಖ, ಆಗಾಗ ನುಸುಳುವ ಅಹಂಕಾರ – ಎಲ್ಲವನ್ನೂ ಅನುಭವಿಸಿ ಅಭಿನಯಿಸಿದ ಪೆರ್ಮುದೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರು. “ಎಲ್ಲರೂ ಹೆಸರಿಗಾಗಿ ಹೆಣಗಾಡುತ್ತಿದ್ದಾರೆ, ಇನ್ನು ನನ್ನ ಹೆಣವೇ ಬೀಳುತ್ತದೆ’  ಎನ್ನುವಲ್ಲಿನ ಚಾತುರ್ಯ, ಆಲಂಪುಷ ಪಾತ್ರಧಾರಿ (ಶಬರೀಶ ಮಾನ್ಯ) “ನಾವು ರಾಕ್ಷಸರು’ ಎಂದಾಗ “ನೋಡಿದರೇ ತಿಳಿಯುತ್ತದೆ’ ಎಂದುತ್ತರಿಸಿ ನಗು ಉಕ್ಕಿಸಿದ ರೀತಿ ಅನನ್ಯ.

ತೂಕದ ಅಭಿನಯ ಹಾಗೂ ಸುಸ್ಪಷ್ಟ  ವಾಗ್ಝರಿಯಿಂದ ಜಯಾನಂದ ಸಂಪಾಜೆ ಅರ್ಜುನನಾಗಿ ಮಿಂಚಿದರು. ಕೃಷ್ಣನಾಗಿ ಪೆರ್ಲ ಜಗನ್ನಾಥ ಶೆಟ್ಟರು ಮಾತಿನಿಂದಲೇ ಮೋಡಿ ಮಾಡಿದರು. ಕರ್ಣನ ಪಾತ್ರಕ್ಕೆ ಸುಬ್ರಾಯ ಹೊಳ್ಳರು ಜೀವ ತುಂಬಿದರು. ಘಟೋದ್ಗಜನ ಚಮತ್ಕಾರಿ ವಿದ್ಯೆಯ ಕಾರಣಕ್ಕೆ ಗೆಳೆಯ ಕೌರವನನ್ನೇ ಅನುಮಾನಿಸಿ ಥಳಿಸುವ ಸನ್ನಿವೇಶವನ್ನು ಅವರು ಕಟ್ಟಿಕೊಟ್ಟ ರೀತಿಯಿಂದ ಸುಯೋಧನನ ಮೇಲೆ ಒಂದು ಕ್ಷಣಕ್ಕೆ ಮರುಕ ಉಂಟಾಗಿದ್ದು ಸುಳ್ಳಲ್ಲ. ಅವರ ನಾಟ್ಯ, ಅಭಿನಯ ಹಾಗೂ ಮಾತಿನ ಗತ್ತೇ ಪ್ರಸಂಗವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತು. ಸಾತ್ಯಕಿಯಾಗಿ ವೇಣೂರು ಸದಾಶಿವ ಕುಲಾಲರ ಎನರ್ಜಿ ಅದ್ಭುತವಾಗಿತ್ತು. ಕರ್ಣ ಹಾಗೂ ಸಾತ್ಯಕಿಯ ಯುದ್ಧದ ಸನ್ನಿವೇಶವೂ ಚೆನ್ನಾಗಿ ಮೂಡಿಬಂತು.

ಸ್ಪರ್ಧಾತ್ಮಕ ಅಭಿನಯ
ವಿಶಿಷ್ಟ ಬಣ್ಣಗಾರಿಕೆ ಹಾಗೂ ಹಾಸ್ಯ ಮತ್ತು ಶೌರ್ಯಭರಿತ ಮಾತುಗಳಿಂದ ಘಟೋದ್ಗಜನ  ಪಾತ್ರಕ್ಕೆ ಸಿದ್ದಕಟ್ಟೆ  ಸದಾಶಿವ ಶೆಟ್ಟಿಗಾರರು ನ್ಯಾಯ ಒದಗಿಸಿದರು. ದ್ರೋಣನಾಗಿ ವಾಸುದೇವ ರಂಗಾಭಟ್ಟರ ಗಾಂಭೀರ್ಯ, ಪೋಷಾಕು, ಮುಖವರ್ಣಿಕೆ, ಮಾತುಗಳು – ಎಲ್ಲವೂ ಪ್ರಬುದ್ಧ. ಅಶ್ವತ್ಥಾಮನ ಪಾತ್ರ ಸಣ್ಣದಾದರೂ ರಂಗದಲ್ಲಿ ಮಿಂಚು ಹರಿಸಿತು. ದ್ರೋಣ, ಕರ್ಣ ಹಾಗೂ ಕೌರವರ ಮಧ್ಯೆ ಘಟೋದ್ಗಜನು ತನ್ನ ಮಾಯಾ ವಿದ್ಯೆಯಿಂದ ಗೊಂದಲವೆಬ್ಬಿಸಿ, ಕೌರವನನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಚಮತ್ಕಾರದ ಸನ್ನಿವೇಶವಂತೂ ನಗುವಿನ ರಸದೌತಣವನ್ನೇ ಉಣಬಡಿಸಿತು. ನಾಲ್ವರೂ ಕಲಾವಿದರು ಸ್ಪರ್ಧೆಗೆ ಇಳಿದವರಂತೆ ಪ್ರೌಢಿಮೆ ಮೆರೆದರು. ಆಂಗಿಕ ಅಭಿನಯ, ಧ್ವನಿಯಲ್ಲಿ ಏರಿಳಿತ ಎಲ್ಲವೂ ಪೂರಕವಾಗಿ ಪರಿಣಮಿಸಿದವು. ಚೈತನ್ಯಕೃಷ್ಣ ಪದ್ಯಾಣರ ಚೆಂಡೆಯ ಇನಿದನಿಯ ಜತೆಗೆ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರ ಮಾಧುರ್ಯಪೂರ್ಣ ಭಾಗವತಿಕೆ ಕಿವಿಗೆ ಇಂಪು ಸುರಿಯಿತು.

ಅನಂತ ಹುದೆಂಗಜೆ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.